ಪುಟ:Kannadigara Karma Kathe.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಶಾಭಂಗ

೨೫೩

ತಾನು ಮಧ್ಯದಲ್ಲಿ ಸೈನ್ಯದೊಡನೆ ನಿಂತು, ವೈರಿಗಳಿಗೆ ಎದುರಾಗಬೇಕೆಂದು ನಿಶ್ಚಯಿಸಿದನು.

ಸೈನ್ಯದೊಳಗಿನ ವೀರರಲ್ಲಿ ತನಗೆ ಭೆಟ್ಟಿಯಾದವರಿಗೆಲ್ಲ ರಾಮರಾಜನು ಶ್ರೀ ವಿಜಯವಿಠ್ಠಲನು, ನಮಗೆ ಅತ್ಯುತ್ತಮ ಪ್ರಸಂಗವನ್ನು ಒದಗಿಸಿ ಕೊಟ್ಟಿರುತ್ತಾನೆ. ಈ ಪ್ರಸಂಗದಲ್ಲಿ ನಾವು ಭಾರತೀಯ ವೀರರಂತೆ ಯುದ್ಧ ಮಾಡಿದರೆ, ಭರತಖಂಡದ ತುಂಬ ನಮ್ಮ ಸಾಮ್ರಾಜ್ಯವಾಗಬಹುದು. ಈ ಪ್ರಸಂಗದಲ್ಲಿ ನಾವು ಮುಗ್ಗರಿಸಿದರೆ, ನಮ್ಮ ಇದ್ದ ರಾಜ್ಯವೂ ಹೋಗುವದು. ಮನುಷ್ಯನಿಗೇನು, ರಾಜ್ಯಕ್ಕೇನು, ಇಂಥ ಮಹತ್ವದ ಪ್ರಸಂಗವು ಒಂದೆಂದರೆ ಒಂದೇಸಾರೆ ಬರುವದು ಆ ಪ್ರಸಂಗದಲ್ಲಿ ಮನುಷ್ಯನು ತನ್ನ ಪ್ರತಾಪದಿಂದ ತಲೆಯನ್ನಾದರೂ ಎತ್ತಬೇಕು, ಹೇಡಿತನದಿಂದ ರಸಾತಲಕ್ಕಾದರೂ ಇಳಿಯಬೇಕು, ಅಂಥ ಪ್ರಸಂಗವೇ ಈಗ ನಿಮಗೆ, ನಿಮ್ಮ ರಾಜ್ಯಕ್ಕೆ ಒದಗಿರುತ್ತದೆಂದು ತಿಳಿಯಿರಿ. ಈ ಪ್ರಸಂಗದಲ್ಲಿ ನೀವು ಎದೆಗೊಟ್ಟು ಕಾದಿ ಜಯಶೀಲರಾಗಿ ಎಲ್ಲರ ಎದೆಯಮೇಲೆ ಕೂಡುವಿರೋ, ಹೇಡಿತನದಿಂದ ಹಿಂದಕ್ಕೆ ಸರಿದು, ವೈರಿಗಳ ತುಳಿತದಿಂದ ಹುಡಿಯಾಗಿ ಹಾರಿಹೋಗುವಿರೋ? ನಿಮ್ಮ ಸಾಮ್ರಾಜ್ಯದ ಗೌರವವನ್ನು ಕಾಯ್ದುಕೊಳ್ಳಿರಿ. ಈ ಕಾಲಕ್ಕೆ ನೀವು ನಿಮ್ಮ ಗೌರವವನ್ನು ಕಾಯ್ದುಕೊಂಡರೆ, ನಿಮ್ಮ ಶತ್ರುಗಳು ಇನ್ನೂ ಐವತ್ತು ವರ್ಷ ತಲೆ ಮೇಲಕ್ಕೆತ್ತದ ಹಾಗಾಗುತ್ತದೆ; ತಲೆ ಮೇಲಕ್ಕೆತ್ತುವದೇಕೆ, ಶತ್ರುಗಳೇ ಉಳಿಯುವದಿಲ್ಲೆಂದು ತಿಳಿಯಿರಿ. ಅದರಿಂದ ನಿಮ್ಮ ಸಾಮ್ರಾಜ್ಯವು ಬೆಳೆಯಬಹುದು; ಮತ್ತು ಆಸೇತು ಹಿಮಾಚಲ ಏಕಛತ್ರಾಧಿಪತ್ಯವಾಗಬಹುದು. ಈ ಮುಸಲ್ಮಾನರು ಈಗ ೩೦೦ ವರ್ಷಗಳಲ್ಲಿ ಉತ್ತರಹಿಂದುಸ್ತಾನದೊಳಗೆ ಮನಸ್ಸಿಗೆ ಬಂದಂತೆ ಕುಣಿಯುತ್ತ ಬಂದಿರುತ್ತಾರೆ, ಅವರನ್ನು ಮಾತಾಡಿಸುವವರು ಯಾರೂ ಇಲ್ಲದಾಗಿದೆ. ಇನ್ನು ನಾವು ಆ ಕೆಲಸವನ್ನು ಮಾಡಬೇಕೆಂದು ಶ್ರೀ ನರಸಿಂಹನ ಇಚ್ಛೆಯಿದ್ದಂತೆ ತೋರುತ್ತದೆ, ಆದ್ದರಿಂದ ನೀವು ಯುದ್ದದಲ್ಲಿ ಹಿಂಜರಿಯದೆ, ವಿಜಯನಗರದ ಸಾಮ್ರಾಜ್ಯದ ಗೌರವವನ್ನು ಕಾಯಿರಿ, ಎಂದು ಹೇಳುತ್ತಿದ್ದನು.

ರಾಮರಾಜನು ಸ್ವಭಾವತಃ ಬಹು ಉದ್ಧಟನು, ಆತನ ಔದ್ಧತ್ಯದ ಮೂಲಕ ಬರಿಯ ಮುಸಲ್ಮಾನರೇ ಅಲ್ಲ, ಸ್ವಜನರಲ್ಲಿ ಬಹುಜನರು ಆತನ ಶತ್ರುಗಳಾಗಿದ್ದರು; ಆದರೆ ರಾಮರಾಜನ ಮುಂದೆ ಅವರ ಆಟ ನಡೆಯುವ ಹಾಗಿಲ್ಲದ್ದರಿಂದ ಅವರು ಸುಮ್ಮನೆ ಕೈಮುಚ್ಚಿಕೊಂಡು ಕುಳಿತುಕೊಂಡಂತೆ ಆಗಿತ್ತು. ರಾಮರಾಜನು ಸದಾಶಿವರಾಜನನ್ನು ಸೆರೆಯಲ್ಲಿಟ್ಟು ತಾನೇ ಅರಸನಾಗಿ ಕಾರಭಾರವನ್ನು ನಡಿಸುತ್ತಿದ್ದನಷ್ಟೆ ? ಅವನು ವರ್ಷದಲ್ಲಿ ಒಂದು ದಿನ ಮಾತ್ರ ಸದಾಶಿವರಾಯನ