ಪುಟ:Kannadigara Karma Kathe.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೦

ಕನ್ನಡಿಗರ ಕರ್ಮಕಥೆ

ನನ್ನ ಶೀಲವು ನನಗೆ ಅತ್ಯಂತ ಪ್ರಿಯವಾಗಿರುವದು. ನಿನ್ನೆ ಒಬ್ಬ ಹಿಂದು ರಾಜನು, ಕೂಡಿದ ದರ್ಬಾರದಲ್ಲಿ ಎಲ್ಲ ಗಂಡಸರ ಮುಂದೆ ನನ್ನ ಲಜ್ಜಾಹರಣವನ್ನು ಮಾಡಿದನು. ಆ ನೀಚನು ಅಷ್ಟಕ್ಕೆ ಸುಮ್ಮನಿರದೆ, ಇಂದು ಬೆಳಗಿನಲ್ಲಿ ನನ್ನನ್ನು ಹರಣ ಮಾಡುವದಕ್ಕಾಗಿ ಈ ಕುಂಜವನಕ್ಕೆ ಬಂದಿದ್ದನು. ನನ್ನ ಶೋಧಮಾಡುತ್ತ ಮೊದಲು ಆತನು ಬಂಗಲೆಗೆ ಬಂದನು. ನಾನು ಕುಂಜವನದಲ್ಲಿರುವೆನೆಂದು ಗೊತ್ತಾದ ಕೂಡಲೇ, ಆತನು ನಿಮ್ಮನ್ನು ಕರೆದುಕೊಂಡು ಇಲ್ಲಿಗೆ ಬಂದನು. ಆ ದುಷ್ಟನು ಚಿಗರೆಯ ಬೇಟೆಯಾಡುವಂತೆ ಕುಂಜವನದ ತುಂಬ ನನ್ನನ್ನು ಹುಡುಕುತ್ತ ತಿರುಗಾಡಿದನು. ನಾನು ಅವನ ಕಣ್ಣಿಗೆ ಬಿದ್ದಿದ್ದರೆ, ಏನು ಮಾಡುತ್ತಿದ್ದನೆಂಬುದನ್ನು ಹೇಳಲಾರೆನು. ನಾನು ಅವನ ಮುಂದೆ ನನ್ನ ಬುರುಕಿಯನ್ನು ತೆಗೆದು ನಿಂತಾಗಿನಿಂದ ಅವನ ಮೈ ಮೇಲಿನ ಎಚ್ಚರವು ತಪ್ಪಿರಲೇಬೇಕು. ಇಲ್ಲದಿದ್ದರೆ ಅವನು ಇಷ್ಟು ಬೇಗನೆ ಕುಂಜವನಕ್ಕೆ ಬರುತ್ತಿದ್ದಿಲ್ಲ. ಇಷ್ಟು ಬೇಗನೆ ಇಲ್ಲಿ ಬರಬೇಕಾದರೆ ನಿನ್ನೆ ಅವನು ಯಾವಾಗ ಹೊರಟಿರಬಹುದೆಂಬದನ್ನು ನೀವೇ ಕಲ್ಪಿಸಿರಿ. ನನ್ನ ಮೇಲೆ ಆತನ ಅಭಿಲಾಷೆಯು ಇಲ್ಲದಿದ್ದರೆ ಆತನು ಇಷ್ಟು ಬೇಗನೆ ಕುಂಜವನಕ್ಕೆ ಬರುತ್ತಿದ್ದನೆ? ಹಿಂದಕ್ಕೆ ಎಂದಾದರೂ ಹೀಗೆ ಬಂದಿದ್ದನೆ ? ಬಂದರೂ ಬರಲಿ, ತಾನು ಯಾತರ ಸಲುವಾಗಿ ಬಂದನೆಂಬದನ್ನು ನಿಮ್ಮ ಮುಂದೆ ಹೇಳಿದನೋ ? ಆತನು ಬಂದು ಏನು ಮಾಡಿದನೆಂಬುದರ ಕಲ್ಪನೆಯಾದರೂ ನಿಮಗೆ ಇರುತ್ತದೆಯೋ ? ಇನ್ನು ಈ ದುಷ್ಟನು ಹೀಗೆಯೇ ಎಷ್ಟು ಜನ ಮುಸಲ್ಮಾನ ತರುಣಿಯರ ಲಜ್ಜಾಹರಣ ಮಾಡುವನು ? ನಿಮ್ಮ ಬಾದಶಹನು ಹೀಗೆಯೇ ಎಷ್ಟುದಿನ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುವನು ? ಗಂಡಸರೆನಿಸುವ ನೀವು ಸುಮ್ಮನೆ ಈ ಅವಿಚಾರತನವನ್ನು ಸಹಿಸುತ್ತ ಹೋಗುವವರೆಗೆ, ನಮ್ಮಂಥ ಅನಾಥ ಅಬಲೆಯರ ಮೇಲೆ ಈ ತೋಳಗಳು ಹೀಗೆ ಮುಗಿಬೀಳುವುದೇ ಸರಿ! ದೂರವೇಕೆ, ಇಲ್ಲಿ ನೋಡಿರಿ, ಆ ದುಷ್ಟನು ನನ್ನ ಬೆನ್ನುಹತ್ತಿ ಇಂದು ಬಂದನೋ ಇಲ್ಲವೋ ? ನೀವು ಆತನ ಸಂಗಡ ಇರದೇ ನಾನು ಆತನ ಕೈಗೆ ಸಿಕ್ಕಿದ್ದರೆ, ಆತನು ನನ್ನನ್ನು ಎಲ್ಲಿಯೋ ಅಡಗಿಸಿ ಇಟ್ಟುಬಿಡುತ್ತಿದ್ದನು. ಆತನು ಒಬ್ಬನೇ ಬಂದಿದ್ದನೆಂದು ನಿಮ್ಮ ತಿಳುವಳಿಕೆಯಾಗಿರಬಹುದು;ಆದರೆ ಈ ಕಾರ್ಯಕ್ಕಾಗಿ ಆತನು ಎಷ್ಟು ಜನರನ್ನು ಕುಂಜವನದ ಹೊರಗೆ ನಿಲ್ಲಿಸಿದ್ದನೆಂಬುದು ನಿಮಗೆ ಗೊತ್ತಿದೆಯೋ ? ನೀವು ಅದರ ಶೋಧ ಮಾಡಿಸಿರುವಿರಾ ? ಇಷ್ಟು ದಿನ ಇಲ್ಲಿ ನೀವು ಇದ್ದರೂ ನಿಮಗೆ ಗೊತ್ತಾಗದ ಒಂದು ಸಂಗತಿಯನ್ನು ನಾನು ಹೇಳುತ್ತೇನೆ ಕೇಳಿರಿ. ಇದೇ ಈ ಕುಂಜವನದಲ್ಲಿ ಈ ದುಷ್ಟ ರಾಮರಾಜನು ಹಿಂದಕ್ಕೆ ನನ್ನಂಥ