ಪುಟ:Kannadigara Karma Kathe.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಯಾಣ

೩೫


ಮೆಹರ್ಜಾನ-ಏನು ? ಬೆಳಗಾದ ಕೂಡಲೇ ಹೋಗುವಿರಾ ? ಎಂಟು ದಿವಸ ದರ್ಶನವಿಲ್ಲದಿರುವಾಗ ಒಂದೆರಡು ದಿನವಾದರೂ ತಾವು ಇಲ್ಲಿ ಇರದಿದ್ದರೆ ನನಗೆ ಸಮಾಧಾನವಾಗಲಾರದು. ನಾನಂತು ನಾಳೆ ಹೋರಗೊಡುವುದಿಲ್ಲ.

ರಾಮರಾಜ-ಪ್ರಿಯೇ, ಮೆಹರ್‌, ಕೃಷ್ಣದೇವರಾಯರು ನನ್ನನ್ನು ಯಾವಾಗ ಕರಿಸಿಯಾರು ಯಾವಾಗ ಕರಸಲಿಕ್ಕಿಲ್ಲೆಂಬುದರ ನಿಯಮ ಇಲ್ಲೆಂದು ನಾನು ಆಗಲೇ ನಿನಗೆ ಹೇಳಲಿಲ್ಲವೇ ?

ಮೆಹರ್ಜಾನ-ಹಾಗಿದ್ದರೆ ನನ್ನನ್ನು ಅಲ್ಲಿಗೆ ಕರಕೊಂಡು ಹೋಗಿ ಬಿಡಿರಿ; ಸುಮ್ಮನೆ ಎಡತಾಕುವದೇಕೆ ? ಅಲ್ಲಾವುದ್ದಿನ ಬಾದಶಹನು ಉತ್ತರ ಹಿಂದುಸ್ಥಾನದಲ್ಲಿ ರಜಪೂತ ಕನ್ನಿಕೆಯನ್ನುತನ್ನ ಪಟ್ಟ ರಾಣಿಯಾಗಿ ಮಾಡಿಕೊಂಡಂತೆ, ತಾವು ನನ್ನನ್ನು ಪಟ್ಟರಾಣಿಯಾಗಿ ಮಾಡಿಕೊಂಡಿರುವಿರಷ್ಟೆ ?

ರಾಮರಾಜ-ಹೋ ಹೋ ! ಮಾಡಿಕೊಂಡಿರುವೆನು. ಅದರಲ್ಲಿ ಸಂಶಯವೇನು ? ಆದರೆ ಕೃಷ್ಣದೇವರಾಯರ ಮನಸ್ಸು ನೋಡಿ ಅವರ ಒಪ್ಪಿಗೆಯನ್ನು ಪಡೆದ ಬಳಿಕ ಅದನ್ನು ಪ್ರಸಿದ್ದಗೊಳಿಸಬೇಕಾಗಿದೆ. ಅಲ್ಲಿಯವರೆಗೆ ಪ್ರಸಿದ್ಧಮಾಡಿ ಪ್ರಯೋಜನವೇನು ?

ಸಂಭಾಷಣದ ಈ ವಿಷಯವು ರಾಮರಾಜನಿಗೆ ತೀರ ಅಪ್ರಿಯವಾಗಿದ್ದಂತೆ ತೋರಿತು. ಆತನು ತನ್ನ ಮಾತು ಮುಗಿದ ಕೂಡಲೆ ಮೆಹರ್ಜಾನಳನ್ನು ಕುರಿತು - ಮೆಹರ್‌, ಇಂದಿನ ರಾತ್ರಿಯನ್ನು ಇಲ್ಲಿ ನೌಕೆಯಲ್ಲಿಯೇ ಕುಳಿತು ಕಳೆಯಬೇಕೆಂದು ನಿನ್ನಮನಸ್ಸಿನಲ್ಲಿದ್ದರೆ, ಅದಕ್ಕೆ ನನ್ನ ಪ್ರತಿಬಂಧವಿಲ್ಲ, ಆದರೆ ಆಗಲೆ ಹಾಡಿದಂತೆ ಒಂದು ಸುಂದರ ಚೀಸನ್ನಾದರೂ ಹಾಡು ; ಇಲ್ಲವೆ ನಾನು ನಿನಗೆ ಕಲಿಸಿರುವ ಆ ಅಷ್ಟಪದಿಯನ್ನಾದರೂ ಅನ್ನು, ಅಥವಾ ನಿಮ್ಮ ಪಾರಸೀ ಭಾಷೆಯೊಳಗಿನ ಒಂದು ಗಜಲವನ್ನು ಅಂದರೂ ಚಿಂತೆಯಿಲ್ಲ : ಆದರೆ ನಮ್ಮ ಅಷ್ಟಪದಿಯಲ್ಲಿರುವ ಸ್ವಾರಸ್ಯವೇನೂ ನಿಮ್ಮ ಗದ್ದಲದಲ್ಲಿ ಬರಲಾರದು, ಅನ್ನಲು ಮೆಹರ್ಜಾನಳೂ ನಕ್ಕು-ಅವರವರದು ಅವರವರಿಗೆ ಸ್ವಾರಸ್ಯವೆಂಬ ಮಾತು ಎಲ್ಲ ಕಡೆಗೂ ನಿಜವಾಗುತ್ತದೆಂದು ಹೇಳಲಿಕ್ಕಾಗುವುದಿಲ್ಲ. ಎಂದು ನುಡಿದು, ಪತಿಯನ್ನು ಆಲಿಂಗಿಸಿ, ನೀವು ಕಲಿಸಿದ್ದಲ್ಲದೆ ನಾನೇ ಕಲಿತದ್ದೊಂದು ಅಷ್ಟಪದಿಯನ್ನು ಅನ್ನುವೆನು, ಎಂದು ಹೇಳಿ ಕೆಳಗೆ ಬರೆದ ಅಷ್ಟಪದಿಯನ್ನು ಅಂದಳು.

ನಿಂದತಿ ಚಂದನಾಮಿಂದುಕಿರಣಮನುವಿಂದತಿ ಸ್ವದಮಧಿರಮ್ ||