ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿಗ್ಗರದ ಉತ್ತರ
೨೨೯

ಆದರೆ ಒಮ್ಮೆ ನಾವೆಲ್ಲರು ಒತ್ತಟ್ಟಿಗೆ ಕೂಡಬೇಕು” ಎಂದು ಹೇಳಿಕಳುಹಿಸಿದನು. ಬಾದಶಹನ ಅಂತಃಕರಣ ಪೂರ್ವಕವಾದ ಈ ವಿನಯೋಕ್ತಿಗಳನ್ನು ಕೇಳಿ ಅಹಮದನಗರ ಗೋವಳಕೊಂಡಗಳ ಬಾದಶಹರು ಒಕ್ಕಟ್ಟು ಬೆಳೆಸಲಿಕ್ಕೆ ಸಿದ್ದರಾದರು.

ಹೀಗೆ ಎಲ್ಲ ಕಡೆಯಿಂದಲೂ ಅನುಕೂಲತೆಯು ತೋರಿತು. ವಿಜಾಪುರದವರಂತು ಯುದ್ದಕ್ಕೆ ಒಂದೇಸಮನೆ ಆತುರಪಡುತ್ತಿದ್ದರು. ಅವರು ರಾಮರಾಜನು ಬಾದಶಹನ ಪತ್ರಕ್ಕೆ ಎದುರುತ್ತರವನ್ನು ಕೊಟ್ಟು ಬಾದಶಹನನ್ನು ಸಿಟ್ಟಿಗೆಬ್ಬಿಸಬೇಕೆಂದು ಇಚ್ಚಿಸುತ್ತಿದ್ದರು. ಹೀಗಿರುವಾಗ ರಾಮರಾಜನು ರಣಮಸ್ತಖಾನನನ್ನು ನಿಮಗೆ ಒಪ್ಪಿಸಲಿಕ್ಕೆ ಬರುವದಿಲ್ಲೆಂದು ಸ್ಪಷ್ಟವಾಗಿ ಉತ್ತರವನ್ನು ಬರೆದನು. ಅದನ್ನು ನೋಡಿ ವಿಜಾಪುರದ ದಂಡಾಳುಗಳು ಹಿಗ್ಗಿದರು. ಬಾದಶಹನು ಸಂತಾಪಗೊಂಡನು. ಆತನು ಪುನಃ ಅಹಮ್ಮದನಗರ-ಗೋವಳಕೊಂಡಗಳ ಬಾದಶಹರ ಕಡೆಗೆ ವಕೀಲರನ್ನು ಕಳಿಸಿ, ಇನ್ನು ಯುದ್ಧ ಪ್ರಸಂಗ ಒದಗುವದು ನಿಶ್ಚಯವಾದ್ದರಿಂದ ನಾವೆಲ್ಲರೂ ದೂರದೃಷ್ಟಿಯಿಂದ ನಡಕೊಳ್ಳುವದು ಅವಶ್ಯವೆಂದು ಹೇಳಿ ಕಳುಹಿಸಿದನು. ಅದಕ್ಕೆ ಅವರಿಬ್ಬರು ಬಾದಶಹರೂ ಒಪ್ಪಿಕೊಳ್ಳುವ ಸಂಭವ ತೋರಿದ್ದರಿಂದ ವಿಜಾಪುರದ ಬಾದಶಹನು ರಾಮರಾಜನಿಗೆ ಕಟ್ಟಕಡೆಗೆ ಬಂದಿರುತ್ತಾನೆ ಇಂಥ ಮನುಷ್ಯನಿಗೆ ನೀವು ಆಶ್ರಯಕೊಡುವದೆಂದರೆ, ಬುದ್ಧಿಪೂರ್ವಕವಾಗಿ ನಮ್ಮೊಡನೆ ಇದ್ದ ನಿಮ್ಮ ಸ್ನೇಹ ಸಂಬಂಧವನ್ನು ಮುರಿಯೋಣವೆಂದು ನಾವು ತಿಳಿದುಕೊಳ್ಳುತ್ತೇವೆ. ಇಂಥ ವಿಚಾರಕ್ಕೆ ನೀವು ಹೋದವರಲ್ಲೆಂಬುದನ್ನು ನಾವು ಬಲ್ಲೆವು. ಆದರೂ ನಿಮ್ಮ ಕೃತಿಯಿಂದ ಹಾಗೆ ಭಾಸವಾಗುತ್ತದೆ. ಹಿಂದಕ್ಕೆ ಇದೇ ರಣಮಸ್ತನೇ ನಿಮ್ಮ ದರ್ಬಾರದಲ್ಲಿ ನಿಮ್ಮ ಅಪಮಾನ ಮಾಡಿದನೆಂದು ನೀವೇ ಬರೆದಿದ್ದೀರಿ. ನಮ್ಮ ಗೌರವವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ರಣಮಸ್ತಖಾನನ ಕೃತಿಯು ಯೋಗ್ಯವಿದ್ದರೂ, ನಿಮ್ಮ ಸ್ನೇಹಸಂಬಂಧವನ್ನು ಕಾಯ್ದುಕೊಳ್ಳುವದಕ್ಕಾಗಿ ನಾವು ಆಗ ನಮ್ಮ ದರ್ಬಾರದಲ್ಲಿ ರಣಮಸ್ತಖಾನನ ಅಪಮಾನಮಾಡಿ; ಆತನ ಅಧಿಕಾರವನ್ನು ಕಸಿದುಕೊಂಡೆವು. ಈ ಸಂಗತಿಯು ನೀವು ಅರಿಯದ್ದಲ್ಲ, ಹೀಗಿದ್ದು, ನಿಮ್ಮ ಸಲುವಾಗಿ ನಮ್ಮಿಂದಾದ ಅಪಮಾನದಿಂದ ರಣಮಸ್ತನು ನಮ್ಮಮೇಲೆ ತಿರುಗಿಬಿದ್ದು ನಿಮ್ಮ ಕಡೆಗೆ ಬರಲು, ನೀವು ಆತನಿಗೆ ಆಶ್ರಯಕೊಡುವದು ವಿಚಿತ್ರವಲ್ಲವೆ ? ನಾವು ಪ್ರತ್ಯಕ್ಷ ಪತ್ರ ಬರೆದು ರಣಮಸ್ತಖಾನನನ್ನು ಶಿಕ್ಷಿಸುವದು ಅವಶ್ಯವಿರುತ್ತದಾದ್ದರಿಂದ ಆತನನ್ನು ನಮಗೆ ಒಪ್ಪಿಸಿರೆಂದು ಕೇಳಿಕೊಳ್ಳಲು, ನೀವು