ಈ ಪುಟವನ್ನು ಪ್ರಕಟಿಸಲಾಗಿದೆ
ರಾಜರಾಜನ ಹೊಸವಿಚಾರ
೨೧೧
ತಾರುಣ್ಯದಲ್ಲಿಯಾದರೂ ಒಳ್ಳೆಯ ವಿಚಾರವಂತನಿರುವನೆಂದು ತಿಳಿದು ಸಮಾಧಾನ ಪಟ್ಟನು. ಆತನು ನಕ್ಕು ರಣಮಸ್ತಖಾನನನ್ನು ಕುರಿತು-ಸರಿ ಸರಿ! ನೀವು ಹೇಳುವ ಉಪಾಯವೂ ಸರಿಯಾಗಿರುತ್ತದೆ. ಅದರಂತೆಯೇ ಈಗ ಮಾಡೋಣ. ನಮ್ಮ ಯಾವತ್ತು ಸೈನ್ಯ ಆಧಿಪತ್ಯವು ನಮ್ಮ ಬಂಧುವಿನಕಡೆಗಿರುವದೆಂಬದನ್ನು ನೀವು ಬಲ್ಲಿರಿ. ನೀವು ಈಗ ಹೋಗಿ ಅವರನ್ನು ಕಂಡು ಬರ್‍ರಿ. ಈವೊತ್ತಿನವರೆಗೆ ಆದ ನಮ್ಮ ನಿಮ್ಮ ವ್ಯವಹಾರವೆಲ್ಲ ಅವರಿಗೆ ಗೊತ್ತೇ ಇರುತ್ತದೆ. ಅವರ ಒಪ್ಪಿಗೆಯಿಂದಲೇ ನಾನು ನಿಮ್ಮೊಡನೆ ಆಲೋಚಿಸಿರುವೆನೆಂಬದು ಅವರ ಭೆಟ್ಟಿಗೆ ಹೋದಾಗ ನಿಮಗೆ ಗೊತ್ತಾಗಬಹುದು. ಸೈನ್ಯದ ಸ್ಥಿತಿಗತಿಗಳೆಲ್ಲ ಅವರಿಗೆ ಗೊತ್ತಿರುವದರಿಂದ ನೀವು ಅವಶ್ಯವಾಗಿ ಅವರನ್ನು ಕಾಣತಕ್ಕದ್ದು. ಇನ್ನು ನೀವು ನಡುವೆ ಎಂದಾದರೂ ಒಂದು ದಿನ ನನ್ನನ್ನು ಕಾಣಲಿಕ್ಕೆ ಬಾರದಿದ್ದರೂ ನಡೆಯಬಹುದು. ನಾವು ಬೇರೊಂದು ಕೆಲಸದಲ್ಲಿ ತೊಡಗುವವರಿದ್ದೇವೆ. ಎಂದು ಹೇಳೀ ರಾಮರಾಜನು ಆತನಿಗೆ ಹೋಗಲಪ್ಪಣೆಕೊಟ್ಟನು.
****