ಪುಟ:Kannada-Saahitya.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉತ್ತರ ಕುಮಾರ ಬಿರುನುಡಿ ನುಡಿದು ಜುಟ್ಟು ಹಿಡಿದುಕೊಂಡು ಹೆಡತಲೆಯನ್ನು ಅವುಕಿ ಎಳೆದುಕೊಂಡು ಬಂದು ರಥದ ಮೇಲೆ ಹತ್ತಿಸಿದನು. ಬಳಿಳ, ಅಂಜಿದ ಉತ್ತರನಿಗೆ ಪರಿಪರಿಯಾಗಿ ಭೈರಹೇಳಿ ಕಲಿಯಾಗಿ ಮಾಡಿಕೊಂಡು ತಮ್ಮ ಶಸ್ತ್ರಾಸ್ತ್ರಗಳನ್ನಿಟ್ಟಿದ್ದ ಶಮಿಯ ಬಳಿಗೆ ಕರೆದುಕೊಂಡು ಹೋದನು. ಬನ್ನಿ ಯ ಮರದ ಬಣ ರಘದಿಂದಿಳಿದು, “ ಈ ಮರದ ಮೇಲೆ ಪಾಂಡ ವರು ತಮ್ಮ ಶಸ್ತ್ರಾಸ್ತ್ರಗಳನ್ನಿಟ್ಟಿದ್ದಾರೆ. ಮರ ಹತ್ತಿ ಸೆಗೆದುಕೊಡು ” ಎಂದು ಉತ್ತರವನ್ನು ಕೇಳಿದನು. ಉತ್ತರನಿಗೆ ಮರದ ಕೊಂಬೆಯಿಂದ ನೇತಾಡುವ ಹೆಣವೊಂದಲ್ಲದೆ ಮತ್ತೇನೂ ಕಾಣಿಸಲಿಲ್ಲ. “ ಬೃಹನ್ನಳೇ, ಆರಸು ಮಕ್ಕಳು ಹೆಣ ಮುಟ್ಟುವುದು ಅನುಚಿತ, ಬೇರೆ ಯಾವ ಕೆಲಸವನ್ನಾದರೂ ಹೇಳು, ಮಾಡುತ್ತೇನೆ” ಎಂದನು. ಅದು ಹೆಣವಲ್ಲವೆಂದೂ ಮೇಲುಗಡೆ ತೊಗಲು ಬಿಗಿದಿರುವ ಆಯುಧಗಳ ಕಟ್ಟಿಂಗೂ ಅರ್ಜುನ ತಿಳಯಹೇಳಲು ಉತ್ತರ ಮರ ಹತ್ತಿದನು, ಹತ್ತಿ ಕಟ್ಟಿನ ಹುರಿಗಳನ್ನು ಹರಿದನು. ಕೂಡಲೆ ಬರಸಿಡಿಲಿನಂತೆ ಮಸಗುವ ಆ ದಿವ್ಯಾಯುಧಗಳ ತೀವ್ರ ಪ್ರಭೆಯಲ್ಲಿ ಸಿಕ್ಕಿಕೊಂಡು ನೋಡ ಲಾರದೆ ನಡುಗುತ್ತ ನಿಂತನು. ಮುಟ್ಟಲಾರ, ಬಿಟ್ಟಳಿಯಲೂ ಆರ. ಬಿಡಿಸಿ ಕೊಳ್ಳೆಂದು ಸಾರಥಿಗೆ ಮೊರೆಯಿಟ್ಟನು. ಸಾರಥಿ ಅರ್ಜುನನ್ನು ನೆನೆಯುತ್ತ ಕೈ ಯಿಕ್ಕಿದರೆ ಆಯುಧಗಳು ವಶನಾಗುವುದೆಂದು ತಿಳಿಸಿ ಅಂಜಿಕೆಯನ್ನು ಹೋಗಲಾಡಿಸಿದನು. ಉತ್ತರ ಕುಮಾರ ಪಾರ್ಥನನ್ನು ಸ್ಮರಿಸುತ್ತ ಕೈ * ಒಡಲು ಉಗ್ರಾಯುಧಗಳು ಸೌಮ್ಯವಾದವು. ರಾಜ ಪುತ್ರನು ಒಂದೊಂದಾಗಿ ಆಯುಧಗಳನ್ನು ಎತ್ತಿ ಕೊಡಲು ಮೊದಲು ಮಾಡಿದನು. ಎತ್ತ ಹೋದರೆ ಒ೦ದೂ ಸುಭವಾಗಿ ಕೈಗೆ ಬಾರದು. ತನ್ನ ಬಲವನ್ನೆಲ್ಲ ಬಿಟ್ಟು ಅವುಕ್ಕಿ, ಕಷ್ಟ ಪಟ್ಟು ತೆಕ್ಕೆಯಲ್ಲಿ ತಬ್ಬಿ ತೆಗೆದುಕೊಡುವುದ ರಲ್ಲಿ ಉತ್ತರನಿಗೆ ಸಾಕುಸಾಕಾಯಿತು ; ಮೈ ಬೆವರಿಟ್ಟಿತು ; ಅಳ್ಳೆ ಹೊಡೆದ ಕೊಳ್ಳತೊಡಗಿತು. ಅಷ್ಟು ಕಷ್ಟ ಪಟ್ಟು ಎತ್ತಿ ಕೊಟ್ಟ ಬಿಲ್ಲನ್ನು ಬೃಹನ್ನಳೆ ಸ್ವಲ್ಪವೂ ಆಯಾಸವಿಲ್ಲದೆ ಲೀಲೆಯಿಂದ ಹಿಡಿದಾಡಿಸುವುದನ್ನು ಕಂಡು ಅತ್ಯಾಶ್ಚರ್ಯವಾಯಿತು. “ನೀನು ಸಮರ್ಥ, ನಿನಗೆ ಶರಣು ” ಎಂದು ಅವನಿಗೆ ಕೈ ಮುಗಿದನು, ಆಮೇಲೆ ಆ ಆಯುಧಗಳಲ್ಲಿ ಯಾವಯಾವುದು ಯಾರು