ಪುಟ:Kannadigara Karma Kathe.pdf/೨೩೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಬಾದಶಹನ ಪತ್ರವು
೨೨೩
 

ಶ್ರಮವನ್ನು ಮನಸ್ಸಿನಲ್ಲಿ ತಂದರೆ, ಆಕೆಯ ಕಾಲಿಗೆ ನನ್ನ ಮೈದೊಗಲ ಜೋಡುಮಾಡಿ ಹಾಕಿದರೂ ಆಕೆಯ ಉಪಕಾರವು ತೀರದು ! ಹೀಗಿದ್ದು ಆಕೆಯ ಮನಸ್ಸಿಗೆ ಬಾರದ ಕೆಲಸವನ್ನು ನಾನು ಮಾಡಿದೆನು. ನಿಮ್ಮ ಶಬ್ದಜಾಲದಲ್ಲಿ ಸಿಕ್ಕು, ಆ ಮಾತೃದೈವತ್ವನ್ನು ಕೂಡ ನಿರಾಕರಿಸಿ, ನಿಮ್ಮ ಬಳಿಗೆ ಬಂದುಬಿಟ್ಟೆನು. ಹೀಗೆ ನಾನು ಬಂದದ್ದನ್ನು ಕೇಳಿ ನನ್ನ ತಾಯಿಯು ಸಂತಾಪಗೊಂಡು ಪ್ರಾಣವನ್ನರ್ಪಿಸಿದಳೋ, ದೇಶತ್ಯಾಗ ಮಾಡಿದಳೋ ಯಾರಿಗೆ ಗೊತ್ತು ? ಆಕೆಯು ಕುಂಜವನದಿಂದ ಹೊರಟು ಹೋಗಿ, ಈಗ ಎಂಟು ದಿನಗಳಾಗುತ್ತ ಬಂದವು. ತಾಯಿಯ ಈ ಸ್ಥಿತಿಯ ಸ್ಮರಣವಾದ ಕೂಡಲೆ ನನ್ನ ಕೈ ಖಡ್ಗದಿಂದ ನನ್ನ ಶಿರಚ್ಛೇದ ಮಾಡಿಕೊಳ್ಳಬೇಕೆನ್ನುವ ಹಾಗೆ ನನಗೆ ಆಗುತ್ತದೆ. ಈಗ ಅನಾಯಾಸವೇ ಬಾದಶಹರಿಂದ ದೇಹಾಂತ ಪ್ರಾಯಶ್ಚಿತ್ತವು ನನಗೆ ಒದಗುವದರಿಂದ, ನನ್ನನ್ನು ವಿಜಾಪುರಕ್ಕೆ ಕಳಿಸಿಬಿಡಿರಿ; ಅಂದರೆ ಎಲ್ಲ ಪಾಪಗಳಿಗಾಗಿ ನನಗೆ ಪ್ರಾಯಶ್ಚಿತ್ತವು ದೊರೆತಂತಾಗುವದು. ರಾಜದ್ರೋಹ-ಮಾತೃದೋಹಗಳಿಗಾಗಿ ದೇಹಾಂತ ಪ್ರಾಯಶ್ಚಿತ್ತದ ಹೊರತು, ಬೇರೆ ಪ್ರಾಯಶ್ಚಿತ್ತವು ಯೋಗ್ಯವಾಗಲಾರದು. ದೇಹಾಂತ ಪ್ರಾಯಶ್ಚಿತ್ತದಿಂದಲಾದರೂ ನನ್ನ ಪಾಪದ ಕ್ಷಲನವಾಗುವದೋ ಇಲ್ಲವೋ ಯಾರಿಗೆ ಗೊತ್ತು ?

ರಾಮರಾಜ-ಎಲಲಾ! ನಿಮಗೆ ಬಹಳ ಪಶ್ಚಾತ್ತಾಪದಂತೆ ತೋರುತ್ತದೆ. ಆದ್ದರಿಂದ ಈಗ ನಿಮ್ಮ ಸಂಗಡ ಮಾತಾಡುವದರಿಂದ ವಿಶೇಷ ಪ್ರಯೋಜನವಾಗಕ್ಕಿಲಿಲ್ಲ, ನಿಮ್ಮ ತಾಯಿಯು ಇಲ್ಲದಹಾಗಾದ್ದರಿಂದ, ನಿಮ್ಮ ಮನಸ್ಸು ಬಹಳ ನೊಂದಿರುವದು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಮಾತೃವಿಷಯವೇ ಅಂಥಾದ್ದು ; ಆದರೆ ನಾವು ನಿಮ್ಮ ಸಲುವಾಗಿ ನಿಮ್ಮ ತಾಯಿಯನ್ನು ಹುಡುಕಿಸಲಿಕ್ಕೆ ಎಷ್ಟು ಮಾತ್ರವೂ ಉದಾಸೀನ ಮಾಡಿರುವದಿಲ್ಲ. ನೀವು ಹೇಳುವ ಮಾರ್ಗದಿಂದ ಶೋಧಮಾಡುತ್ತಲೇ ಇರುವೆವು. ಅಂದಬಳಿಕ ನೀವು ಹೀಗೆ ಉದಾಸೀನರಾಗುವದೇಕೆ ? ಉದಾಸೀನ ಮಾಡಿದರೆ, ನಿಮ್ಮ ಮಾಸಾಹೇಬರ ಶೋಧವಾದಂತಾಗುವದೋ ?

ರಣಮಸ್ತಖಾನ- ಅವರ ಶೋಧವಾಗುವದರಿಂದಾದರೂ ನನಗೇನು ಪ್ರಯೋಜನವಾಗುವಹಾಗಿದೆ ? ಅವರು ಇನ್ನು ನನ್ನ ಮುಖಾವಲೋಕನವನ್ನು ಸಹ ಮಾಡುವ ಹಾಗಿಲ್ಲ. “ನಾನು ನಿಮ್ಮನ್ನು ಕಾಣಲಿಕ್ಕೆ ಬರುತ್ತೇನೆಂದು ಅವರಿಗೆ ನಾನು ಹೇಳಿಕಳಿಸಿದರೆ, ಅವರು ಎಷ್ಟು ನಿಷ್ಠುರವಾದ ಉತ್ತರ ಕೊಟ್ಟಾರೆಂಬದನ್ನು ಹೇಳಲಿಕ್ಕಾಗದು, ಅವರು ಬಹು ನಿರ್ಧಾರದ ಸ್ವಭಾವದವರು. ಹೀಗೆ ಮಾಡಬೇಕು,