ಪುಟ:Kannadigara Karma Kathe.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂಕುರಾಭಿವೃದ್ಧಿ

೩೧

ಹಕ್ಕಿಗಳ ಕಿಲಿ ಬಲಿಯಿಂದ ಸಹ ನನ್ನ ಏಕಾಂತಕ್ಕೆ ಭಂಗವಾಯಿತು! ಅದರಿಂದ ಏಕಾಂತವನ್ನು ಬಯಸಿ, ಅಪರಾತ್ರಿಯ ಲಕ್ಷವಿಲ್ಲದೆ ಇಲ್ಲಿಗೆ ಬಂದುಬಿಟ್ಟೆನು.

ರಾಮರಾಜ-ಶಾಬಾಸ! ಮೆಹೆರ್, ನೀನು ಒಳ್ಳೆ ಮನಸ್ವಿಯು ಕಾಣುತ್ತೀ ನಿನ್ನ ಮನಸ್ಸಿಗೆ ಅಷ್ಟು ಅಸಮಾಧಾನವಾಗಲಿಕ್ಕೆ ಕಾರಣವೇನು ?

ಮೆಹರ್ಜಾನ-ಕಾರಣಗಳು ಒಂದೇ ಎರಡೇ ಎಷ್ಟೆಂತ ಹೇಳಲಿ ? ನೀವು ಬಳಿಯಲ್ಲಿ ಎಂಟು ದಿನ ಇಲ್ಲದ ಬಳಿಕ ದುಷ್ಟ ಕಲ್ಪನೆಗಳಿಗೇನು ಕೊರತೆಯು ಇನ್ನು ಮೇಲೆ ನಿಮ್ಮ ಭೆಟ್ಟಿಯೇ ಆಗುವದಿಲ್ಲವೆಂಬ ವಿಚಾರವು ಸಹ ನನ್ನ ಮನಸ್ಸಿನಲ್ಲಿ ಬಂದಿತ್ತು ಅದರಲ್ಲಿ ಈಗಂತು...........

ಈ ಮೇರೆಗೆ ಅರ್ಧ ಮಾತಾಡಿ, ಮೆಹರ್ಜಾನಳು ಲಜ್ಜೆಯಿಂದ ತಲೆ ಬಾಗಿಸಲು, ರಾಮರಾಜನು ಆಕೆಯನ್ನು ತಬ್ಬಿಕೊಂಡು ಆಲಂಗಿಸಿ ಗದ್ದ ಹಿಡಿದು ಮುಖವೆತ್ತಿ- "ಅದರಲ್ಲಿ ಈಗಂತು" ಎಂದು ಸುಮ್ಮನಾದೆಯಲ್ಲ ? ಮೆಹರ್‌. ಈಗೇನು ಆಯಿತು ಹೇಳು ಎಂದು ಕೇಳಲು, ಮೆಹರ್ಜಾನಳು, "ಏನೂ ಇಲ್ಲೆಂದು" ಹೇಳಿ ಆ ವಿಷಯವನ್ನು ಮರೆಸಲಿಕ್ಕೆ ಯತ್ನಿಸಿ-ನೀವು ಬೇಕಾದದ್ದು ಹೇಳೀರಿ ಇಂದು ನನ್ನ ಮನಸ್ಸಿನ ಸ್ಥಿತಿಯೇ ವಿಚಿತ್ರವಾಗಿದೆ, ನೌಕೆಯಲ್ಲಿ ನಾವಿಬ್ಬರೂ ಕುಳಿತು ನೌಕೆಯು ಮುಂದಕ್ಕೆ ಸಾಗಹತ್ತಿದ ಬಳಿಕ ನನ್ನ ಮನಸ್ಸಿನಲ್ಲಿ ಬಂದ ವಿಚಾರವನ್ನು ಹೇಳಿದರೆ ನಿಮಗೆ ನಗೆ ಬರಬಹುದು ; ಅಥವಾ ಯಾರಿಗೆ ಗೊತ್ತು ಸಿಟ್ಟೂ ಬರಬಹುದು.

ರಾಮರಾಜ-ಏನಂದಿ? ನಿನ್ನ ಮಾತಿಗೆ ನನಗೆ ಸಿಟ್ಟು ಬರಬಹುದೇ ? ಮೆಹರ್‌, ಈ ಜನ್ಮದಲ್ಲಿ ನಿನ್ನ ವಿಷಯವಾಗಿ ನನಗೆ ಎಂದೂ ಸಿಟ್ಟು ಬರಲಿಕ್ಕಿಲ್ಲ. ನೀನು ಮಾತ್ರ ನನ್ನ ಮೇಲೆ ಯಾವಾಗ ಸಿಟ್ಟಾದಿ, ಯಾವಾಗ ದ್ವೇಷ ಮಾಡ್ದೀ ಎಂಬುದನ್ನು ಹೇಳಲಾಗುವದಿಲ್ಲ ! ಈ ವಿಚಾರವು ಮೇಲಿಂದ ಮೇಲೆ ನನ್ನ ಮನಸ್ಸಿನಲ್ಲಿ ಬಂದು ನನಗೆ ಅಂಜಿಕೆ ಬರುತ್ತದೆ !

ಮೆಹರ್ಜಾನ-(ತಟ್ಟನೆ ಹಿಂದಕ್ಕೆ ಸರಿದು ರಾಮರಾಜನನ್ನು ದಿಟ್ಟಿಸಿ ನೋಡುತ್ತ) ಏನು? ನಿಮ್ಮ ಮೇಲೆ ನನ್ನ ಸಿಟ್ಟೇ, ದ್ವೇಷವೇ ಅವ್ವಯ್ಯಾ|ಮಹಾರಾಜ, ಇಂಥ ವಿಚಾರಗಳು ನಿಮ್ಮ ಮನಸ್ಸಿನಲ್ಲಿಯಾದರೂ ಹ್ಯಾಗೆ ಬಂದವು ? ನನ್ ನಡತೆಯಲ್ಲಿ ತಮಗೆ ಯಾವ ವ್ಯತ್ಯಾಸವು ತೋರಿತು !

ಹೀಗೆ ನುಡಿಯುವಾಗ ಮೆಹರ್ಜಾನಳ ಕಣ್ಣುಗಳು ಅಶ್ರುಪೂರ್ಣವಾದವು. ಆಕೆಯ ಕಂಠವು ಬಿಗಿದು ಮಾತುಗಳು ಹೊರಡದಾದವು. ಕಡೆಗೆ ಆ ತರಳೆಯು ಅಳುವ ಮೋರೆಯಿಂದ ರಾಮರಾಜನನ್ನು ಕುರಿತು ತಟ್ಟನೆ - ಮಹಾರಾಜರೇ,