ಪುಟ:Kannadigara Karma Kathe.pdf/೧೪೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ವಿಲಕ್ಷಣ ಭಾವನೆ
೧೩೧
 

ಮಾಡಹತ್ತಿದ್ದಾಳೆ. ಆಕೆಯ ಸ್ಥಿತಿಯನ್ನು ನೋಡಿದರೆ, ಆಕೆಯು ಇಲ್ಲಿಂದ ಹೋಗುವ ಹಾಗೆ ತೋರುವದಿಲ್ಲ.

ರಣಮಸ್ತಖಾನ-ಏನಂದಿ ? ಆಕೆಯು ಇಲ್ಲಿಂದ ಹೋಗುವಹಾಗೆ ಕಾಣುವದಿಲ್ಲವೆ ? ಹಾಗಾದರೆ ಆಕೆಯು ಇಲ್ಲಿಯೇ ಇರುತ್ತಾಳೋ ಏನು ?

ದಾಸಿ-ಹೌದು, ಆಕೆಯು ಇಲ್ಲಿಯೇ ಇರುವಂತೆ ತೋರುತ್ತದೆ. ಇಂದು ಮುಂಜಾನೆ ನನ್ನ ಮುಂದೆ ಆಕೆಯು-ಮಾಸಾಹೇಬರ ಸಹವಾಸದಲ್ಲಿಯೇ ನನ ಜನ್ಮವನ್ನು ಕಳೆಯುವ ಪ್ರಸಂಗ ಬಂದರೆ, ನಾನು ಧನ್ಯಳಾಗುವೆನು, ಎಂದು ಹೇಳಿದಳು, ನಿಮ್ಮನ್ನಂತು ಆಕೆಯು “ನವಾಬ ಸಾಹೇಬರು” ಎಂದು ಕರೆದ ಹೊರತು ಬಾಯಿ ಎತ್ತುವದಿಲ್ಲ.

ರಣಮಸ್ತಖಾನ-ಶಾಬಾಶ್ ! ಆ ತರುಣಿಯು ಒಳ್ಳೆ ಸುಂದರ ಹೆಸರು ಹುಡುಕಿ ತೆಗೆದಿದ್ದಾಳೆ ಬಿಡು ! ಇದಕ್ಕಾಗಿ ನಾನು ಆಕೆಯನ್ನು ಪ್ರತ್ಯಕ್ಷ ಕಂಡು ಕೃತಜ್ಞತೆಯನ್ನು ಪ್ರಕಟಿಸತಕ್ಕದ್ದು ನೀನು ಅದಷ್ಟು ಸಂಧಿಯನ್ನು ಸಾಧಿಸಿಕೊಳ್ಳುವಹಾಗಿದ್ದರೆ ನೋಡಬಾರದೆ ?

ದಾಸಿ-ಆ ಸಂಧಿಯನ್ನು ಒದಗಿಸಿ ಕೊಡಲಿಕ್ಕೆ ನಾನು ಯಾಕೆ ಬೇಕು ? ಆಕೆಯ ಮನಸ್ಸಿಗೆ ಬಂದರೆ ತಾನಾಗಿ ನಿಮಗೆ ಆ ಸಂಧಿಯನ್ನು ಒದಗಿಸಿ ಕೊಟ್ಟಾಳು ಆಕೆಯ ಎಲ್ಲ ಸ್ಥಿತಿ ರೀತಿಗಳನ್ನು ನೋಡುವದರ ಮೇಲಿಂದ, ಆಕೆಯು ಸ್ವಚ್ಛಂದಿ ವೃತ್ತಿಯವಳಿರುವಂತೆ ನನಗೆ ತೋರುತ್ತದೆ. ಈಗ ಆಕೆಯು ಪುಷ್ಕರಣಿಯ ಕಡೆಗೆ ಹೋಗಿರುತ್ತಾಳೆ.

ದಾಸಿಯ ಈ ಮಾತುಗಳನ್ನು ಕೇಳಿ ರಣಮಸ್ತಖಾನನು ಅಲ್ಲಿ ಬಹಳ ಹೊತ್ತು ನಿಲ್ಲದೆ ಅಲ್ಲಿಂದ ಹೊರಟು ಹೋದನು. ಆ ಸುಂದರಿಯು ಕುಂಜವನದಲ್ಲಿ ಹೋಗಿರುವದರಿಂದ ತಾನು ಅತ್ತ ಕಡೆಗೆ ಹೋಗಬೇಕೆಂದು ಮಾಡಿದನು. ಆದರೆ ಅಪರಿಚಿತ ತರುಣಿಯೊಬ್ಬಳು, ಅಕಸ್ಮಾತ್ತಾಗಿ ತನ್ನ ಮನೆಗೆ ಬಂದಿರಲು, ತಾನು ಆಕೆಯನ್ನು ಏಕಾಂತದಲ್ಲಿ ಕಾಣಲಿಚ್ಛಿಸುವದೂ, ಆಕೆಯೊಡನೆ ಏಕಾಂತದಲ್ಲಿ ಮಾತಾಡುವದೂ ದೊಡ್ಡಸ್ತನಕ್ಕೆ ಒಪ್ಪುವದಿಲ್ಲೆಂಬ ವಿಚಾರವು ಆತನ ಮನಸ್ಸಿನಲ್ಲಿ ಉತ್ಪನ್ನವಾಯಿತು; ಆದರೂ ಆತನು ತನ್ನ ವಿಚಾರವನ್ನು ತಿರುಗಿಸಲಿಲ್ಲ. ದೂರದಿಂದ ಅಕೆಯನ್ನು ನೋಡಿದರೆ ತಪ್ಪೇನು ? ಮುಂದೆ ಪ್ರಸಂಗನೋಡಿ, ನಡೆದರಾಯಿತು, ಎಂದು ಆಲೋಚಿಸುತ್ತಿರಲು, ಮಂದಿರದ ಕಡೆಗೆ ನಡೆದಿದ್ದ ಅವನ ಕಾಲುಗಳು ಮೆಲ್ಲಮೆಲ್ಲನೆ ಕುಂಜವನದೊಳಗಿನ ಪುಷ್ಕರಣಿಯ ಕಡೆಗೆ ಸಾಗಹತ್ತಿದವು. ಆತನು ಹಲವು ಲತಾಮಂಟಪಗಳನ್ನು ಲಕ್ಷ್ಯಪೂರ್ವಕವಾಗಿ ಹುಡುಕಿದನು; ಆದರೆ