ಪುಟ:Kannadigara Karma Kathe.pdf/೭೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ರಾಮರಾಜನ ಪಶ್ಚಾತ್ತಾಪ
೫೯
 

ಅಷ್ಟರಲ್ಲಿ ಹಿಂದಕದಕೆ ಮೆಹರ್ಜಾನಳು ನುಡಿದ ಅಪಘಾತದ ಶಬ್ದದ ನೆನಪಾಗಿ, ತಾನು ಎಲ್ಲಿ ಪುಷ್ಕರಣಿಯಲ್ಲಿ ಮುಳುಗಿ ಸಾಯುವೆನೋ ಎಂದು ಅಂಜಿ, ಮತ್ತೆ ಆತನು ಉಡುಪು-ತೊಡಪುಗಳನ್ನು ಧರಿಸಿಕೊಳ್ಳಹತ್ತಿದನು. ಆ ಪುಷ್ಕರಣಿಯ ತೀರದಲ್ಲಿ ನಿಲ್ಲುವ ಧೈರ್ಯವು ಆತನಿಗೆ ಆಗಲೊಲ್ಲದು. ಆತನು ಅವಸರದಿಂದ ಅಲ್ಲಿಂದ ಹೊರಟು ಒಂದು ಲತಾಮಂಟಪವನ್ನು ಪ್ರವೇಶಿಸಿದನು, ಮಧ್ಯಾಹ್ನವು ತಿರುಗಿ ಹೋಗಿದ್ದರೂ, ಆತನಿಗೆ ಹಸಿವೆ-ನೀರಡಿಕೆಗಳ ಪರಿವೆಯು ಉಳಿದಿದ್ದಿಲ್ಲ. ಗ್ಲಾನಿಯು ಬಂದಂತಾಗಿ ಆತನು ಲತಾಮಂಟಪದ ಪೀಠದಲ್ಲಿ ಒರಗಿದನು. ಅರೆನಿದ್ದೆಯಲ್ಲಿ ಆತನಿಗೆ ಕನಸಿನ ಮೇಲೆ ಕನಸುಗಳು ಬೀಳಹತ್ತಿದವು. ಹೀಗೆ ಸ್ವಪ್ನಾವಸ್ಥೆಯಲ್ಲಿ ಎರಡು ತಾಸುಗಳು ಕಳೆದು ಹೋಗಿರಬಹುದು. ಮುಂದೆ ಒಂಭತ್ತು ತಾಸಿನ ಸುಮಾರಕ್ಕೆ ಆತನು ಕನಸಿನಲ್ಲಿ ಪಕ್ಕನೆ ಎದ್ದು ನಿಂತು, ಖಡ್ಗವನ್ನು ಹಿರಿದು ಮುಂದಕ್ಕೆ ಧುಮುಕಲಿಕ್ಕೂ, ಧನಮಲ್ಲನು ಆತನ ಎದುರಿಗೆ ಬಂದು ನಿಲ್ಲಲಿಕ್ಕೂ ಗಂಟೇ ಬಿದ್ದಿತು, ಮೊದಲೇ ಅಂಜುತ್ತಂಜುತ್ತ ಬರುತ್ತಿದ್ದ ಧನಮಲ್ಲನು, ತನ್ನ ಮೇಲೆ ರಾಮರಾಜನು ಹೀಗೆ ಧುಮುಕಿದ್ದನ್ನು ನೋಡಿ ಮತ್ತಷ್ಟು ಬೆದರಿದನು, ರಾಮರಾಜನಿಗೆ ತಾನು ಯಾರ ಮೇಲೆ ಧುಮುಕಿದೆನೆಂಬದರ ಎಚ್ಚರವು ಉಳಿದಿದ್ದಿಲ್ಲ; ಆದರೆ ಈ ಸ್ಥಿತಿಯು ಬಹಳ ಹೊತ್ತು ಉಳಿಯಲಿಲ್ಲ. ರಾಮರಾಜನು ಪೂರ್ಣವಾಗಿ ಎಚ್ಚತ್ತು, ಧನಮಲ್ಲನನ್ನು ನೋಡಿ “ಯಾವಾಗ ಬಂದೆ? ಮೆಹರ್ಜಾನಳು ಎಲ್ಲಿರುವಳು?” ಎಂದು ಕೇಳಿದನು. ಅದಕ್ಕೆ ಧನಮಲ್ಲನು ಬಾಯಿಬಿಚ್ಚಿ ಮಾತಾಡದೆ, ಸನ್ನೆ ಮಾಡಿ ಏನೋ ತಿಳಿಸಹತ್ತಿದನು. ರಾಮರಾಜನು ಸಂತಾಪಗೊಂಡು, ಕವಕ್ಕನೆ ಆತನ ಮೈ ಮೇಲೆ ಹೋಗಿ, 'ಥೂ ಮೂರ್ಖಾ ಇನ್ನು ಮೇಲೆ ಯಾತಕ್ಕೆ ಈ ಸೋಗು? ಮೆಹರ್ಜಾನಳೂ ಎಲ್ಲಿರುವಳು? ಬಾಯಿಬಿಚ್ಚಿ ಹೇಳು ಎಂದು ಕೇಳಲು, ಧನಮಲ್ಲನು ತತ್ತರಿಸುತ್ತ ಅವರು ನಿನ್ನೆ ವಿಜಾಪುರದ ಕಡೆಗೆ ಹೋದರಂತೆ, ಎಂದು ಹೇಳಿದನು. ಆಗ ರಾಮರಾಜನ ಸಿಟ್ಟು ತಲೆಗೇರಿತು. ಆತನು ಸಂತಾಪದಿಂದ ಉರಿಯುತ್ತ-ಡೊಣಗಾ, ನಿನ್ನನ್ನು ನಾನು ಸುಮ್ಮನೆ ಬಾವುಗನ ಹಾಗೆ ಸಾಕಿದೆನು. ನಿನ್ನ ಬದಲು ಒಂದು ನಾಯಿಯನ್ನು ಸಾಕಿದ್ದರೆ, ನಿನಗಿಂತಲೂ ಅದು ಕಾವಲಿನ ಕೆಲಸವನ್ನು ಚೆನ್ನಾಗಿ ಮಾಡುತ್ತಿತ್ತು. ಹೋಗು ನನ್ನೆದುರಿಗೆ ನಿಲ್ಲಬೇಡ, ಮೆಹರ್ಜಾನಳು ಎಲ್ಲಿರುವಳೆಂಬುದನ್ನು ಗೊತ್ತು ಹಚ್ಚಿ, ಆಕೆಯನ್ನು ಕರಕೊಂಡೇ ನನ್ನೆದುರಿಗೆ ಬಾ, ಹಾಗೆ ಮಾಡದೆ, ನೀನು ಎಲ್ಲಿಯಾದರೂ ವಿಜಯನಗರದಲ್ಲಿ ನನ್ನ ಕಣ್ಣಿಗೆ ಬಿದ್ದರೆ, ನಿನ್ನನ್ನು ಶೂಲಕ್ಕೇರಿಸುವೆನು. ಇಲ್ಲವೆ ನಿಲ್ಲಸಿ ಸುಡಿಸುವೆನು, ಎಂದು ಗದ್ದರಿಸಿದನು. ಆಗ