ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫೪
ಕನ್ನಡಿಗರ ಕರ್ಮಕಥೆ

ಹೊರಟುಹೋದಳು; ಆದರೆ ಮಾರ್ಜೀನೆಯ ಈ ಸಿಟ್ಟು ಬಹಳಹೊತ್ತು ನಿಲ್ಲಲಿಲ್ಲ. ಮಾಸಾಹೇಬರ ಮನಸ್ಸಿನ ಸ್ಥಿತಿಯಾದರೂ ಬೇಗನೆ ಬದಲಾಯಿತು. ನೂರಜಹಾನಳು ಹೋದಕೂಡಲೇ ಮಾಸಾಹೇಬರು ಮನಸ್ಸಿನಲ್ಲಿ-ಈ ಹುಡುಗಿಯು ಇಂಥ ಪ್ರಸಂಗಲ್ಲಿ ರಾಮರಾಜನ ಕೈಯಲ್ಲಿ ಹ್ಯಾಗೆ ಸಿಕ್ಕಿರಬಹುದು? ಏನಾದರೂ ಪ್ರಸಂಗ ಒದಗಿ ಆ ತರುಣಿಯು ಆತನ ಸೆರೆಯಾಳಾಗಿರುವಳು. ಇಂಥ ಪ್ರಸಂಗದಲ್ಲಿ ಎರಡು ಒಳ್ಳೆಯ ಮಾತುಗಳನ್ನಾದರೂ ಆಡಿ ಆಕೆಯನ್ನು ಸಮಾಧಾನಗೊಳಿಸುವದು ಯೋಗ್ಯವು. ನಾನು ಆಕೆಯ ಸಂಗಡ ಪ್ರತ್ಯಕ್ಷ ಮಾತಾಡದಿದ್ದರೂ, ಮಾರ್ಜೀನೆಯ ಮುಖಾಂತರ ಮಾಡಿದರು. ಮಾರ್ಜೀನೆಯು ಬಂದಕೂಡಲೆ ಮಾಸಾಹೇಬರು ಆಕೆಗೆ ತಮ್ಮ ವಿಚಾರವನ್ನೆಲ್ಲ ತಿಳಿಸಿ, ನೂರಜಹಾನಳ ಯೋಗಕ್ಷೇಮವನ್ನು ವಿಚಾರಿಸ ಹೇಳಿದರು.


****