ಪುಟ:Kannadigara Karma Kathe.pdf/೨೨೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ರಾಜರಾಜನ ಹೊಸವಿಚಾರ
೨೦೫
 

ಚಾಕರಿಗೆ ಇಟ್ಟುಕೊಳ್ಳುತ್ತ ಬಂದಿದ್ದರು. ಆಗಿನ ಕಾಲದಲ್ಲಿ ಮುಸಲ್ಮಾನರು ಮುಸಲ್ಮಾನರ ಮೇಲೆ, ಹಿಂದುಗಳು ಹಿಂದೂಗಳ ಮೇಲೆ ಶಸ್ತ್ರ ಹಿಡಿದು ಕಾದಲಿಕ್ಕೆ ಹಿಂದುಮುಂದು ನೋಡುತ್ತಿದ್ದಿಲ್ಲ. ಹೊಟ್ಟೆ ತುಂಬ ಅನ್ನ ಹಾಕಿದವರ ನೌಕರರಾಗಿ ಬೇಕಾದವರು ಬೇಕಾದವರ ಸಂಗಡ ಯುದ್ಧ ಮಾಡುತ್ತಿದ್ದರು. ಆದ್ದರಿಂದ ಮುಸಲ್ಮಾನ ಬಾದಶಹರ ದಂಡಿನಲ್ಲಿ ಹಿಂದೂಜನರೂ, ಹಿಂದೂ ಅರಸರ ದಂಡಿನಲ್ಲಿ ಮುಸಲ್ಮಾನರೂ ಚಾಕರಿಗೆ ನಿಂತುಕೊಂಡು ತಮ್ಮ ತಮ್ಮ ಒಡೆಯರ ಪಕ್ಷದಿಂದ ಯುದ್ಧ ಮಾಡುತ್ತಿದ್ದರು. ರಾಮರಾಜನಿಗೆ ತನ್ನ ಹಿಂದೂ ದಂಡಾಳುಗಳ ಸಂಬಂಧದಿಂದಂತು ಪೂರ್ಣ ಅಭಿಮಾನವಿದ್ದೇ ಇತ್ತು; ಆದರೆ ಇತ್ತಿತ್ತ ಹಿಂದೂ ದಂಡಾಳುಗಳೂ ಡೌಲಿಗೆ ಬಿದ್ದು, ಸಾಹಸದ ಕಾರ್ಯಗಳಲ್ಲಿ ಸ್ವಲ್ಪ ಮುಗ್ಗರಿಸುತ್ತಿರುವರೆಂಬುದು ಆತನ ಮನಸ್ಸಿನಲ್ಲಿ ಕಟಿಯುತ್ತಿತ್ತು ; ಆದ್ದರಿಂದಲೇ ಆತನು ತನ್ನಲ್ಲಿದ್ದ ಅರಬ ಪಠಾಣ ಜನರ ದಂಡನ್ನು ಇನ್ನಿಷ್ಟು ಹೆಚ್ಚಿಸಿ ತನ್ನ ಸೈನದ ಸಾಮರ್ಥ್ಯವನ್ನು ಒಳಿತಾಗಿ ಹೆಚ್ಚಿಸಬೇಕೆಂದು ಆತುರ ಪಡಹತ್ತಿದನು.

ಈ ಪಠಾಣರ ಹಾಗು ಅರಬರ ಪರಾಕ್ರಮವು ವಿಜಯನಗರದ ರಾಜ್ಯದ ಉತ್ಕರ್ಷಕ್ಕೆ ಬಹುಮಟ್ಟಿಗೆ ಕಾರಣವಾದ್ದರಿಂದ ಈವರೆಗೆ ವಿಜಯನಗರದ ಅರಸರು ಮುಸಲ್ಮಾನ ದಂಡಾಳುಗಳ ಅನುವರ್ತನ ಮಾಡುತ್ತ ಬಂದಿದ್ದರೆಂದು ಹೇಳಬಹುದು. ಇದರಿಂದ ಮುಸಲ್ಮಾನರು ಒಂದೊಂದು ಪ್ರಸಂಗದಲ್ಲಿ ವಿಜಯನಗರದ ಅರಸರಿಗೂ ತಲೆಭಾರವಾಗುತ್ತಿದ್ದರು. ಮುಸಲ್ಮಾನ ದಂಡಾಳುಗಳಿಗಾಗಿ ವಿಜಯನಗರದ ಅರಸರು ತಮ್ಮ ರಾಜ್ಯದಲ್ಲಿ ಮಸೀದೆಗಳನ್ನು ಕಟ್ಟಿಸಿಕೊಟ್ಟಿದ್ದರು. ಮುಸಲ್ಮಾನರು ಹಿಂದೂ ಅರಸರಿಗೂ, ಅವರ ಸಿಂಹಾಸನಕ್ಕೂ ಕುರ್ನಿಪಾತ (ವಿಶೇಷ ಪ್ರಕಾರದ ನಮಸ್ಕಾರ) ಮಾಡಲಿಕ್ಕಿಲ್ಲೆಂದು ಹಟಹಿಡಿಯಲು, ವಿಜಯನಗರದ ರಾಯರು ಅಷ್ಟಕ್ಕಾಗಿ ಮುಸಲ್ಮಾನ ದಂಡಾಳುಗಳನ್ನು ಹೊರಗೆ ಹಾಕಲಿಲ್ಲ. ದರ್ಬಾರದಲ್ಲಿ ಸಿಂಹಾಸನದ ಮೇಲೆ ಕುರಾನ್ ಇಡುವ ಪದ್ಧತಿಯನ್ನು ಪ್ರಚಾರದಲ್ಲಿ ತಂದಿದ್ದರು. ಯಾರಾದರೂ ಈ ಸಂಬಂಧದಿಂದ ಮುಸಲ್ಮಾನರನ್ನು ಸಿಟ್ಟಿಗೆ ಎಬ್ಬಿಸಿದರೆ, ಅವರು-ನಾವು ಹಿಂದೂ ಅರಸರಿಗೆ, ಅಥವಾ ಅವರ ಸಿಂಹಾಸನಕ್ಕೆ ಕುರ್ನಿಸಾತವನ್ನು ಮಾಡದೆ, ಕುರಾನಕ್ಕೆ ಮಾಡುತ್ತೇವೆಂದು ಸ್ಪಷ್ಟವಾಗಿ ಹೇಳುತ್ತಿದ್ದರು. ತಾತ್ಪರ್ಯವೇನೆಂದರೆ ವಿಜಯನಗರದ ಅರಸರು ಮುಸಲ್ಮಾನ ದಂಡಾಳುಗಳ ಹಟವನ್ನು ನಡಿಸಿಯಾದರೂ ಅವರನ್ನು ಇಟ್ಟುಕೊಳ್ಳುತ್ತಿದ್ದರು. ರಾಮರಾಜನು ತನ್ನ ಆಳಿಕೆಯಲ್ಲಿ ಹಿಂದೂ ಸೈನ್ಯದೊಡನೆ ಮುಸಲ್ಮಾನ ಸೈನ್ಯವನ್ನೂ ಹೆಚ್ಚಿಸಿ, ತಾನು ಅತ್ಯಂತ ಬಲಾಡ್ಯನಾದ ಮುಸಲ್ಮಾನ ಸೈನ್ಯವನ್ನೂ ಹೆಚ್ಚಿಸಿ,