ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೦
ಕನ್ನಡಿಗರ ಕರ್ಮಕಥೆ

ಹೆಂಡತಿಯನ್ನು ಸಂಪಾದಿಸಿಕೊಳ್ಳಲಾರದ ನಾನು ಬೇರೆ ಮಹತ್ಕೃತ್ಯಗಳನ್ನೇನು ಮಾಡೇನು?

ಮಾಸಾಹೇಬ-ರಣಮಸ್ತ, ನೀನಾಡುವ ಮಾತುಗಳ ಮರ್ಮವು ನನಗೆ ತಿಳಿಯುವದಿಲ್ಲೆಂದು ನೀನು ಭಾವಿಸಬೇಡ. ನೀನು ಎಲ್ಲಿಯಾದರೂ ಹ್ಯಾಗಾದರೂ ಹುಟ್ಟಿ ಯಃಕಶ್ಚಿತನಾಗುವಂತೆ ತೋರಿದ್ದರೆ, ನಿನಗೆ ನಾನು ಜನ್ಮವನ್ನೇ ಕೊಡುತ್ತಿದ್ದಿಲ್ಲ. ಪ್ರತಿಜ್ಞೆಯ ಮೂಲಕ ನಿಜವಾದ ಸಂಗತಿಯನ್ನು ಈಗ ನುಡಿಯದೆ ಸುಮ್ಮನಿರುವ ನನ್ನನ್ನು ನೀನೂ ಮಾತಿನಿಂದ ಚಲಿಸುವೆಯಾ ? ಆಗಲಿ, ರಣಮಸ್ತ, ಬಹಳ ಜಾಣನಾಗಿರುವೆ. ನಿನ್ನ ತಾಯಿಯ ಯೋಗ್ಯತೆಯು ಈಗ ನಿನಗೆ ಕ್ಷುಲ್ಲಕವಾಗಿ ತೋರಹತ್ತಿತಲ್ಲವೆ ? ಹಾಗೆ ಆಗಲಿ. ನೀನು ಯಾವ ಒಳಸಂಚಿನೊಳಗೂ ಇಲ್ಲದಿದ್ದರೆ, ನೀನು ದಿನಾಲು ವಿಜಯನಗರದ ದರ್ಬಾರಕ್ಕೆ ಯಾಕೆ ಹೋಗುತ್ತಿರುವೆ? ನಿನ್ನೆ ರಾತ್ರಿ ಯಾರಿಗೂ ಹೇಳದೆ ಕೇಳದೆ ಎಲ್ಲಿಗೆ ಹೋಗಿದ್ದೆ? ಹೀಗೆ ನೀನು ಆಗಾಗ್ಗೆ ರಾತ್ರಿ ಹೊರಗೆ ಹೋಗುವದೇಕೆ ?

ರಣಮಸ್ತಖಾನ-ಯಾಕೆಂದರೆ, ನನ್ನ ತೆಲಯ ಮೇಲ ಮೆಣಸು ಅರೆಯುವದಕ್ಕಾಗಿ ನಿಯಮಿಸಲ್ಪಟ್ಟಿರುವ ಮುಖ್ಯ ವಕೀಲನಾದ ಮಹಮೂದಖಾನನ ಅಪ್ಪಣೆಯನ್ನು ಮೀರಲಾರದ್ದಕ್ಕಾಗಿ ವಿಜಯನಗರದ ದರ್ಬಾರಕ್ಕೆ ಆಗಾಗ್ಗೆ ನಾನು ಹೋಗುತ್ತೇನೆ; ಮತ್ತು ರಾತ್ರಿ ನಿದ್ದೆ ಬಾರದಹಾಗಾಗಲು, ಹಲವು ವಿಚಾರಗಳು ಉತ್ಪನ್ನವಾಗಿ ಮನಸ್ಸು ವ್ಯಥೆಪಡುತ್ತದೆ. ಆ ವ್ಯಥೆಯನ್ನು ಸಮಾಧಾನ ಮಾಡಿಕೊಳ್ಳುವದಕ್ಕಾಗಿ ಎಲ್ಲಿಯಾದರೂ ತಿರುಗಾಡಲಿಕ್ಕೆ ಹೋಗುತ್ತೇನೆ. ಹೀಗೆ ತಿರುಗಾಡುವದರಿಂದ ಮನಸ್ಸಿಗೆ ಸಮಾಧಾನವಾಗುವ ಕಾರಣ ಯಾವಾಗಲೂ ರಾತ್ರಿ ಹೊರಗೆ ಹೋಗುತ್ತಿರುವೆನು !

ಮಾಸಾಹೇಬ-ಅಪ್ಪಾ, ರಣಮಸ್ತಾ, ನೀನು ನನ್ನ ಸಂಗಡ ಇಷ್ಟು ಸ್ಪಷ್ಟವಾಗಿ ಮಾತಾಡೀಯೆಂದು ನಾನು ತಿಳಿದಿದ್ದಿಲ್ಲ. ಆಗಲಿ, ಹ್ಯಾಗಿದ್ದರೂ ಬಿಟ್ಟುಹೋಗುವ ಮಾತಲ್ಲ. ನಿನ್ನ ಹೊರತು ನನಗೆ ಗತಿಯಿಲ್ಲ. ಆದ್ದರಿಂದ ನಿನ್ನ ಮನಸ್ಸಿನಲ್ಲಿ ಬರುವ ವಿಚಾರಗಳಾದರೂ ಯಾವವು ಹೇಳು, ಅವುಗಳ ಸಂಬಂಧದಿಂದ ನನಗೇನಾದರೂ ಉಪಾಯಗಳು ತೋಚಿದರೆ ಹೇಳುವೆನು. ನಾನು ನಿನ್ನ ಸುಖ ದುಃಖಗಳ ಭಾಗಿ ಅಲ್ಲವೇ ? ಸ್ವತಃ ನನ್ನ ಸುಖ-ದುಃಖಗಳೇನಿರುವವು ಹೇಳು? ನಿನ್ನ ಸುಖ-ದುಃಖಗಳೇ ನನ್ನ ಸುಖ-ದುಃಖಗಳು ! ಈ ಮಾತು ಚಿಕ್ಕಂದಿನಿಂದಲೂ ನಿನ್ನ ಅನುಭವಕ್ಕೆ ಬಂದಿದೆ. ಸಣ್ಣವನಿರುವಾಗ ನೀನು ಸುಖದಿಂದ್ದರೆ ನಾನು ಸುಖದಿಂದಿರುತ್ತಿದ್ದೆನು, ನೀನು ದುಃಖದಿಂದಿದ್ದರೆ ನಾನು