ಪುಟ:Kannadigara Karma Kathe.pdf/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಮರಾಜನ ಸ್ವಚ್ಚಂದವೃತ್ತಿಯು

೨೪೩


(ಮಾಸಾಹೇಬರೂ) ಮಾರ್ಜೀನೆಯೂ ಎಲ್ಲಿಂದಲೋ ಕುಂಜವನಕ್ಕೆ ಬಂದು ತಾವು ಹಿಂದಕ್ಕೆ ಇದ್ದ ಬಂಗಲೆಯಲ್ಲಿ ಇರತೊಡಗಿದರು. ಹೀಗೆ ಇವರಿಬ್ಬರು ಹೆಣ್ಣು ಮಕ್ಕಳು ಎಲ್ಲಿಗೋ ಹೋದವರು, ಅಕಸ್ಮಾತ್ತಾಗಿ ಬಂದದ್ದನ್ನು ನೋಡಿ ಕಾವಲುಗಾರರಿಗೆ ಪರಮಾಶ್ಚರ್ಯವಾಯಿತು. ಅವರಿಗೆ ಮಾಸಾಹೇಬರು ಪುಷ್ಕರಣಿಯಲ್ಲಿ ಹಾರಿಕೊಂಡರೆಂಬದು ಗೊತ್ತಿಲ್ಲ. ಮಾಸಾಹೇಬರು ತಮ್ಮ ದಾಸಿಯೊಡನೆ ಎಲ್ಲಿಯೋ ಹೊದರೆಂದು ಅವರು ತಿಳಕೊಂಡಿದ್ದರು.

ಈ ಪುಷ್ಕರಣಿಯಲ್ಲಿ ಹಾರಿಕೊಂಡ ಮಾಸಾಹೇಬರನ್ನು ರಾಮರಾಜನು ಹೊರಗೆ ತೆಗೆದು, ಕುಂಜವನದಿಂದ ಹೊರಡಿಸಿ, ಬೇರೆಕಡೆಯಲ್ಲಿಡಿಸಿದ್ದನು; ಆದರೆ ಅವರಿಗೆ ತನ್ನ ಗುರುತು ಹತ್ತುಗೊಟ್ಟಿದ್ದಿಲ್ಲ; ಅವರೊಡನೆ ತಾನು ಮಾತಾಡಿದ್ದಿಲ್ಲ. ತಮ್ಮನ್ನು ರಾಮರಾಜನೇ ತೆಗೆದನೆಂದು ಮಾಸಾಹೇಬರಿಗೂ ಗೊತ್ತಾಗಿದ್ದಿಲ್ಲ. ಅವರು ಎಚ್ಚರದಪ್ಪಿ ಬಿದ್ದವರು ತಿರುಗಿ ಎಚ್ಚತ್ತು ನೋಡುವಾಗ ಯಾವ ಮನೆಯಲ್ಲಿಯೋ ಮಂಚದ ಮೇಲೆ ಮಲಗಿದ್ದರು. ತಾವು ಪುನಃ ಬದುಕಿ ಉಳಿದದ್ದಕ್ಕಾಗಿ ಅವರಿಗೆ ಪರಮಾವಧಿ ವ್ಯಸನವಾಗಿತ್ತು ಅದರಲ್ಲಿ ಅವರು ಕುಂಜವನವನ್ನು ಸ್ಮರಿಸಲು ಕೂಡ ಇಚ್ಛಿಸದಿರುವಾಗ ಈಗ ಪುನಃ ಕುಂಜವನದ ವಾಸವು, ಅದರಲ್ಲಿ ತಾವು ಹಿಂದಕ್ಕೆ ತಾರುಣ್ಯದಲ್ಲಿ ಇದ್ದ ಬಂಗಲೆಯಲ್ಲಿಯೇ ಇರುವ ಪ್ರಸಂಗವು ಒದಗಿದ್ದರಿಂದ ಅವರಿಗೆ ಬಹಳ ವ್ಯಸನವಾಯಿತು. ಅವರಿಗೆ ಅನ್ನ-ನೀರುಗಳು ಬೇಡಾದವು. ಲೈಲಿಯ ಸಂಗಡ ಸಹ ಅವರು ಅಪರೂಪವಾಗಿ ಮಾತಾಡಹತ್ತಿದರು. ಹೀಗಿರುವಾಗ ಧನಮಲ್ಲನು ಅವರ ಕಣ್ಣಿಗೆ ಬಿದ್ದನು. ಅವನನ್ನು ಕಂಡಕೂಡಲೆ ಭಯದಿಂದ ಮಾಸಾಹೇಬರ (ಮೆಹೆರ್ಜಾನಳ) ಸರ್ವಾಂಗದಲ್ಲಿ ಕಂಪನವು ಉತ್ಪನ್ನವಾಯಿತು. ಈ ಕೃಷ್ಣಸರ್ಪವು ಹಿಂದಕ್ಕೆ ಒಂದುಸಾರೆ ಅಕಸ್ಮಾತ್ ಬಂದು, ನಡುವೆ ಕೆಲವು ದಿನ ಆಕಸ್ಮಾತ್ ಗುಪ್ತವಾಗಿ, ಈಗ ಮತ್ತೆ ಎಲ್ಲಿಂದ ಬಂದಿತೆಂದು ಅವರು ಚಿಂತಿಸಿದರು. ಪುನಃ ಈತನು ಮೊದಲಿನಂತೆ ರಾಮರಾಜನ ನೌಕರನಾಗಿ ನನ್ನನ್ನು ಕಾಯಲಿಕ್ಕೆ ಬಂದಿರುವನೆಂದು ಅವರು ತರ್ಕಿಸಿದರು. ಧನಮಲ್ಲನು ಮೊದಲಿನಂತೆ ಮೂಕನಾಗಿಯೇ ಇದ್ದನು. ಇದನ್ನೆಲ್ಲ ಮನಸ್ಸಿನಲ್ಲಿ ತಂದು ಮಾಸಾಹೇಬರು ತಮ್ಮ ಲೈಲಿಯನ್ನು ಕುರಿತು- “ಲೈಲಿ, ಈ ಅರಿಷ್ಟವು ಮತ್ತೆ ಎಲ್ಲಿಂದ ಬಂದೀತು? ಇದನ್ನು ನೋಡಿದ ಕೂಡಲೆ ನನ್ನ ಹೃದಯವು ತಲ್ಲಣಿಸುತ್ತದೆ ಈ ದುರುಳನಿಂದ ನನ್ನ ಅಂತವಾಗುವದೆಂಬ ಭಾವನೆಯು ನನಗಾಗಹತ್ತಿದೆ. ಈತನನ್ನು ಹೊರಗೆ ಹಾಕುವದಂತು ನನ್ನ ಕೈಯೊಳಗಿಲ್ಲ; ಆದರೆ ನೀನು ಈತನು ನನ್ನ ಕಣ್ಣಿಗೆ ಬೀಳದಂತೆ ಮಾಡು, ಎಂದು ಹೇಳಿದರು. ಈಗ ಲೈಲಿಯ ಕೈಯಿಂದ ಏನೂ