ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦
ಕನ್ನಡಿಗರ ಕರ್ಮಕಥೆ

ಮೆಹರ್ಜಾನ-(ನಕ್ಕು) ಇದರಲ್ಲಿ ನನ್ನ ನಿಷ್ಠುರತನವೇನು ? ಮನಸ್ಸಿನಲ್ಲಿ ಬಂದ ಮಾತನ್ನು ಸಥಿಯಿಂದ ಆಡಿ ತೋರಿಸಿದೆನು. ಅದಿರಲಿ, ಮಹಾರಾಜರು ನಿಮಗೆ ಎರಡನೆಯದೇನು ಕೊಡುವರು ?

ಈ ಪ್ರಶ್ನೆಗೆ ಉತ್ತರವನ್ನು ಕೊಡಲಿಕ್ಕೆ ರಾಮರಾಜನಿಗೆ ಪ್ರಶಸ್ತವಾಗಿ ತೋರಲಿಲ್ಲ; ಯಾಕೆಂದರೆ, ಕೃಷ್ಣದೇವರಾಯನು ತನ್ನ ಮಗಳನ್ನು ಕೊಡುತ್ತಾನೆಂದು ಹೇಳಿದರೆ, ಆಕೆಗೆ ಸಮಾಧಾನವಾಗುವಂತೆ ಇದ್ದಿಲ್ಲ; ಆದ್ದರಿಂದ ಆತನು ಆ ಮಾತನ್ನು ಮರೆಸುವದಕ್ಕಾಗಿ-

ರಾಮರಾಜ- ಮೆಹರ್ಜಾನ, ಹೀಗೆಯೇ ಅಶೋಕವೃಕ್ಷದ ಕೆಳಗೆ ಎಷ್ಟು ಹೊತ್ತು ನಿಂತುಕೊಳ್ಳಬೇಕು ? ಇನ್ನು ಮೇಲೆ ಮನೆಗೆ...........

ಮೆಹರ್ಜಾನ-(ಮುಂದೆ ಮಾತಿಗೆ ಅವಕಾಶ ಕೊಡದೆ) ಇಲ್ಲ, ಮನೆಗೆ ಹೋಗುವ ಹಾಗಿಲ್ಲ. ಇಂದಿನ ರಾತ್ರಿಯನ್ನೆಲ್ಲ ನಿಮ್ಮೊಡನೆ ಈ ಕ್ರೀಡಾ ನೌಕೆಯಲ್ಲಿ ಕುಳಿತು ಪುಷ್ಕರಣೆಯಲ್ಲಿಯೇ ವಿಷಹರಿಸಬೇಕೆಂಬ ಇಚ್ಛೆಯು ನನಗೆ ಆಗಿದೆ !

ರಾಮರಾಜ-ಬಹಳ ಸಂತೋಷ ಆಗಲಿ, ಅದಕ್ಕೆ ಯಾರು ಬೇಡವೆನ್ನುತ್ತಾರೆ.

ಕೂಡಲೇ ರಾಮರಾಜನು ಕ್ರೀಡಾ ನೌಕೆಯನ್ನು ಜಗ್ಗಿಕೊಂಡು ತಾನು ಹತ್ತಿ, ಆಮೇಲೆ ಮೆಹರ್ಜಾನಳಿಗೆ ಆಸರೆಕೊಟ್ಟು ಆಕೆಯನ್ನು ಎತ್ತಿಕೊಂಡನು. ಕೂಡಲೇ ನೌಕೆಯನ್ನು ನಡೆಸಿ ಸರೋವರದ ಮಧ್ಯದಲ್ಲಿದ್ದ ಧ್ವಜಸ್ತಂಭದ ಬಳಿಗೆ ಒಯ್ದನು. ಆತನು ಧ್ವಜಸ್ತಂಭಕ್ಕೆ ನೌಕೆಯನ್ನು ಕಟ್ಟಿ ಮೆಹರ್ಜಾನಳ ಹೆಗಲು ಮೇಲೆ ಎರಡೂ ಕೈಗಳನ್ನಿಟ್ಟು

ರಾಮರಾಜ-ನಿನ್ನ ಮನಸ್ಸಿನಂತೆ ಆಯಿತಷ್ಟೆ ? ಆದರೆ ಇಂದು ಸಂಗಡ ಯಾರನ್ನೂ ಕರಕೊಳ್ಳದೆ, ಮಾರ್ಜೀನೆಗೆ ಕೂಡ ನೀನು ಬರಬೇಡವೆಂದು ಬುದ್ಧಿಪೂರ್ವಕವಾಗಿ ಹೇಳಿ ಒಬ್ಬಳೇ ಪುಷ್ಕರಣಿಗೆ ಯಾಕೆ ಬಂದೆ ? ಹೊತ್ತು ವೇಳೆ ಒಂದೇಸಮನೆ ಇರುವದಿಲ್ಲ. ಏನಾದರೂ ಅಪಘಾತವಾದರೆ ಹ್ಯಾಗೆ ಮಾಡಬೇಕು ?

ಮೆಹರ್ಜಾನ-ಎಲ್ಲಿಯ ಘಾತ, ಎಲ್ಲಿಯ ಅಪಘಾತ ! ತಮ್ಮ ಕೃಪಾ ಛತ್ರವು ನನ್ನ ತಲೆಯ ಮೇಲೆ ಇರುವವರೆಗೆ ಆ ಘಾತಾಘಾತಗಳಿಂದ ಏನಾಗಬೇಕಾಗಿದೆ ? ತಾವು ವಿಜಯನಗರಕ್ಕೆ ಹೋಗಿ ಇಂದಿಗೆ ಎಂಟು ದಿವಸವಾಯಿತೆಂಬ ವಿಚಾರವು ಇಂದು ಮುಂಜಾನೆ ನನ್ನ ಮನಸಿನಲ್ಲಿ ಹೊಳೆದ ಕೂಡಲೇ ಜೀವಕ್ಕೆ ಹೇಗೆ ಹೇಗೊ ಆಯಿತು. ಸಮಾಧಾನವಾಗಲೊಲ್ಲದು! ಕಡೆಗೆ ಕುಂಜವನದಲ್ಲಿ ಒಬ್ಬಳೇ ಕುಳಿತುಕೊಳ್ಳಬೇಕೆಂದು ಹೋದೆನು. ಆದರೆ