ಪುಟ:Kannadigara Karma Kathe.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೨

ಕನ್ನಡಿಗರ ಕರ್ಮಕಥೆ

ರಣಮಸ್ತಖಾನ- (ಅತ್ಯಂತ ನಮ್ರಭಾವದಿಂದ) ಸರಕಾರ್‌, ತಾವು ಹೀಗೆಯೇ ಉತ್ತರ ಬರೆಯಿರೆಂದು ನಾನು ಹಾಗೆ ಹೇಳಲಿ ? ತಾವು ದೊಡ್ಡವರು, ವಿಚಾರವಂತರು, ಕರ್ತೃತ್ವಶಾಲಿಗಳು, ತಮ್ಮ ಮನಸ್ಸಿಗೆ ಬಂದಂತೆ ಉತ್ತರ ಬರೆಯಿರಿ. ತಾವು ಸಮರ್ಥರಿರುತ್ತೀರಿ. ನನ್ನ ಸಲುವಾಗಿ ನಿಮ್ಮ ಮೇಲೆಯೂ, ನಿಮ್ಮ ರಾಜ್ಯದ ಮೇಲೆಯೂ ಭಯಂಕರ ಪ್ರಸಂಗವನ್ನು ತಂದುಕೊಂಡು, ನನ್ನನ್ನು ಕಾಪಾಡಿರೆಂದು ನಾನು ತಮಗೆ ಹ್ಯಾಗೆ ಹೇಳಬೇಕು ! ತಮ್ಮ ಸವಿಮಾತಿಗೆ ಮರುಳಾಗಿ ಹಿಂದುಮುಂದಿನ ವಿಚಾರವಿಲ್ಲದೆ ನಾನು ತಮ್ಮ ಆಶ್ರಯಕ್ಕೆ ಬರಬೇಕಾದರೆ, ಮುಂದೆ ಆದದ್ದು ಆಗಲೆಂಬ ನಿಶ್ಚಯದಿಂದ ಬಂದಿದ್ದೇನೆ. ಅತ್ತ ವಿಜಾಪುರದ ದರ್ಬಾರದಲ್ಲಿದ್ದು, ಒಂದರಹಿಂದೊಂದು ಅಪಮಾನವನ್ನು ಸಹಿಸಲಿಕ್ಕೆ ನನ್ನ ಮನಸ್ಸು ಒಪ್ಪದಾಯಿತು. ನಾನು ಉತ್ತರ ಹಿಂದುಸ್ತಾನ, ಪಂಜಾಬ ಮೊದಲಾದವುಗಳ ಕಡೆಗೆ ಹೋಗಿ, ಯಾವ ಅರಸರ ಬಳಿಯಲ್ಲಾದರೂ ಇದ್ದು ಹೊಟ್ಟೆಯ ತುಂಬಿಕೊಳ್ಳಬೇಕೆಂದು ಮಾಡಿದ್ದೆನು ; ಹಾಗೆ ಮಾಡಿದ್ದರೆ ಬಾದಶಹರಿಗೆ ನನ್ನ ನೆನಪು ಸಹ ಉಳಿಯುತ್ತಿದ್ದಿಲ್ಲ ; ಆದರೆ ತಮ್ಮ ಸವಿಮಾತುಗಳು ನನ್ನನ್ನು ತಮ್ಮ ಕಡೆಗೆ ಎಳಕೊಂಡವು, ತಮ್ಮ ಕಡೆಗೆ ಬಂದದ್ದರಿಂದಲೇ ಬಾದಶಹರು ನನ್ನ ಮೇಲೆ ಇಷ್ಟು ಸಿಟ್ಟಾಗಿರುವರು. ಹಾಗೆ ಅವರು ಸಿಟ್ಟಾದದ್ದರಲ್ಲೇನೂ ಆಶ್ಚರ್ಯವಿಲ್ಲ. ಅವರ ಸ್ಥಿತಿಯಲ್ಲಿ ತಮಗಾದರೂ ಸಿಟ್ಟು ಬರುತ್ತಿತ್ತು. ಒಳ್ಳೇ ವಿಶ್ವಾಸದ ಸ್ಥಳದ ಮೇಲೆ ನಿಯಮಿಸಲಿಕ್ಕೆ ಯೋಗ್ಯನಾಗುವವರೆಗೆ ಬಾದಶಹರು ನನ್ನ ಯೋಗ್ಯತೆಯನ್ನು ಹೆಚ್ಚಿಸಿರಲು, ನಾನು ಒಮ್ಮೆಲೆ ಶತ್ರುಪಕ್ಷವನ್ನು ವಹಿಸಿದ ಬಳಿಕ, ಆವರಿಗೆ ಸಿಟ್ಟು ಬಾರದೆ ಏನು ಮಾಡೀತು ? ಆದ್ದರಿಂದ ಮಹಾರಾಜ, ನೀವು ವಿಚಾರಮಾಡಿ-ಪೂರ್ಣ ವಿಚಾರಮಾಡಿ, ನನಗೆ ಆಶ್ರಯವನ್ನು ಕೊಡಬೇಕು; ಇಲ್ಲವೆ ಬಾದಶಹರಿಗೆ ಒಪ್ಪಿಸಬೇಕು. ನೀವು ಹಾಗೆ ಮಾಡಿದರೂ ನನಗೆ ವ್ಯತ್ಯಾಸವಾಗುವ ಹಾಗಿಲ್ಲ. ನಾನು ಪೂರಾ ದಡ್ಡತನದಿಂದ ನಿಮ್ಮನ್ನು ಆಶ್ರಯಿಸಿ,ನಿಮ್ಮನ್ನು ಅವಲಂಬಿಸಿ ಕುಳಿತುಕೊಂಡಿರುತ್ತೇನೆ.

ರಾಮರಾಜ- “ನಾನು ಪೂರಾ ದಡ್ಡತನದಿಂದ ನಿಮ್ಮನ್ನು ಆಶ್ರಯಿಸಿದೆನೆಂದು ಯಾಕೆ ಅನ್ನುತ್ತೀರಿ ?

ರಣಮಸ್ತಖಾನ- ಹಾಗನ್ನದೆ ಮತ್ತೇನು ಮಾಡಲಿ ? ಸರಕಾರ್, ನನ್ನಿಂದ ಪೂರಾ ದಡ್ಡತನವಾಗಿದೆ. ನಾನು ಕೇವಲ ರಾಜದ್ರೋಹವನ್ನಷ್ಟೇ ಮಾಡಲಿಲ್ಲ. ನನ್ನಿಂದ ಮಾತೃದ್ರೋಹವೂ ಘಟಿಸಿರುತ್ತದೆ. ನನ್ನ ತಾಯಿಯು ಆತ್ಯಂತ ಧರ್ಮಿಷ್ಠಳು; ಅತ್ಯಂತ ದೃಢನಿಶ್ಚಯದವಳು. ಆಕೆಯು ನನ್ನ ಸಂರಕ್ಷಣ ಮಾಡುವಾಗ ಪಟ್ಟ