ಪುಟ:Kannadigara Karma Kathe.pdf/೫೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರಯಾಣ
೪೧
 

ಏನಾಯಿತೋ ಯಾರಿಗೆ ಗೊತ್ತು. ಒಂದೇ ಸಮನೆ ಚೀರುತ್ತಿರುವರು. ಆಗಿನಿಂದ ಎಷ್ಟು ಒದರಿದರೂ ಎಚ್ಚರವಾಗಲೊಲ್ಲರು. ಇನ್ನು ಇವರನ್ನು ಪಲ್ಲಂಗದ ಮೇಲೆ ಮಲಗಿಸಿ ಹತ್ತ ಕುಳಿತುಕೊಳ್ಳುತ್ತೇನೆ, ಅನ್ನಲು, ಧನಮಲ್ಲನು ಮುಂದಕ್ಕೆ ಬಂದು ಮೆಹರ್ಜಾನಳನ್ನು ಪಲ್ಲಂಗದ ಮೇಲೆ ಮಲಗಿಸುವದಕ್ಕಾಗಿ ಕೈಗಳನ್ನು ಮುಂದಕ್ಕೆ ಮಾಡಿದನು. ಆಗ ಮಾರ್ಜೀನೆಯು ಅವನನ್ನು ಕುರಿತು ತಿರಸ್ಕಾರದಿಂದಜೋಕೆ, ನಿನ್ನ ಆ ಹುರಬರಕ ಕೈಯಿಂದ ಸಿಕ್ಕ ಹಾಗೆ ಎತ್ತಿ ಲಡ್ಡತನ ಮಾಡಬೇಡ. ಒಂದು ಗುಲಾಬಿಯ ಹೂವನ್ನು ಎತ್ತಿ ಇಡುವಂತೆ ಮೆಲ್ಲನೆ ಮಲಗಿಸು, ಹೂ ! ಎತ್ತಿಕೋ, ನಾನು ತಲೆಯ ಕಡೆಗೆ ಹಿಡಿಯುತ್ತೇನೆ, ಅನ್ನಲು, ಧನಮಲ್ಲನು ಸನ್ನೆಯಿಂದ-ನೀವು ಏನೋ ಚಿಂತೆ ಮಾಡಬೇಡಿರಿ, ನಾನು ಎಲ್ಲ ಮಲಗಿಸುತ್ತೇನೆ. ಎಂದು ಸೂಚಿಸಿ ತಾನು ಸೂಚಿಸಿದಂತೆಯೇ ಮೆಹರ್ಜಾನಳನ್ನು ಬಹು ಸೂಕ್ಷವಾದ ಹೂವಿನಂತೆ ಎತ್ತಿ ಪಲ್ಲಂಗದ ಮೇಲೆ ಮಲಗಿಸಿದನು. ಆತನು ಮಲಗಿಸಿದ್ದೊಂದೇ ತಡ, ಮೆಹರ್ಜಾನಳು ಚಿಟ್ಟನೆ ಚೀರಿ ಪಲ್ಲಂಗದ ಮೇಲೆ ಎದ್ದು ಕುಳಿತುಕೊಂಡಳು. ಆಗ ಆಕೆಯ ಎದುರಿನಲ್ಲಿ ಮಾರ್ಜೀನೆಯೂ. ಧನಮಲ್ಲನೂ ನಿಂತುಕೊಂಡಿದ್ದರು. ಆಕೆಯು ಗಾಬರಿಯಾಗಿ ಸುತ್ತು ಮುತ್ತು ನೋಡುತ್ತಿರಲು, ಮಾರ್ಜೀನೆಯು ಆಕೆಯನ್ನು ಕುರಿತು-ಅಮ್ಮಾ, ಮೆಹರ್ಜಾನ, ಹೀಗೆ ಯಾಕೆ ಗಾಬರಿಯಾಗುತ್ತೀ? ಬೆದರ ಬೇಡಮ್ಮಾ, ಇತ್ತ ನೋಡು, ನಾನ ಇದ್ದೇನೆ-ಧನಮಲ್ಲನು ಇದ್ದಾನೆ. ಬೇಡವೆಂದರೆ ನಿನ್ನೆ ರಾತ್ರಿ ಕುಂಜವನದಲ್ಲಿಯ ಪುಷ್ಕರಣಿಗೆ ಹೋದೆ, ಅಲ್ಲಿ ನಿನಗೆ ಪಿಶಾಚಿಗಿಶಾಚಿಯ ಬಾಧೆಯು ತಟ್ಟಿತ್ತೋ ಏನೋ ? ನೆಟ್ಟಗೆ ಎಚ್ಚೆತ್ತು ನೋಡು. ನಿನಗೆ ಕೆಟ್ಟ ಕನಸು ಬಿದ್ದಿತ್ತೋ ಏನು ? ಎಂದು ಮಾತಾಡಿಸಲು, ಆ ಮಾತುಗಳು ಮೆಹರ್ಜಾನಳಿಗೆ ಕೇಳಿಸಿದಂತೆ ತೋರಲಿಲ್ಲ. ಆಕೆಯು ನಡುವೇ ಮಾರ್ಜೀನೆಯನ್ನು ಕುರಿತು ಮಾರ್ಜೀನೆ. ನಾನು ಎಲ್ಲಿ ಇದ್ದೇನೆ ? ಅವರು ಎತ್ತ ಹೋದರು ? ಅವರು ನನ್ನನ್ನು ನೌಕೆಯೊಳಗಿಂದ ಪುಷ್ಕರಣಿಯಲ್ಲಿ ಎತ್ತಿ ಒಗೆದರು. ಇತ್ತ ನಿಂತವನು ಯಾವನಿವನು ? ನನ್ನನ್ನು ಪುಷ್ಕರಣಿಯಲ್ಲಿ ಅವರು ಎತ್ತಿ ಒಗೆಯುವಾಗ ಅವರ ಹಿಂದೆ ಇವನೇ ನಿಂತಿದ್ದನೇನೇ ಮಾರ್ಜೀನೆ ? ಇವನೇ ಇದ್ದ ನೆಂಬಂತೆ ಕಾಣುತ್ತದೆ. ಹೌದು ಇವನೇ ............

ಮೆಹರ್ಜಾನಳು ಹೀಗೆ ಮಾತಾಡುವದನ್ನು ಕೇಳಿ ಮಾರ್ಜೀನೆಯ ಆಕೆಗೆ ಕುರುಳುಗಳನ್ನು ತೀಡಿ ಗಲ್ಲಗಳನ್ನು ಹಿಡಿದು-ಮೆಹರ್ಜಾನ, ಹೀಗೆ ಯಾಕೆ ಹುಚ್ಚಿಯ ಹಾಗೆ ಮಾತಾಡುತ್ತೀ ? ಈ ಪಲ್ಲಂಗದ ಮೇಲೆ ಮಲಗಿಕೊಂಡಿದ್ದ ನೀನು "ಮಹಾರಾಜರು ನನ್ನನ್ನು ಪುಷ್ಕರಣಿಯಲ್ಲಿ ಎತ್ತಿ ಒಗೆದರೆಂ" ದು