ಕೃತಜ್ಞತೆ. ನಿಮ್ಮ ಸುಸ್ವರೂಪ, ಸೌಜನ್ಯ-ಸದ್ಗುಣ, ತಾರುಣ್ಯ ಇವುಗಳ ಮೂಲಕ ನಿಮ್ಮನ್ನು ಪ್ರೀತಿಸುವಳಲ್ಲದೆ, ನಿಮ್ಮ ವಿಷಯದ ಸ್ವಾಭಾವಿಕ ಪ್ರೇಮವು ಆಕೆಯಲ್ಲಿರುವುದಿಲ್ಲ. ಹಿಂದುವಾದ ನಿಮ್ಮನ್ನು ಅಂಗೀಕರಿಸಲಿಕ್ಕೆ ಆ ಯವನ ತರುಣಿಯು ಮನಃಪೂರ್ವಕವಾಗಿ ಅಸಮ್ಮತಿಸಿದಳು. ಇನ್ನು ಆಕೆಯು ನಿಮ್ಮ ಕೈಯಲ್ಲಿ ಸಿಕ್ಕಿರುವುದರಿಂದ ನೀವು ಬೇಕಾದದ್ದು ಮಾಡಬಹುದು. ಪ್ರಸಂಗವಶಾತ್ ನೀವು ಆಕೆಯ ವಿಷಯವಾಗಿ ಕೃತಘ್ನರಾದರೆ ಅಥವಾ ಸೌಜನ್ಯ-ಸದ್ಗಣಗಳನ್ನು ಕಳೆದುಕೊಂಡರೆ, ಬಹಳ ಹೇಳುವದೇನು, ನೀವು ಮದುಕರಾದರೆ ಸಹ ಆಕೆಯ ಪ್ರೇಮವು ನಿಮ್ಮ ಮೇಲೆ ಉಳಿಯುವುದೋ ಇಲ್ಲವೋ ನಾನು ಹೇಳಲಾರೆನು! ಯಾಕೆಂದರೆ ವೈವಾಹಿಕ ಬಂಧನವಿಲ್ಲದ ನಿಮ್ಮ ಪ್ರೇಮದ ಐಕ್ಯಕ್ಕೆ ವ್ಯಭಿಚಾರದ ದೋಷವು ತಟ್ಟುವುದರಿಂದ, ನೀವಿಬ್ಬರೂ ಜಗತ್ತಿನಲ್ಲಿ ಅಪಕೀರ್ತಿಗೂ, ದುಃಖಕ್ಕೂ ಕಾರಣರಾದೀರಿ ! ಮಹಾರಾಜ, ಸ್ವಲ್ಪ ವಿಚಾರ ಮಾಡಿರಿ. ಮೆಹರ್ಜಾನಳು ನಿಮ್ಮ ಸೌಜನ್ಯ-ಸದ್ಗುಣಗಳ ಅನುಭವವನ್ನು ನಿಮ್ಮ ಕೃತಿಯಿಂದ ಸದ್ಯದ ಮಟ್ಟಿಗಾದರೂ ಪಡೆದಿರುವಳು; ಆದರೆ ಆಕೆಯ ತಾರುಣ್ಯ ಸೌಂದರ್ಯಗಳ ಹೊರತು ಆಕೆಯ ಗುಣಗಳನ್ನು ನೀವೇನು ತಿಳಿದಿರುವಿರಿ ? ಅಂದ ಬಳಿಕ ಕೇವಲ ತಾರುಣ್ಯ-ಸೌಂದರ್ಯಗಳಿಗೆ ಮರುಳಾದ ನೀವು ಮೆಹರ್ಜಾನಳಿಗಿಂತ ಸುಂದರಿಯೂ, ತರುಣಿಯೂ ಆದ ಮತ್ತೊಬ್ಬ ಸ್ತ್ರೀಯು ಲಭಿಸಿದಾಗ, ಮೆಹರ್ಜಾನಳನ್ನು ನೀವು ನಿಶ್ಚಯವಾಗಿ ನಿರಾಕರಿಸುವಿರಿ ! ಹೀಗಿರಲು, ನಿಮ್ಮ ವಿಚಾರವು ಯೋಗ್ಯವೆಂದು ನಾನು ಹ್ಯಾಗೆ ಒಪ್ಪಿಕೊಳ್ಳಲಿ ! ಮೆಹರ್ಜಾನಳು ಹೊಟ್ಟೆಯ ಮಗಳಿಗಿಂತಲೂ ನನಗೆ ಹೆಚ್ಚಿನವಳಲ್ಲವೇ ? ಮುಸಲ್ಮಾನರು ಹಿಂದೂ ತರುಣಿಯರನ್ನು ಅಪಹರಿಸಿದರೆಂದು ನೀವು ಹೇಳುತ್ತೀರಿ ; ಆದರೆ ಧರ್ಮಿಷ್ಠರಾದ ಯಾವ ಮುಸಲ್ಮಾನರೂ ಅದನ್ನು ನೀತಿಯೆಂದು ಭಾವಿಸುವುದಿಲ್ಲ? ಹೀಗಿರಲು, ಸಗಣಿಯನ್ನು ಸಗಣಿಯಿಂದ ತೊಳೆದು ಶುದ್ಧ ಮಾಡಲಿಕ್ಕೆ ಹೋಗುವವರ ಹಾಗೆ ನೀವು ಈಗ ಮಾಡಬಾರದು. ನೀವು ಕೊಟ್ಟ ಮುಸಲ್ಮಾನರ ನೀಚ ಕೃತಿಯ ಉದಾಹರಣೆಯನ್ನು ನಾನು ಕಿವಿಯಿಂದ ಕೂಡ ಕೇಳಲಾರೆನು! ಮಹಾರಾಜ, ಕೈಯಲ್ಲಿ ಕಡ್ಡಿಯನ್ನು ಕೊಟ್ಟು ಹೇಳುತ್ತೇನೆ ! ಮೆಹರ್ಜಾನಳ ಹೃದಯವನ್ನು ಪರೀಕ್ಷಿಸದೆ ಆಕೆಯನ್ನು ನಿಮ್ಮ ಪ್ರಾಣೇಶ್ವರಿಯನ್ನಾಗಿ ಸರ್ವಥಾ ಮಾಡಿಕೊಳ್ಳಬೇಡಿರಿ, ಪಠಾಣರು ಪ್ರಸಂಗಬಂದರೆ ಕೃಷ್ಣಸರ್ಪಕ್ಕೆ ಸಮಾನರು; ಆದ್ದರಿಂದ ಮೆಹರ್ಜಾನಳನ್ನು ಕೃಷ್ಣಸರ್ಪವೆಂದು ಭಾವಿಸಿರಿ. ಪ್ರಸಂಗದಲ್ಲಿ ನೀವು ಕೃತಘ್ನರಾದರೆ ಆಕೆಯು ಎಂದಿಗೂ ಡಂಕು ಬಿಡಲಿಕ್ಕಿಲ್ಲ ! ಮಹಾರಾಜರೆದುರಿನಲ್ಲಿ