ಪುಟ:Kannadigara Karma Kathe.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿನಾಶವೃಕ್ಷ

೭೯

ಮಾಡಿದನು. ಅವರಲ್ಲಿ ಹಿರಿಯಮಗನನ್ನು ವಿಜಾಪುರದ ಪಟ್ಟದಮೇಲೆ ಕುಳ್ಳಿರಿಸಿ. ಆತನನ್ನೆ ದಕ್ಷಿಣದ ಶಹನನ್ನಾಗಿ ಮಾಡಬೇಕೆಂತಲೂ ರಾಯನು ಯೋಚಿಸಿದನು ; ಆದರೆ ಅದು ಸಾಧಿಸಲಿಲ್ಲ. ಇದರಿಂದ ಬಾಮನಿ ಬಾದಶಹರ ಮನಸ್ಸಿನೊಳಗಿದ್ದ ವಿಜಯನಗರದ ರಾಜ್ಯದ ಮೇಲಿನ ದ್ವೇಷವು ಮಾತ್ರ ಮತ್ತಷ್ಟು ಹೆಚ್ಚಾಯಿತು. ಹೀಗಿರುವಾಗ ಕೃಷ್ಣದೇವರಾಯನ ಮರಣವಾರ್ತೆಯು ಕಿವಿಗೆ ಬೀಳಲು ಯಾವತ್ತು ಮುಸಲ್ಮಾನ ಬಾದಶಹರಿಗೆ ಬಹಳ ಸಂತೋಷವಾದದ್ದರಲ್ಲಿ ಆಶ್ಚರ್ಯವಿಲ್ಲ. ಅದರಲ್ಲಿ ಅಚ್ಚುತರಾಯನಂಥ ಪುಕ್ಕರು ವಿಜಯನಗರದ ಸಿಂಹಾಸನವೇರಿದ್ದಂತು ಮುಸಲ್ಮಾನರ ಹಿತಸಾಧನಕ್ಕೆ ಮತ್ತಷ್ಟು ಅನುಕೂಲವಾದಂತಾಗಿ, ವಿಜಯನಗರದ ರಾಜ್ಯದ ವಿನಾಶಾಂಕುರವು ಬೆಳೆದು, ಅದು ವೃಕ್ಷದ ಸ್ವರೂಪವನ್ನು ಹೊಂದಿತು.

****