ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೮
ಕನ್ನಡಿಗರ ಕರ್ಮಕಥೆ

ರಣಮಸ್ತಖಾನನಿಗೆ- “ಹಾಗಾದರೆ ನಾನು ಮುಂದೆ ಹೋಗುತ್ತೇನೆ; ನೀನು ಬೇಗನೆ ಬಾ” ಎಂದು ಹೇಳಲು, ಖಾನನು 'ಹೂ' ಎಂದು ಒಪ್ಪಿಗೆಯನ್ನಿತ್ತನು. ಕೂಡಲೇ ಮಾಸಾಹೇಬರು ತಮ್ಮ ಕೋಣೆಗೆ ಹೋಗಿ ತಮ್ಮ ಆಸನದಲ್ಲಿ ಕುಳಿತುಕೊಂಡರು. ರಣಮಸ್ತಖಾನನು ಅವರ ಬೆನ್ನು ಹಿಂದೆಯೇ ಬಂದನು. ನಿದ್ದೆಗೆಟ್ಟಿದ್ದರಿಂದ ಆತನ ಮುಖವು ನಿಸ್ತೇಜನವಾಗಿತ್ತು. ಸದಾ ಚಿಂತಾಮಗ್ನನಾಗಿರುತ್ತಿದ್ದದ್ದರಿಂದ ಅವನ ಕಣ್ಣುಗಳು ಒಳನಟ್ಟಿದ್ದವು. ಆತನ ಉಲ್ಲಸಿತ ವೃತ್ತಿಯು ಎಷ್ಟೋ ಹೊರಟುಹೋಗಿತ್ತು ನೂರಜಹಾನಳ ಪ್ರಕರಣವು ಉಪಸ್ಥಿತವಾಗುವದಕ್ಕಿಂತ ಮೊದಲಿನ ರಣಮಸ್ತಖಾನನಲ್ಲಿಯೂ, ಈಗಿನ ರಣಮಸ್ತಖಾನನಲ್ಲಿಯೂ ಭೂಮ್ಯಾಕಾಶದಷ್ಟು ಅಂತರವಾಗಿತ್ತು. ಇದನ್ನು ನೋಡಿ ಮಾಸಾಹೇಬರ ಹೊಟ್ಟೆಯಲ್ಲಿ ಬಹಳ ಕಷ್ಟವಾಯಿತು. ಅವರು ಬಾಯಿಂದ ಮಾತಾಡದೆ ಕೈಚಾಚಿ ಮಗನನ್ನು ಹತ್ತಿರ ಕರೆದರು. ಆತನ ಬೆನ್ನಮೇಲೆ ಕೈಯಿಟ್ಟು, ಆತನ ನಿಸ್ತೇಜವಾದ ಮುಖವನ್ನು ದಿಟ್ಟಿಸಿ ನೋಡಿ, ಅವರು ಆತನನ್ನು ಕುರಿತು ಅತ್ಯಂತ ವಾತ್ಸಲ್ಯದಿಂದ- “ಬಾಳಾ, ರಣಮಸ್ತ, ನನ್ನ ಜೀವಕ್ಕೆ ನೀನೊಂದೇ ಆಧಾರ ತಂತುವೆಂಬದನ್ನು ನೀನು ಅರಿಯೆಯಾ ? ನಿನ್ನ ಜೀವಕ್ಕೆ ನೀನೊಂದೇ ಆಧಾರ ತಂತುವೆಂಬದನ್ನು ನೀನು ಅರಿಯೆಯಾ? ನಿನ್ನ ಜೀವಕ್ಕೇನಾಗುತ್ತದೆಂಬದನ್ನು ನನ್ನ ಮುಂದೆ ಹೇಳುವದಿಲ್ಲವೇ ? ನನ್ ಮೇಲಿದ್ದ ನಿನ್ನ ವಿಶ್ವಾಸವು ಎತ್ತ ಹೋಯಿತು ? ನನ್ನನ್ನು ನೀನು ಹೀಗೆ ವಂಚಿಸುವ ಕಾರಣವೇನು ? ನಿನ್ನ ಮನಸ್ಸನ್ನು ಯಾವ ಚಿಂತಾರೋಗವು ಆವರಿಸಿತು ?” ಎಂದು ಇನ್ನೂ ಏನೇನೋ ಹೇಳುತ್ತಿರಲು, ರಣಮಸ್ತಖಾನನು ನಡುವೆ ಬಾಯಿ ಹಾಕಿ- “ಮಾಸಾಹೇಬರೇ, ನೀವು ನನ್ನನ್ನು ಏನೇನೋ ಕೇಳುವಿರಿ; ಆದರೆ ನನಗೆ ಅವುಗಳ ಉತ್ತರವನ್ನು ಹೇಳಲಿಕ್ಕೆ ಬರುವದಿಲ್ಲ. ನನ್ನ ಜೀವಕ್ಕೆ ಏನಾಗಿದೆ ಎಂಬುದು ನನಗೆ ಗೊತ್ತಾಗದಿರಲು, ನಿಮಗೇನು ಹೇಳಲಿ ? ನನ್ನ ಜೀವಕ್ಕೆ ಏನಾಗುತ್ತದೆಂಬುದು ನನಗೇ ನಿಶ್ಚಯವಾಗಿ ತಿಳಿಯಲೊಲ್ಲದು” ಎಂದು ಹೇಳಿದನು. ಹೀಗೆ ಮಗನು ನಡುವೆ ಉತ್ತರ ಕೊಟ್ಟಾನೆಂದು ಮಾಸಾಹೇಬರು ತಿಳಿದಿದ್ದಿಲ್ಲ. ಆತನು ತಮ್ಮ ಮಾತುಗಳನ್ನು ಕೇಳುತ್ತ ಸುಮ್ಮನೆ ಕುಳಿತುಕೊಂಡಾನೆಂದು ಅವರು ಮಾಡಿದ್ದರು. ಅಷ್ಟರಲ್ಲಿ ಮಗನ ಈ ಉತ್ತರವನ್ನು ಕೇಳಿ ಅವರು ಕ್ಷಣಮಾತ್ರ ಸುಮ್ಮನೆ ಕುಳಿತುಕೊಂಡರು. ಆಮೇಲೆ ಅವರು ರಣಮಸ್ತಖಾನನಿಗೆ ಹೀಗೆ ನೀನು ಮಾತಾಡಿದರೆ ನನಗೆ ಹ್ಯಾಗೆ ಸಮಾಧಾನವಾಗಬೇಕು? ಸಣ್ಣವನಿರುವಾಗ ನಿನಗೆ ಮಾತಾಡಲಿಕ್ಕೆ ಬರುತ್ತಿದ್ದಿಲ್ಲ. ಏನಾಗುತ್ತದೆಂಬುದನ್ನು