ಪುಟ:Kannadigara Karma Kathe.pdf/೮೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ತಳಮಳಿಕೆ
೬೫
 

ನಿದ್ದೆಯು ಯಾರ ಕೈಯೊಳಗಿನದೂ ಅಲ್ಲ. ನಿದ್ದೆ ಮಾಡಬೇಕೆನ್ನುವವರಿಗೆ ಅದು ಬರುವದೇ ಇಲ್ಲ. ನಿದ್ದೆ ಮಾಡಬಾರದೆನ್ನುವವರನ್ನು ಮಾತ್ರ ಅದು ದುಂಬಾಲಬಿದ್ದು ಬಾಧಿಸುತ್ತದೆ. ರಾಮರಾಜನಿಗೆ ಆದ ದಣುವಿಕೆಯನ್ನು ನೋಡಿದರೆ, ಮಲಗಿದಕೂಡಲೆ ಆತನಿಗೆ ಗಪ್ಪನೆ ನಿದ್ದೆ ಹತ್ತಬೇಕಾಗಿತ್ತು. ಆದರೆ ಮನಸ್ಸಿನ ಅಸ್ವಸ್ಥತೆಯಿಂದ ತಳಮಳಿಸುತ್ತಿದ್ದ ಆತನನ್ನು ನಿದ್ದೆಯು ಸೋಂಕಲೇ ಇಲ್ಲ. ಮೆಹರ್ಜಾನಳು ಇನ್ನು ಬರಲಿಕ್ಕಿಲ್ಲವೆ ? ಹಾಯ್ ಹಾಯ್! ನಾನು ಇದೇನು ಕೆಲಸ ಮಾಡಿ ಬಿಟ್ಟೆನು! ಎಂದು ಆತನು ಮರುಗಿ ಉಸುರ್ಗಳೆಯುತ್ತಲಿದ್ದನು. ನಡುನಡುವೆ ಮೆಹರ್ಜಾನಳ ವಿಷಯವಾಗಿ ಆತನ ಮನಸ್ಸಿನಲ್ಲಿ ಆಸೆಯು ಉತ್ಪನ್ನವಾಗುತ್ತಿತ್ತು. ಮೆಹರ್ಜಾನಳು ಸಿಟ್ಟಿನ ಭರದಲ್ಲಿ ಹೋಗಿದ್ದರೂ, ಸಿಟ್ಟು ಇಳಿದ ಬಳಿಕ ಪಶ್ಚಾತ್ತಾಪ ಪಟ್ಟು ತಾನಾಗಿ ಬರಬಹುದುದೆಂತಲೂ, ತನ್ನನ್ನು ಅಗಲಿ ಹೋದದ್ದರಿಂದ ಅನುಭೋಗಿಸಬೇಕಾದ ಕಷ್ಟಗಳ ಯೋಗದಿಂದ ಆಕೆಯ ಮನಸ್ಸು ತನ್ನ ಕಡೆಗೆ ತಿರುಗೀತೆಂತಲೂ, ಆತನು ಕಲ್ಪಿಸಿದನು. ಮೆಹರ್ಜಾನಳು ಗರ್ಭಿಣಿಯಿರುವಳೆಂದು ಮಾರ್ಜೀನೆಯು ಹೇಳಿದ್ದು ನೆನಪಾದ ಕೂಡಲೆ, ರಾಮರಾಜನ ಮನಸ್ಸಿಗೆ ಹ್ಯಾಗೆ ಹ್ಯಾಗೋ ಆಯಿತು. ತಾನು ಧನಮಲ್ಲನಿಗೆ ಒಳಿತಾಗಿ ಸಿಟ್ಟು ಮಾಡಿ ಕಳಿಸಿಕೊಟ್ಟಿರುವದರಿಂದ, ಆತನು ಮೆಹರ್ಜಾನಳನ್ನು ಗೊತ್ತು ಹಚ್ಚಿಕೊಂಡು ಬಾರದೆಯಿರಲಿಕ್ಕಿಲ್ಲ ಎಂಬ ಆಸೆಯೂ ಆತನಲ್ಲಿ ಉತ್ಪನ್ನವಾಯಿತು. ಒಮ್ಮೊಮ್ಮೆ ಇವೆಲ್ಲ ಆಸೆಗಳು ನಿರಾಶೆಯ ಸ್ವರೂಪವನ್ನು ಹೊಂದಲು, ಆತನು ದುಃಖದಿಂದ ತಳಮಳಿಸುವನು. ಹೀಗೆ ಸಮಾಧಾನ-ಅಸಮಾಧಾನ, ಆಸೆ-ನಿರಾಸೆಗಳ ಜಗ್ಗಾಟದಿಂದ ಆತನಿಗೆ ಗ್ಲಾನಿಯು ಬಂದಂತೆ ಆಗಿ, ಆತನು ಕಣ್ಣು ಮುಚ್ಚಿಕೊಂಡು ಬಿದ್ದು ನಿದ್ರಾಧೀನನಾದಂತೆ ತೋರಿದನು. ಆ ಆರನಿದ್ದೆಯ ಗುಂಗಿನಲ್ಲಿ ಆತನಿಗೆ ಸುಖದ ಸ್ವಪ್ನಗಳು ಬಿದ್ದವೋ, ದುಃಖದ ಸ್ವಪ್ನಗಳು ಬಿದ್ದಿದ್ದವೋ, ಬೇರೆ ಯಾರಾದರೂ ನನ್ನನ್ನು ಕಾಣಲಿಕ್ಕೆ ಬಂದಿದ್ದರೋ ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಸೇವಕರು-ಧನಮಲ್ಲನು ಬಂದಿಲ್ಲೆಂತಲೂ, ಬಹು ಜನ ಸರದಾರರೂ, ಮಾಂಡಲಿಕರೂ ಭೆಟ್ಟಿಯ ಆಸೆಯಿಂದ ಬಂದು ಹೋದರೆಂತಲೂ ಹೇಳಿದರು. ಅದನ್ನು ಕೇಳಿ ರಾಮರಾಜನು ಅಸಮಾಧಾನಪಟ್ಟು, ಹೂ! ಎಂದು ತಿರಸ್ಕಾರದಿಂದ ತಲೆಕೊಡುವಿ, ಸೇವಕರಿಗೆ ಹೊರಟುಹೋಗಲು ಹೇಳಿ, ಮತ್ತೆ ಹಾಸಿಗೆಯ ಮೇಲೆ ಮಲಗಿಕೊಂಡನು. ಇನ್ನು ಮೇಲೆ ತನ್ನನ್ನು ಕಾಣಲಿಕ್ಕೆ ಯಾವ ಸರದಾರರೂ, ಮಾಂಡಲಿಕರೂ ಬರುವ ಆಸೆಯಿಲ್ಲೆಂದು ತಿಳಿದು, ಆತನು ಸೇವಕರಿಗೆ-ಧನಮಲ್ಲನು ಬಂದ