ಪುಟ:Kannada-Saahitya.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ಕನ್ನಡ ಸಾಹಿತ್ಯ ಚಿತ್ರಗಳು ಶತ್ರುವಿನ ನಗೆ ನೀನೆ ನನಗೆ ಮೃತ್ಯುವಾಗುವುದು ಸರಿಯೇ ? ನನ್ನನ್ನು ಕೊಲ್ಲದೆ ಬಿಟ್ಟು ಕಳಿಸು. ನೀನು ಕೇಳಿದ್ದು ಕೊಡುತ್ತೇನೆ, ಅಗ್ರಹಾರ ಮಾನ್ಯಾದಿಗಳು ಬೇಕೆ ? ಏಕಾವಳಿಯಲಂಕಾರಗಳು ಬೇಕೇ ? ರಥ ಬೇಕೆ ? ಲಲನೆಯರು ಬೇಕೆ ? ಏನು ಬೇಕು ಹೇಳು, ನಾನು ಅರಮನೆಯಲ್ಲಿ ಅದ ನೆಲ್ಲ ನಿನಗೆ ಈಸಿ ಕೊಡುತ್ತೇನೆ, ಈಗಲಾದರೂ ಬಿಡು ನನ್ನನ್ನು ” ಎಂದು ಕಾಡಿದನು. ಪಾರ್ಥನ ಸಮ್ಮತಿ ಸದಿರಲು, “ ಎಲೆ ಬೃಹನ್ನಳೇ, ನಮ್ಮ ತಂದೆ ನಿನ್ನನ್ನು ಕಾಪಾಡಿದ್ದಕ್ಕೆ ಬಹುಬೇಗ ಪ್ರತ್ಯುಪಕಾರ ಮಾಡಿದೆ. ಕಲ್ಲು ಮನಸ್ಸಿನವನಾದೆಯಲ್ಲಾ !?” ಎಂದು ನಿಟ್ಟುಸಿರು ಬಿಡುತ್ತ ನಿಂದಿಸಿದನು. . “ಎಲಾ, ದೊರೆಗಳ ಹೊಟ್ಟೆಯಲ್ಲಿ ಹುಟ್ಟಿ ಕಾಳಗದಲ್ಲಿ ಹೀಗೆ ಒಡಲಿ ನಾಸೆಗೆ ಮರುಗಿದವರು ಹಿಂದೂ ಇಲ್ಲ, ಮುಂದೂ ಇಲ್ಲ. ಮನುಷ್ಯ ಬಂಜೆ ಮಾತನ್ನಾಡಬಹುದೆ ? ೬೦ಥವನ ಬಾಳನ್ನು ಸುಡಬೇಕು ! ಎಲವೋ ರಾಜ ಬಾಹಿರ, ರಥದ ಬಳಿಗೆ ನಡೆ, ನೀನೇನು ಕಾದಬೇಡ, ಬಾ, ಮಾರ್ಬಲ ದೊಡನೆ ನಾನು ಕಾಳಗ ಮಾಡುತ್ತೇನೆ. ನೀನು ಸಾರಥಿಯಾಗು ; ಸಾಕು !! ಎಂದು ಉತ್ತರನಿಗೆ ಧೈರ್ಯ ಹೇಳಿ ಅವನ ಅಂಜಿಕೆಯನ್ನು ಹೋಗಲಾಡಿ ಸಲು ಯತ್ನಿಸಿದನು. - ಉತ್ತರನಿಗೆ ನಂಬಿಕೆಯಾಗಲಿಲ್ಲ. ತನ್ನನ್ನು ಕಣಕ್ಕೆ ನೂಕಲು ಇದು ಇನ್ನೊಂದು ತಂತ್ರವೆಂದು ಭಾವಿಸಿದನು. ಈ ಮೊದಲು ನೀನು ಯಾವ ರಾಜರನ್ನು ಕಾದಿ ಗೆದ್ದಿರುವೆ ? ಸುಲು ಬೃಹನ್ನಳೇ, ನೀನು ನಪುಂಸಕ. ನಿನಗೆ ಈ ಕದನ ನಾಟ್ಯ ವಿದ್ಯವಲ್ಲ. ನನ್ನ ಓರಗೆಯ ಹುಡುಗರಿಗೆ ಇನ್ನೂ ತೇರು ನಡೆಸುವುದಕ್ಕೆ ಬರುವುದಿಲ್ಲ. ನನ್ನನ್ನು ಸಾರಥಿ ಮಾಡಿಕೊಂಡು ಈ ಬಲವನ್ನು ಜಯಿಸುವೆಯಾ ? ಚೆನಾಯು, ಈ ಉಪಾಯ ಸಾಕು. ನನ್ನನ್ನು ಕಳಿಸಿಬಿಡು ” ಎಂದು ಮತ್ತೆ ಅದೇ ರಾಗ ಎತ್ತಿದನು. ಅರ್ಜುನನಿಗೆ ಇನ್ನು ತಡೆಯಲಾಗಲಿಲ್ಲ. ಈ ಎಲವೋ ! ಸಾರಥಿ ಯಾಗು, ನಡೆ, ಇನ್ನೇನಾದರೂ ಗಳಹಿದೆ, ನಿನ್ನ ಕಟವಾಯಿ ಕುಯ್ದು ಬಿಡುತ್ತೇನೆ. ಮಾರೆಡ್ಡಿ ನಿಂತಿರುವ ಈ ಪ್ರತಿಭಟರನ್ನೆಲ್ಲ ಕೊಲ್ಲು ¥ನೆ ; ನಿನ್ನಾಣೆ, ಆಮೇಲೆ ನಗುವೆಯಂತೆ ! ಈಗ ತೆಪ್ಪಗಿರು ” ಎಂದು