ಪುಟ:Kannadigara Karma Kathe.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨

ಕನ್ನಡಿಗರ ಕರ್ಮಕಥೆ

ಪರಸ್ಪರರ ವಿಷಯವಾಗಿ ಇಂಥ ಕುವಿಚಾರಗಳು ಉತ್ಪನ್ನವಾಗುವ ಲಕ್ಷಣವು ಒಳ್ಳೆಯದಲ್ಲ. ಈ ದುರ್ಲಕ್ಷಣದ ದುಷ್ಪರಿಣಾಮವು ಒದಗಬಾರದಾಗಿದ್ದರೆ, ಈಗ ನನ್ನ ಮನಸ್ಸಿನಲ್ಲಿ ಬಂದ ವಿಚಾರದಂತೆ ಕಾರ್ಯವಾಗಬೇಕು, ಅಂದರೆ ನಿಶ್ಚಿಂತೆಯು! ಎಂದು ನುಡಿದಳು. ಆಗ ರಾಮರಾಜನು ಕೃತ್ರಿಮ ನಗೆಯಿಂದ-ಪ್ರಿಯೇ, ಮೆಹರ್, ಹೇಳು ಹೇಳು : ಅದು ಹ್ಯಾಗೆ ನಿಶ್ಚಿಂತೆಯಾಗುವುದು ತಟ್ಟನೆ ಹೇಳು ಎಂದು ಆತುರಪಡಲು, ಮೆಹರ್ಜಾನಳು-ಮಹಾರಾಜ, ಹ್ಯಾಗೆಂಬುದನ್ನು ಹೇಳುತ್ತೇನೆ ಹೇಳುತ್ತೇನೆ ಕೇಳಿರಿ ; ನಾವು ಈಗ ನೌಕೆಯಲ್ಲಿ ಕುಳಿತು ದಂಡೆಗೆ ಹೋಗುವಾಗ ಒಬ್ಬರನ್ನೊಬ್ಬರು ಬಿಗಿಯಾಗಿ ಅಪ್ಪಿಕೊಳ್ಳಬೇಕು. ಹೀಗೆ ಅಪ್ಪಿಕೊಂಡಿರುವಾಗಲೇ ನೌಕೆಯು ಮುಳುಗಿ ಪುಷ್ಕರಣಿಯ ತಳವನ್ನು ಮುಟ್ಟಬೇಕು, ಅಂದರೆ ನಿಶ್ಚಿಂತೆಯಾಗುವುದು ! ಅನ್ನಲು, ರಾಮರಾಜನ ಮುಖವು ನಿಸ್ತೇಜವಾಗಿ ಆತನ ಸರ್ವಾಂಗದಲ್ಲಿ ಕಂಪನವು ಹುಟ್ಟಿತು ! ಪ್ರಿಯವಾಚಕರೇ ಆ ತರುಣ ದಂಪತಿಗಳ ಮನಸ್ಸಿನಲ್ಲಿ ಈ ಕುಭಾವನಗಳೇ ಅವರ ವಿನಾಶಾಂಕುರದ ಅಭಿವೃದ್ಧಿಗೆ ಕಾರಣವಾಗಿರಬಹುದೇನು ?

****