ಪುಟ:Kannadigara Karma Kathe.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿನಾಶವೃಕ್ಷ

೭೭

ಸೈನಿಕರು ಹುರಿದುಂಬರೆಂದು ತಿಳಿದು, ಸುಲ್ತಾನನು ಇಬ್ಬರು ಸರದಾರರೊಡನೆ ಆನೆಯನ್ನು ಏರಿ ತಾನು ಸ್ವತಃ ಕೃಷ್ಣೆಯ ಪ್ರವಾಹದಲ್ಲಿ ದುಮುಕಿದನು. ಅದನ್ನು ನೋಡಿ ಉಳಿದ ಸರದಾರರೂ ಸುಲ್ತಾನನನ್ನು ಹಿಂಬಾಲಿಸಿದರು, ಎರಡು ಸಾರೆ ತೆಪ್ಪಗಳ ಮೇಲಿಂದ ಸೈನಿಕರು ಈಚೆಯ ದಂಡೆಯನ್ನು ಕಂಡರು. ಇನ್ನೂರಾ ಐವತ್ತು ಆನೆಗಳೂ ಸುದೈವದಿಂದ ಏನೂ ಅಪಾಯವನ್ನು ಹೊಂದದೆ ಸುರಕ್ಷಿತವಾಗಿ ಕೃಷ್ಠೆಯನ್ನು ದಾಟಿ ಆಚೆಯ ದಂಡೆಗೆ ಬಂದವು. ಅಷ್ಟರಲ್ಲಿ ಈ ಸುದ್ದಿಯು ಕೃಷ್ಣದೇವರಾಯನಿಗೆ ಹತ್ತಲು, ಆತನ ಆಜ್ಞೆಯಿಂದ ಹಿಂದೂ ಸೈನಿಕರು ಮುಸಲ್ಮಾನರ ಮೇಲೆ ಒಳ್ಳೇ ಕಸುವಿನಿಂದ ಬಿದ್ದರು. ಹಿಂದುಗಳ ಹೊಡೆತದಿಂದ ಮುಸಲ್ಮಾನರಿಗೆ ತಿರುಗಿ ಹೋಗಲಿಕ್ಕೂ ಆಸ್ಪದ ದೊರೆಯದಾಯಿತು, ಆಗ ಅವರು ಹಂಗುದೊರೆದು ಒಳ್ಳೆ ಶೌರ್ಯದಿಂದ ಕಾದಿದರು ; ಹಿಂದೂ ಜನರ ಪ್ರಚಂಡ ಸೈನ್ಯದ ಮುಂದೆ ಅವರ ಆಟ ನಡೆಯಲಿಲ್ಲ. ಸುಲ್ತಾನನಾದರೂ ಜೀವದಿಂದ ಪಾರಾಗುವನೋ ಇಲ್ಲವೋ ಎಂಬ ಭಯವು ಮುಸಲ್ಮಾನರ ಸೈನಿಕರಲ್ಲಿ ಉತ್ಪನ್ನ ವಾಯಿತು. ಆಗ ಬಾದಶಹನ ಆನೆಯನ್ನು, ಆವನ ಸರದಾರರು ಹಿಂದಕ್ಕೆ ತಿರುಗಿಸಿ ಕೃಷ್ಣೆಯಲ್ಲಿ ನೂಕಿದರು. ಪ್ರವಾಹದ ಎದುರಿಗೆ ಹೋಗುವ ಪ್ರಸಂಗ ಬಂದದ್ದರಿಂದ ಸುಲ್ತಾನನ ಆನೆಯು ಬಹು ಕಷ್ಟದಿಂದ ಈಜಿ ಪಾರಾಗಿ, ಆಚೆಯ ದಂಡೆಗೆ ಹೋಯಿತು. ಮುಸಲ್ಮಾನರ ದಂಡಿನಲ್ಲಿ ಏಳು ಜನರು ಮಾತ್ರ ಪಾರಾದರು ! ಉಳಿದವರೆಲ್ಲ ರಣಭೂಮಿಯಲ್ಲಿ ಬಿದ್ದರು.

ಹೀಗೆ ಬಡಿತವನ್ನು ತಿಂದು ಮಿತಿಯಿಲ್ಲದೆ ಸೈನ್ಯವನ್ನು ಹಾಳೂ ಮಾಡಿಕೊಂಡು ಓಡಿಹೋಗಬೇಕಾದದ್ದರಿಂದ, ಇಸ್ಮಾಯಿಲ್ ಆದಿಲಶಹನಿಗೆ ಬಹಳ ಪಶ್ಚಾತ್ತಾಪವಾಯಿತು. ಯೋಗ್ಯಜನರ ಹಿತದ ಮಾತನ್ನು ಮೀರಿ ಹೋದದ್ದರ ಪ್ರಾಯಶ್ಚಿತ್ತವು ಆತನಿಗೆ ಚೆನ್ನಾಗಿ ಆದಂತಾಯಿತು. ಈಗ ತನಗಾದ ಅಪಮಾನದ ಸೇಡು ತೀರಿಸಕೊಳ್ಳುವವರೆಗೆ ಸಾರಾಯಿಯನ್ನು ಮುಟ್ಟಲಿಕ್ಕಿಲ್ಲೆಂದು ಆತನು ಪ್ರತಿಜ್ಞೆ ಮಾಡಿದನು ; ಆದರೆ ಆಗ ಆತನ ಆಟವು ಏನೂ ನಡೆಯುವ ಹಾಗಿದ್ದಿಲ್ಲ. ಆತನು ಅಸದಖಾನನೆಂಬ ಹೆಸರಿನ ಸರದಾರನ ಯೋಗ್ಯವಾದ ಸೂಚನೆಯಂತೆ ವಿಜಾಪುರದ ಹಾದಿಯನ್ನು ಹಿಡಿದನು. ಈ ಜಯದಿಂದ ವಿಜಾಪುರದ ಇಸ್ಮಾಯಿಲ್ ಆದಿಲಶಹನಿಗಷ್ಟೇ ಅಲ್ಲ, ಯಾವತ್ತು ಬಾಮನಿಯ ಬಾದಶಹರಿಗೆ ವಿಜಯನಗರದ ರಾಯರ ಭಯವು ಚೆನ್ನಾಗಿ ಕುಳಿತಿತು. ಇನ್ನು ಕೆಲವು ವರ್ಷಗಳವರೆಗಾದರೂ ಹಿಂದೂ ಜನರ ಸಂಗಡ ಯುದ್ಧಮಾಡುವದು ಅಶಕ್ಯವೆಂದು ಅವರು ತಿಳಕೊಂಡರು. ಈ ಭಯದ ಸಂಗಡ ಆ ಬಾಮನಿ ಬಾದಶಹರಲ್ಲಿ ಒಂದು ಪ್ರಕಾರದ ಜಾಗೃತಿಯೂ