ಪುಟ:Kannadigara Karma Kathe.pdf/೩೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೨೨
ಕನ್ನಡಿಗರ ಕರ್ಮಕಥೆ
 


[[:ವರ್ಗ:|]]

ಈ ಮೇರೆಗೆ ಮೆಹರ್ಜಾನಳ ಮನಸ್ಸಿನ ಸ್ಥಿತಿಯನ್ನು ನೋಡಿ ಮಾರ್ಜೀನೆಯು ಆಶ್ಚರ್ಯಪಟ್ಟರೂ, ಆ ತರುಣಿಯ ಮನಸ್ಸನ್ನು ತಿರುಗಿಸುವ ಗೊಡವಿಗೆ ಆ ಪ್ರೌಢವಯಸ್ತಿನ ಬಹುಶ್ರುತಳಾದ ಹೆಣ್ಣುಮಗಳು ಸರ್ವಥಾ ಹೋಗಲಿಲ್ಲ. ಅಲ್ಲಾನ ಸಂಕೇತವೇ ಹೀಗೆ ಇರಬಹುದೆಂದು ತಿಳಿದು ಆಕೆಯು ಮೆಹರ್ಜಾನಳ ಮನಸಿನ ಒಲವಿನಿಂದ ನಡೆಯುವದನ್ನು ನಿಶ್ಚಯಿಸಿದಳು. ಭವಿತವ್ಯತೆಯನ್ನು ತಪ್ಪಿಸುವದು ಯರಿಂದಲೂ ಆಗದು. ಮೆಹರ್ಜಾನಳ ಪ್ರಾಪ್ತಿಯ ವಿಷಯವಾಗಿ ರಾಮರಾಜನ ಮನಸಿನಲ್ಲಿ ಆತುರವು ಉತ್ಪನ್ನವಾದಂತೆ, ರಾಮರಾಜನ ವಿಷಯವಾಗಿಯೂ ಮೆಹರ್ಜಾನಳ ಮನಸ್ಸಿನಲ್ಲಿ ಆತುರವು ಉತ್ಪನ್ನವಾಗಹತ್ತಿತು. ಅಂದಬಳಿಕ ಅವರಿಬ್ಬರ ಪಾಣಿಗ್ರಹಣಕ್ಕೆ ಪತ್ರಿಬಂಧವೇಕೆ ಆಗಬೇಕು ? ರಾಮರಾಜನು ಪ್ರೇಮದ ಭರದಲ್ಲಿ ಹಿಂದುಮುಂದಿನ ವಿಚಾರವಿಲ್ಲದೆ ಮೆಹರ್ಜಾನಳಿಗೆ ಹಲವು ವಚನಗಳನ್ನು ಕೊಟ್ಟಿದ್ದನು. ಅವನ್ನೆಲ್ಲ ನಿಜವೆಂದು ನಂಬಿ ಆ ಸರಳ ಹೃದಯದ ತರುಣಿಯು ಮುಂದೆ ತನಗಾಗಬಹುದಾದ ಅಪಮಾನವನ್ನೆಲ್ಲ ಮರೆತಳು. ತನ್ನನ್ನು ಮುಖ್ಯ ಪತ್ನಿಯನ್ನಾಗಿ ಮಾಡಿಕೊಳ್ಳುತ್ತೇನೆಂದು ರಾಮರಾಜನು ಕೊಟ್ಟ ವಚನವನ್ನು ಆಕೆಯು ದೃಢವಾಗಿ ನಂಬಿ, ಅದೊಂದರ ಆಸೆಯಿಂದ ರಾಮರಾಜನ ಪ್ರಾಣಿಗ್ರಹಣಕ್ಕೆ ಆಕೆಯು ಒಪ್ಪಿಕೊಂಡಳು. ಕಣ್ವಾಶ್ರಮದಲ್ಲಿ ಶಕುಂತಲೆಯು ದುಷ್ಯಂತನ ಪಾಣಿಗ್ರಹಣ ಮಾಡಿದ ಕಥೆಯನ್ನು ಸವಿಮಾತಿನ ರಾಮರಾಜನು ಮೆಹರ್ಜಾನಳ ಮುಂದೆ ಹೇಳಿದನು. ಕಡೆಗೆ ಅವರಿಬ್ಬರ ಪಾಣಿಗ್ರಹಣವಾಗಿ ದಾಂಪತ್ಯ ಸುಖಾನುಭವಕ್ಕೆ ಆರಂಭವಾಯಿತು. ಆಗ ಆ ಕುಂಜವನವು ಸ್ವರ್ಗದೊಳಗಿನ ನಂದನವನದಂತೆ ಅವರಿಗಾಯಿತು. ರಾಮರಾಜನ ಐಶ್ವರ್ಯ ಸಂಪನ್ನತೆಗೆ ಕೊರತೆಯಿದ್ದಿಲ್ಲ. ವಿಜಯನಗರದ ರಾಜ್ಯಸ್ಥಾಪನೆಯಾಗಿ ಮುನ್ನೂರು ವರ್ಷಗಾಳಗಿದ್ದರಿಂದ, ಕನ್ನಡಿಗರಲ್ಲಿ ಸತ್ಯಕ್ಕಿಂತ ವಿಷಯ ಸುಖಲೋಲುಪತೆಯೂ, ಸೌಜನ್ಯಕ್ಕಿಂತ