ಪುಟ:Kannadigara Karma Kathe.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೮

ಕನ್ನಡಿಗರ ಕರ್ಮಕಥೆ

ಅನ್ಯಾಯ ಮಾಡಿದರೂ, ಅದೊಂದು ತನ್ನ ಮೇಲೆ ದೊಡ್ಡ ಉಪಕಾರವೇ ಆದಂತಾಯಿತೆಂದು ಖಾನನು ತಿಳಿದನು. ರಾಮರಾಜನು ಹಾಗೆ ಮಾಡದಿದ್ದರೆ. ಆ ಸುಂದರಿಯ ರೂಪವು ರಣಸ್ತಖಾನನು ದುರಾಚಾರಕ್ಕೆ ಮನಸ್ಸು ಮಾಡುವಂಥ ಕ್ಷುದ್ರನಿದ್ದನೆಂದಾಗಲಿ, ರಾಮರಾಜನ ಮೇಲಿನ ಯಾವತ್ತು ಸಿಟ್ಟನ್ನು ಆ ತರುಣ ಮುಸಲ್ಮಾನನು ಬಿಟ್ಟುಬಿಟ್ಟನೆಂದಾಗಲಿ ವಾಚಕರು ಭಾವಿಸಬಾರದು. ಆದರೆ ಮನುಷ್ಯ ಸ್ವಭಾವಕ್ಕನುಸರಿಸಿ, ಆ ತರುಣನ ಮನಸ್ಸು ಆ ತರುಣಿಯ ಸೌಂದರ್ಯದಿಂದ ಆಕರ್ಷಿತವಾಗಲು, ಆ ಗೊಂದಲದಲ್ಲಿ ಆತನ ಮನಸ್ಸು ಅನ್ಯ ವಿಚಾರಗಳನ್ನು ಬಿಟ್ಟು, ಆ ಸುಂದರಿಯ ವಿಷಯದ ವಿಚಾರದಲ್ಲಿಯೇ ತೊಡಗಿತೆಂದು ತಿಳಿಯಬೇಕು. ಹಾದಿಯಲ್ಲಿ ಹೋಗು ಹೋಗುತ್ತ ಇದೊಂದೇ ವಿಚಾರಕ್ಕೆ ಆತನಿಗೆ ಆಸ್ಪದ ದೊರೆತದ್ದರಿಂದ ಆತನು ವಿಚಾರ ಮಾಡುತ್ತ ಮಾಡುತ್ತ ಬಹು ದೂರದ ವಿಚಾರಕ್ಕೆ ಹೋಗಹತ್ತಿದನು. ಈ ಸುಂದರಿಯು ಜನ್ಮದ ಸಂಗಾತಿಯು ತನಗಾದರೆ ಧನ್ಯನಾದೇನಲ್ಲ, ಎಂತಲೂ ಆತನು ಭಾವಿಸಹತ್ತಿದನು. ನಮ್ಮಿಬ್ಬರ ಸಂಘಟನದ ಯೋಗವಿರುವದರಿಂದಲೇ ಆ ಆಕಸ್ಮಿಕ ಪ್ರಸಂಗವು ಒದಗಿತೆಂದು ಅತನು ತಿಳಕೊಂಡನು. ಆದರೆ ಈ ಮಾತು ಹ್ಯಾಗೆ ಕೂಡಿಬರಬೇಕೆಂಬ ಸಂಶಯದಿಂದ ಆತನು ನಡುನಡುವೆ ಸ್ವಲ್ಪ ಉದಾಸೀನನಾದನು. ಆಕೆಯು ದೊಡ್ಡ ಸರದಾರನ ಮಗಳಾದದ್ದರಿಂದ ನನ್ನ ಕೈ ಹಿಡಿಯುವ ಸಂಭವವಿಲ್ಲೆಂಬ ನಿರಾಸೆಯು ಆತನನ್ನು ಬಾಧಿಸಹತ್ತಿತು ; ಆದರೂ ಈಕೆಯನ್ನು ವಿಜಾಪುರಕ್ಕೆ ಈಕೆಯ ಅಬಚಿಯ ಮನೆಗೆ ಕಳಿಸುವದರೊಳಗ ಈಕೆಯ ಮನಸ್ಸಿನೊಳಗಿದ್ದದ್ದನ್ನು ತಿಳಕೊಳ್ಳಬೇಕೆಂದು ಆತನು ನಿಶ್ಚಯಿಸಿದನು. ರಾಮರಾಜನಿಂದ ನಮ್ಮಿಬ್ಬರಿಗೂ ಆದ ಅಪಮಾನದ ಸೇಡು ತೀರಬೇಕಾದರೆ, ನಮ್ಮಿಬ್ಬರ ವಿವಾಹವಾಗುವದೇ ಅನುಕೂಲವೆಂದು ಆತನು ತಿಳಿದನು. ಹಾದಿಯಲ್ಲಿ ನಡೆಯುವಾಗೆಲ್ಲ ಇವೇ ವಿಚಾರಗಳು ರಣಮಸ್ತಖಾನನ ಮನಸ್ಸಿನಲ್ಲಿ ನಡೆದಿದ್ದವು. ಆ ಸುಂದರಿಯ ಮನಸ್ಸಿನೊಳಗಿದ್ದದ್ದನ್ನು ಆಕೆಯು ದಾಸಿಯ ಮುಖಾಂತರವಾಗಿ ಇಲ್ಲವೆ ತನ್ನ ತಾಯಿಯ ವೃದ್ದ ದಾಸಿಯ ಮುಖಾಂತರವಾಗಿ ತಿಳಕೊಳ್ಳಬೇಕೆಂದು ಆತನು ಗೊತ್ತುಮಾಡಿದನು. ಮುಂದೆ ಕೆಲವು ಹೊತ್ತಿನ ಮೇಲೆ ಅವರೆಲ್ಲರು ಕುಂಜವನವನ್ನು ಮುಟ್ಟಿದರು. ರಣಮಸ್ತಖಾನನು ಆ ತರುಣಿಯನ್ನು ತನ್ನ ತಾಯಿಯ ಬಳಿಗೆ ಕಳಿಸಿ, ಆಕೆಯ ಯಾವತ್ತು ಯೋಗಕ್ಷೇಮದ ಬಗ್ಗೆ ಅನುಕೂಲ ಮಾಡಿಕೊಟ್ಟನು. ಆಮೇಲೆ ರಣಮಸ್ತಖಾನನ ಊಟವಾಯಿತು, ಬಂದ ಜನರೂ ಉಂಡರು.

ಇತ್ತ ರಾಮರಾಜನು ಬಹಳ ಪಶ್ಚಾತ್ತಾಪಕ್ಕೆ ಒಳಗಾಗಿದ್ದನು. ಆತನ ಮನಸ್ಸಿಗೆ