ಪುಟ:Kannadigara Karma Kathe.pdf/೧೬೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೪೮
ಕನ್ನಡಿಗರ ಕರ್ಮಕಥೆ
 

ಈವೊತ್ತಿಗೆ ನಮ್ಮ ರಾಜ್ಯದಲ್ಲಿ ಎಷ್ಟೋ ಜನ ಮುಸಲ್ಮಾನ ಸೈನಿಕರನ್ನು ಚಾಕರಿಗೆ ಇಟ್ಟುಕೊಂಡಿರುತ್ತೇವೆ ಅವರಲ್ಲಿ ಈತನೊಬ್ಬನನ್ನೂ ಇಟ್ಟುಕೊಳ್ಳೋಣ. ಪ್ರಸಂಗ ಬಂದರೆ, ಆ ಯಾವತ್ತು ಮುಸಲ್ಮಾನ ಸೈನಿಕರ ಮೇಲೆ ಈಗಿರುವ ಹಿಂದೂ ಮುಖ್ಯಸ್ಥನನ್ನು ತೆಗೆದು, ಅವರ ಮೇಲೆ ರಣಮಸ್ತಖಾನನನ್ನು ನಿಯಮಿಸಬಹುದು. ತರುಣ ರಣಮಸ್ತಖಾನನು ಈ ಕೆಲಸಕ್ಕೆ ಯೋಗ್ಯನೂ ಇದ್ದಾನೆ. ಒಂದು ವೇಳೆಯಲ್ಲಿ ಈತನನ್ನು ಸೇನಾಪತಿಯನ್ನಾಗಿಯಾದರೂ ಮಾಡಬಹುದು. ಈತನು ವಿಜಾಪುರದ ಬಾದಶಹನ ಚಾಕರಿಯನ್ನು ಯಾಕೆ ಮಾಡಬೇಕು ? ರಣಮಸ್ತಖಾನನಿಗೆ ನನ್ನ ಸಂಬಂಧವು ತಿಳಿದರೆ ಆತನ ಮನಸ್ಸಿಗೆ ಹ್ಯಾಗಾಗಬಹುದು ? ನನ್ನ ವಿಷಯವಾಗಿ ಆತನಲ್ಲಿ ಅಭಿಮಾನವು ಉತ್ಪನ್ನವಾಗಬಹುದೋ, ತಿರಸ್ಕಾರವು ಉತ್ಪನ್ನವಾಗಬಹುದೋ ? ಛೇ! ತಿರಸ್ಕಾರವು ಯಾಕೆ ಉತ್ಪನ್ನವಾದೀತು ? ಅಭಿಮಾನವೇ ಉತ್ಪನ್ನವಾಗುವದು. ಎಂದು ಯೋಚಿಸಿದನು. ಆದರೆ ಇದರ ವಿರುದ್ದ ಭಾವನೆಯು ರಣಮಸ್ತಖಾನನಲ್ಲಿ ಹ್ಯಾಗೆ ಉತ್ಪನ್ನವಾಗುತ್ತ ಹೋಯಿತೆಂಬದನ್ನು ನೋಡೋಣ.

ರಣಮಸ್ತಖಾನನ ಪ್ರೇಮವು ನೂರಜಹಾನಳಲ್ಲಿ ವಿಶೇಷವಾಗಿತ್ತು. ಆತನು ಆಕೆಯನ್ನು ವಿಜಾಪುರಕ್ಕೆ ಕರೆದುಕೊಂಡು ಹೋಗುವಾಗ ಆ ಪ್ರೇಮವು ಮತ್ತಷ್ಟು ದೃಢವಾಯಿತು. ಆದರೆ ಆಕೆಯು ತಾನು ಮಾಡಿದ ಪ್ರತಿಜ್ಞೆ ಏನು ಮಾಡಿದರೂ ಬಿಡಲೊಲ್ಲಳು. ಆಕೆಯು ಹಾದಿಯಲ್ಲಿ ಒಂದೆರಡುಸಾರೆ ರಣಮಸ್ತಖಾನನು ತನಗೆ ಭೆಟ್ಟಿಯಾದಾಗ ಆತನಿಗೆ- “ನವಾಬಸಾಹೇಬ, ನಾನು ಇನ್ನು ಸ್ವತಂತ್ರಳಾದೆನು, ನಿಮ್ಮ ಹೊರತು ನಾನು ಬೇರೆಯವರನ್ನು ಲಗ್ನವಾಗುವದಿಲ್ಲ; ಆದರೆ ಕೂಡಿದ ದರ್ಬಾರದಲ್ಲಿ ನನ್ನ ಲಜ್ಞಾಹರಣ ಮಾಡಿದ ಆ ದುಷ್ಟ ರಾಮರಾಜನ ನಾಶಮಾಡಿರಿ. ಅವನ ರಾಜ್ಯವನ್ನು ಮಣ್ಣುಗೂಡಿಸಿರಿ” ಎಂದು ಸ್ಪಷ್ಟವಾಗಿ ಹೇಳಿದಳು. ಅದನ್ನು ಕೇಳಿ ರಣಮಸ್ತಖಾನನು, ಈ ಕಠಿಣ ಕಾರ್ಯವನ್ನು ಹ್ಯಾಗೆ ಸಾಧಿಸಬೇಕೆಂಬ ವಿಚಾರದಲ್ಲಿ ತೊಡಗಿದ್ದನು. ಎಷ್ಟೋ ವರ್ಷಗಳಿಂದ ಯಾವತ್ತು ಬಾಮನಿ ಬಾದಶಹರು ವಿಶ್ವಪ್ರಯತ್ನದಿಂದ ಸಾಧಿಸದೆ ಇದ್ದ ಕಾರ್ಯವು ತನ್ನಂಥ ಅಲ್ಪನಿಂದ ಹ್ಯಾಗೆ ಸಾಧಿಸಬೇಕೆಂಬ ವಿಚಾರದಲ್ಲಿ ಆತನು ಮಗ್ನನಾದನು. ಈ ವಿಚಾರದ ಭರದಲ್ಲಿಯೇ ಆತನು ವಿಜಾಪುರವನ್ನು ಮುಟ್ಟಿದನು. ವಿಜಾಪುರವನ್ನು ಮುಟ್ಟಿದ ಕೂಡಲೆ, ಇನ್ನು ನೂರಜಹಾನಳ ವಿಯೋಗವಾಗುವದೆಂದು ತಿಳಿದು ಆತನು ಬಹಳ ವ್ಯಸನಪಟ್ಟನು. ನೂರಜಹಾನಳು ಕುಲೀನಳು, ಆಕೆಯು ತನ್ನಂಥವನಿಗೆ ಹ್ಯಾಗೆ ಲಭಿಸುವಳು ? ಆಕೆಯ ಆಪ್ತೇಷ್ಟರು ನನ್ನೊಡನೆ ಆಕೆಯ