ಪುಟ:Kannadigara Karma Kathe.pdf/೧೧೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಜಾಜ್ವಲ್ಯವೃತ್ತಿಯು
೧೦೩
 

ಅದನ್ನು ನಾನು ಇಲ್ಲಿಂದಲೇ ಕೇಳಿ ಆತನನ್ನು ಕೆರಸಿಕೊಂಡು, ಆತನ ಎಲ್ಲ ವೃತ್ತಾಂತವನ್ನು ಕೇಳಿಕೊಂಡೆನು. ಆಗ ನನಗೆ ಸರ್ವಾಂಗದಲ್ಲಿ ಸಂತಾಪವು ಉತನ್ನವಾಯಿತು. ಕೂಡಲೆ ನಾನು ನಿನ್ನನ್ನು ಕರೆಯಕಳಿಸಿದೆನು. ಈಗ ಆ ಮನುಷ್ಯನನ್ನು ಇಲ್ಲಿಗೇ ಕರೆಸುತ್ತೇನೆ. ನೀನು ಆತನ ಮುಖದಿಂದ ಎಲ್ಲ ವೃತ್ತಾಂತವನ್ನು ಕೇಳಿಕೋ, ಎಂದು ಹೇಳಿ ಮಾಸಾಹೇಬರು ಆ ಮನುಷ್ಯರನ್ನು ಕರೆಯಲಿಕ್ಕೆ ತಮ್ಮ ದಾಸಿಯನ್ನು ಕಳಿಸಿದರು.

ದಾಸಿಯು ಕರೆದ ಕೂಡಲೆ, ಆ ಮನುಷ್ಯನು ಬಂದು ರಣಮಸ್ತ ಖಾನನ, ಹಾಗು ಆತನ ತಾಯಿಯ ಮುಂದೆ ಮೊಣಕಾಲೂರಿ, ಮೂರು ಮೂರು ಸಾರೆ ನೆಲಕ್ಕೆ ಹಣೆ ಹಚ್ಚಿ ತನ್ನ ತಲೆಯಮೇಲಿನ ಮುಂಡಾಸವನ್ನು ತೆಗೆದಿಟ್ಟು, ಕೈಜೋಡಿಸಿ ಗರೀಬ ಪರವರ, ಅಹಮ್ಮದನಗರದ ಸರದಾರನಾದ ಹುಸೇನ ಅಲಿ ಎಂಬುವನ ಮಗಳು, ವಿಜಾಪುರದಲ್ಲಿರುವ ತನ್ನ ಅಬಜಿಯ ಮನೆಗೆ, ನಾಲ್ಕು ದಿನ ಇದ್ದು ಬರಬೇಕೆಂದು ಹೊರಟಿದ್ದಳು ಸಂಗಡ ೮-೦೦ ಜನರನ್ನು ಕರಕೊಂಡು ಸ್ವತಃ ಆಕೆಯ ತಂದೆಯು ಬಂದಿದ್ದನು. ನಮ್ಮ ಸಂಗಡ ಶಸ್ತ್ರಾಸ್ತ್ರಗಳು ಇದ್ದವು ಹೀಗೆ ಒಳ್ಳೆ ಬಂದೋಬಸ್ತಿನಿಂದ ನಾವು ವಿಜಯನಗರದ ರಾಜ್ಯದ ಗಡಿಯಲ್ಲಿ ಬರಲು, ವಿಜಯನಗರದ ಕೆಲವು ಪುಂಡರು, ನಮ್ಮನ್ನೂ ನಮ್ಮ ಸಂಗಡಿಗರಾದ ಬೇರೆ ಪ್ರವಾಸಿಗರನ್ನೂ ಸುಲಿದರು. ನಮ್ಮ ಬಳಿಯಲ್ಲಿಯ ಒಂದು ಪೈಯನ್ನೂ, ಒಂದು ಚಲೋ ಅರಿವೆಯನ್ನು ಸಹ ಅವರು ಬಿಡಲಿಲ್ಲ. ಸುಲಿಸಿ ಕೊಂಡವರಲ್ಲಿ ಹೆಂಗಸರು ನಾಲ್ಕು ಜನರಿದ್ದರು. ನಮ್ಮ ಹುಸೇನ ಅಲಿಯ ಹದಿನೇಳು ವರ್ಷದ ಮಗಳೊಬ್ಬಳು. ಆಕೆಯ ದಾಸಿಯರಿಬ್ಬರು. ಇನ್ನೊಬ್ಬ ಗೃಹಸ್ಥನ ಹೆಂಡತಿಯೊಬ್ಬಾಕೆಯು. ಸುಲಿಗೆಯಾದ ಮೇಲೆ ದಾರಿಸಿಕ್ಕತ್ತ ನಮ್ಮ ಸಂಗಡಿಗರೆಲ್ಲರು ಓಡಿಹೋಗಿಬಿಟ್ಟರು. ನಮ್ಮ ಜನರು. ಯಜಮಾನನ, ಹಾಗು ಆತನ ಮಗಳ ಸಂರಕ್ಷಣದ ಸಲುವಾಗಿ ಬಹಳ ಹೆಣಗಾಡಿದರು. ಹೊಡೆದಾಟದಲ್ಲಿ ನಮ್ಮ ಒಡೆಯನಾದ ಹುಸೇನ ಅಲಿಖಾನನು ಮರಣ ಹೊಂದಿದನು. ಅದರಂತೆ ಬೇರೆ ಏಳೆಂಟು ಜನರು ಮರಣಹೊಂದಿದರು. ನಮ್ಮ ಸರದಾರನ ಮಗಳನ್ನೂ ಆಕೆಯ ಇಬ್ಬರು ದಾಸಿಯರನ್ನೂ ನಮ್ಮಿಬ್ಬರನ್ನೂ ಅ ದುಷ್ಟರು ಸೆರೆಹಿಡಿದು, ರಾಜದರ್ಬಾರಕ್ಕೆ ಕರಕೊಂಡು ಹೋಗಲು ನಿಶ್ಚಯಿಸಿದರು. ಇನ್ನು ಗುದ್ದಾಡಿದರೆ ಪ್ರಯೋಜನವಾಗದೆಂದು ತಿಳಿದು ನಾವು ಸುಮ್ಮನೆ ಆ ತುಂಟರ ಆಧೀನರಾಗಿ, ವಿನಯದ ಸೋಗಿನಿಂದ ಅವರೊಡನೆ ಮಾರ್ಗ ಕ್ರಮಣ ಮಾಡಹತ್ತಿದೆವು. ವಿಜಾಪುರದ ಬಾದಶಹರ ವಕೀಲನು ವಿಜಯನಗರದಲ್ಲಿರುವನೆಂಬುದು ನನಗೆ