ಪುಟ:Kannadigara Karma Kathe.pdf/೮೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ತಳಮಳಿಕೆ
೬೭
 

ದರ್ಗೆಯ ಮೇಲೆ ಚೆನ್ನಾಗಿ ಕಣ್ಣಿಡಬೇಕು. ನಮ್ಮ ನಂಬಿಗೆಯ ಸೇವಕರು ದರ್ಗೆಯಲ್ಲಿರುವಂತೆ ವ್ಯವಸ್ಥೆ ಮಾಡಬೇಕೆಂದು ಹೇಳಿದನು. ಇದನ್ನು ಕೇಳಿ ಕೃಷ್ಣದೇವ ಮಹಾರಾಜರು ರಾಮರಾಜನನ್ನು ಕುರಿತು-ಈ ಎಲ್ಲ ಮಾತುಗಳ ವಿಚಾರವನ್ನು ಇನ್ನು ಮೇಲೆ ನೀವೇ ಮಾಡಬೇಕಾಗಿದೆ. ನಿಮ್ಮ ಶೌರ್‍ಯ-ವೀರ್‍ಯಗಳ ವಿಷಯವಾಗಿ ನಮಗೆ ಸಂಪೂರ್ಣ ನಂಬಿಕೆಯಿರುತ್ತದೆ. ನೀವು ಎಂಥ ಸಂಕಟಗಳಿಗೂ ಸೊಪ್ಪು ಹಾಕಲಾರಿರೆಂಬುದು ನಮಗೆ ಗೊತ್ತಿದೆ. ಒಮ್ಮೆ ನಮ್ಮೀ ಅಪೇಕ್ಷೆಯಂತೆ ಈ ಮಂಗಲ ಕಾರ್ಯವನ್ನಷ್ಟು ಸಾಂಗವಾಗಿ ಮಾಡಿಕೊಳ್ಳಿರಿ. ಆಮೇಲೆ ಯೋಗ್ಯವಾಗಿ ತೋರಿದಂತೆ ವ್ಯವಸ್ಥೆ ಮಾಡಬಹುದು. ಕಾರ್ಯವಾದ ಮೇಲೆ ನೀವು ನಾಲ್ಕು ದಿನ ಸಂಗನಪಲ್ಲಿಗೆ ಹೋಗಿ ನಿಂತು ವ್ಯವಸ್ಥೆ ಮಾಡಿ ಬಂದರೂ ಬರಬಹುದು, ಜ್ಯೋತಿಷಿಗಳು “ಶುಭಸ್ಯಶೀಘ್ರಂ” ಎಂದು ಅವಸರದಿಂದ ಮುಹೂರ್ತವನ್ನು ನಿರ್ಧರಿಸಿದ್ದಾರೆ. ನಿರ್ವಿಘ್ನವಾಗಿ ಎಲ್ಲ ಕಾರ್ಯಗಳೂ ಜರಗುವಂತೆ ವ್ಯವಸ್ಥೆ ಮಾಡತಕ್ಕದ್ದು. ಯಾವತ್ತು ವ್ಯವಸ್ಥೆಯ ಭಾರವು ತಿರುಮಲರಾಯರ ತಲೆಯ ಮೇಲಿರುತ್ತದೆ. ನಮ್ಮ ತನಕ ಯಾವ ಮಾತನ್ನೂ ಬರಗೊಡಬಾರದು ನಮ್ಮ ಮನಸ್ಸಿನ ಇಚ್ಚೆಯು ಈಗ ಪೂರ್ಣವಾಗಲಿಕ್ಕೆ ಬೇಕು. ನಾವು ನಾಲ್ಕೂ ಕಡೆಗೆ ಅಪ್ಪಣೆಗಳನ್ನು ಕಳಿಸುತ್ತೇವೆ. ಎಲ್ಲ ವ್ಯವಸ್ಥೆಯು ಉತ್ತಮ ರೀತಿಯಿಂದ ಆಗಲಿಕ್ಕೆಬೇಕು. ನಿಮ್ಮ ಹಿರಿಯರು ಇದ್ದರೆ ನಿಮ್ಮ ಮುಂದೆ ಈ ಮಾತುಗಳನ್ನಾಡುವ ಪ್ರಸಂಗವು ನಮಗೆ ಬರುತ್ತಿದ್ದಿಲ್ಲ, ಎಂದು ಹೇಳಿದರು. ಈ ಮೇರೆಗೆ ಮತ್ತೆ ಕೆಲವು ಸಂಭಾಷಣೆಗಳು ಆದ ಬಳಿಕ ಕೃಷ್ಣದೇವರಾಯನು ಅವರಿಬ್ಬರು ಬಂಧುಗಳಿಗೆ ಅಪ್ಪಣೆಕೊಟ್ಟು ಕಳಿಸಿದನು.

ಏನು ಮಾಡಿದರೂ ರಾಮರಾಜನ ಮನಸ್ಸಿಗೆ ಸೊಗಸಾಗಲಿಲ್ಲ. ಪ್ರತ್ಯಕ್ಷ ರಾಜಪುತ್ರಿಯೊಡನೆ ತನ್ನ ವಿವಾಹವಾಗಿ, ತನಗೆ ರಾಜಜಾಮಾತೃಪದವಿಯು ದೊರೆಯುವ ಯೋಗವು ಸಮೀಪಿಸಿದರೂ ಆತನಿಗೆ ಸಮಾಧಾನವಾಗಲಿಲ್ಲ. ಆತನ ಅಂತರಂಗ ಬಹಿರಂಗಗಳೆರಡನ್ನೂ ಮೆಹರ್ಜಾನಳು ಆಕ್ರಮಿಸಿಬಿಟ್ಟಿದ್ದಳು. ಇನ್ನು ನಾನು ಮೆಹರ್ಜಾನಳನ್ನು ಕಾಣಲಿಕ್ಕಿಲ್ಲವೇ, ಎಂಬದೊಂದೇ ಚಿಂತೆಯು ರಾಮರಾಜನನ್ನು ಬಾಧಿಸುತ್ತಿತ್ತು. ಆತನು ಹೀಗೆ ಅಸಮಾಧಾನದಿಂದಿರುವಾಗಲೇ ಆತನ ವಿವಾಹ ಕಾರ್ಯವು ವಿಜೃಂಭಣೆಯಿಂದ ನೆರವೇರಿತು. ಸಮಾರಂಭವು ಪೂರ್ಣವಾಗುವ ಹಾದಿಯನ್ನೇ ರಾಮರಾಜನು ನೋಡುತ್ತಿದ್ದನು. ಕಡೆಯ ಸಮಾರಂಭವು ಮುಗಿದ ದಿನದ ರಾತ್ರಿಯು ಹೋಗಿ ಬೆಳಗಾಗಲು, ರಾಮರಾಜನು ರಾಜದರ್ಶನಕ್ಕೆ ಹೋದನು. ಆತನು ಮಹಾರಾಜರ ಮುಂದೆ-ನನಗೆ ಮತ್ತೆ