ಪುಟ:Kannadigara Karma Kathe.pdf/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮೦

ಕನ್ನಡಿಗರ ಕರ್ಮಕಥೆ

ಮಗ್ನರಾಗಿರುತ್ತಾರೆ. ನಾವು ತುಂಗಭದ್ರೆಯನ್ನು ದಾಟಿ ಇಲ್ಲಿ ಬಂದು ಕುಳಿತಿದ್ದರೂ ಅವರ ಆದರ ಸತ್ಕಾರಗಳೇ ಮುಗಿಯಿಲೊಲ್ಲವಲ್ಲ! ತಮ್ಮ ಅನ್ನ ಸಾಮಗ್ರಿಗಳ ಬಂಡಿಗಳು ಯಾವ ಕಡೆಗೆ ಹೋಗುತ್ತಾವೆಂಬದರ ಅರಿವು ಸಹ ಅವರಿಗೆ ಇದ್ದಂತೆ ತೋರುವದಿಲ್ಲ. ಅವರು ಮಾಡುತ್ತರಾದರೂ ಏನು? ಮೂರು ನಾಲ್ಕು ಜನರು ಒಟ್ಟುಗೂಡಿ ಬಂದಿದ್ದರೂ ಮುಂದಕ್ಕೆ ಸಾಗಿಬರುವ ಧೈರ್ಯವು ಅವರಿಗಾಗಲೊಲ್ಲವಲ್ಲ ಅವರು ಏನು ಆಲೋಚಿಸುತ್ತಿರುವರೋ ಏನು? ನಮ್ಮನ್ನು ನೋಡಿದ ಕೂಡಲೇ ಅವರ ಎದೆಯೊಡೆದು ನೀರಾಯಿತೇನು? ನಾವು ಹಾದಿಯನ್ನು ನೋಡುವತನಕ ನೋಡಿ ಆಮೇಲೆ ಒಮ್ಮೆಲೆ ಅವರ ಮೈಮೇಲೆ ಬಿದ್ದು ದೂಳ ಹಾರಿಸುವೆವು ಅವರಿಗೆ ನೀರು ಬೇಡಲಿಕ್ಕೆ ಸಹ ಆಸ್ಪದ ಕೊಡಲಿಕ್ಕಿಲ್ಲ. ಯಾಕೆ ರಣಮಸ್ತ, ಮೂಢನಹಾಗೆ ಸುಮ್ಮನೆ ನಿಂತುಕೊಂಡೆಯಲ್ಲ, ಮಾತಾಡು.

ರಾಮರಾಜನ ಈ ಮಾತುಗಳನ್ನು ಕೇಳಿ ರಣಮಸನು ತೋರಿಕೆಗಾಗಿ ಮುಗುಳಗೆ ನಕ್ಕು ರಾಮರಾಜನ ಸಾಮರ್ಥ್ಯಾಶಯವನ್ನು ಒಪ್ಪಿಕೊಂಡಂತೆ ತೋರಿಸಿದನು. ರಾಮರಾಜನು ತನ್ನ ಇಬ್ಬರು ಬಂಧುಗಳನ್ನು ಬೇರೆ ಕಡೆಗೆ ಕಳಿಸಿ ರಾಯನ ಸೈನ್ಯದ ಕಸುವು ಕಡಿಮೆ ಮಾಡಬೇಕೆಂದು ಆತನು ಯೋಚಿಸುತ್ತಿದ್ದನು. ತನ್ನ ಈ ಯೋಜನೆಯನ್ನು ಸಾಧಿಸುವದಕ್ಕಾಗಿ ಆ ದುಷ್ಟ ರಣಮಸ್ತನು ರಾಮರಾಜನನ್ನು ಕುರಿತು ವಿನಯದಿಂದ-ಮಹಾರಾಜರೇ, ಮುಸಲ್ಮಾನರು ಮುಂದುವರಿದು ಬರುವ ಹಾದಿಯನ್ನು ನೋಡುತ್ತ ತಾವು ಸುಮ್ಮನೆ ಕುಳಿತುಕೊಳ್ಳಬಾರದು. ತುಂಗಭದ್ರೆಯ ಬೇರೆಯೊಂದು ಕಡೆಯ ಕಾಳಹೊಳೆಯು ವೈರಿಗಳಿಗೆ ಗೊತ್ತಾದಹಾಗೆ ತೋರುತ್ತದೆ. ನೀವು ಇಲ್ಲಿ ಸ್ವಸ್ಥವಾಗಿ ಕುಳಿತುಕೊಳ್ಳುವದನ್ನು ನೋಡಿ ಮುಸಲ್ಮಾನರು ತುಂಗಭದ್ರೆಯ ಕಾಳಹೊಳೆಯ ದಾರಿಯಿಂದ ನಮ್ಮ ರಾಜ್ಯವನ್ನು ಪ್ರವೇಶಿಸಿ, ವಿಜಯನಗರದವರೆಗೆ ಸಾಗಿಹೋಗಬೇಕೆಂದು ಎಣಿಕೆ ಹಾಕಿರುತ್ತಾರೆ. ಅವರು ನಿಮ್ಮ ತೋರಿಕೆಗಾಗಿ ಸ್ವಲ್ಪ ಸೈನ್ಯವನ್ನು ಇಲ್ಲಿ ಇಟ್ಟು, ತಮ್ಮ ಸೈನ್ಯದ ಮುಖ್ಯ ಮುಖ್ಯ ಭಾಗವನ್ನು ಆ ಕಾಳಹೊಳೆಯ ಕಡೆಗೆ ಸಾಗಿಸಿರುವರು, ಆ ಕಾಳಹೊಳೆಯು ಇಲ್ಲಿಂದ ಮೂರು ದಿನಗಳ ಹಾದಿಯ ಮೇಲೆ ಇರುತ್ತದೆಂದು ನನಗೆ ಸುದ್ದಿಯು ಗೊತ್ತಾಗಿರುತ್ತದೆ; ಆದ್ದರಿಂದ ತಾವು ತಮ್ಮ ಸೈನ್ಯದ ಬಹುದೊಡ್ಡ ಭಾಗವನ್ನು ಆ ಕಾಳಹೊಳೆಯ ಕಡೆಗೆ ಶತ್ರುಗಳಿಗೆ ಎದುರಾಗುವದಕ್ಕಾಗಿ ಕಳಿಸಿದರೆ ಬಹಳ ನೆಟ್ಟಗಾಗುವದು. ಶತ್ರುಗಳು ಹುಡುಕಿಕೊಂಡಿರುವ ಕಾಳಹೊಳೆಯನ್ನು ತೋರಿಸಲಿಕ್ಕೆ ನನ್ನ ಚಾರರು ಸಿದ್ಧರಿರುತ್ತಾರೆ. ಈ ಪ್ರಸಂಗದಲ್ಲಿ ತಾವು ಉದಾಸೀನ ಮಾಡಿದರೆ ಏನು