ಪುಟ:Keladinrupa Vijayam.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಜೃಸಂಪಾದನೆ ಮಾಡಿ ಆನೆಗೊಂದಿಯಲ್ಲಿ ಹಸ್ತಿಕೋಣ] ಆಳು ತಿದ್ದರು. ಒಂದುದಿನ ಇವರು ತುಂಗಭದ್ರಾನದಿಯನ್ನು ದಾಟಿ ಆಚೆಯ ದಡದಲ್ಲಿ ಬೇಟೆಯಾಡುತ್ತಿರುವಾಗ ತಾವು ಅಟ್ಟಿಸಿಕೊಂಡು ಹೋಗು ತಿದ್ದ ಮೊಲವು ಬೇಟೆಯ ನಾಯಿಗಳನ್ನು ಕಚ್ಚಿ ಅದೃಶವಾಯಿತು. ಈ ಸ್ಥಳವು ರಾಜಧಾನಿಯನ್ನು ಕಟ್ಟುವುದಕ್ಕೆ ಸರ್ವೋತ್ತಮವಾದು ದೆಂದು ತಿಳಿದು ವಿದ್ಯಾರಣ್ಯರು ಅಲ್ಲಿ ವಿಜಯನಗರವನ್ನು ಕಟ್ಟಿಸಿ ಹಕ್ಕ ನಿಗೆ ಪಟ್ಟಾಭಿಷೇಕ ಮಡಿದರು, ಇದು ಶಾ, ಶಕ ೧೦ಾ{ರ್Yರಲ್ಲಿ ಎಂದರೆ ಕ್ರಿ. ಶ. ೧೩೩೬ರಲ್ಲಿ ನಡೆಯಿತು, ಇಲ್ಲಿ ಹ ಬು ಹೋ ವಿ ಬ ದೇ ರಾ ವಿ ದೇವಿ ಮಾ ರಾ ವಿ ' ಎಂಬ ಹದಿಮೂರುಜನ ರಾಜರು ಆಳವರು 1 ; ಇವರಲ್ಲಿ ಒಂಬತ್ತನೆ ಯವನು ಆಳಿದ ಮೇಲೆ ರಾಷ್ಟ್ರ ಕ್ಷೇಧಾದಿಗಳು ಬಹಳವಾಗುವುವು. ಕೊನೆಯವನು ದೇಶಭಸ್ಮವಾಗಿ ಶತ್ರುದೇಶದಲ್ಲಿ ಮೃತಿಯನ್ನೆದು ವನು, ನೂರೈವತ್ತು ವರ್ಷಗಳಲ್ಲಿ ಈ ವಂಶವು ಕೊನೆಗಾಣುತ್ತದೆ. ಇತ್ಯಾದಿ.

  • ವಿಜಯನಗರರಾಜ್ಯಸ್ಥಾಪನೆಯಾದ ಸಂದರ್ಭವನ್ನು ನ್ಯೂನಿಸ ಎಂಬ ಪೋರ್ಚುಗೀಸ ಚರಿತ್ರಕಾರನೂ ಸ್ವಲ್ಪ ಹೆಚ್ಚು ಕಡಿಮೆ ಇದೇ ರೀತಿಯಲ್ಲಿ ಹೇಳಿದ್ದಾನೆ. ಇದು ನಿಜವೆಂದು ಕೆಲವರು ಒಪ್ಪುತ್ತಾರೆ ಕೆಲವರು ಒಪ್ಪುವುದಿಲ್ಲ; ಇದರಲ್ಲಿ ಕೆಲವುಭಾಗ ನಿಜವೆಂದು ಸ್ವಯಲೆ ಸಾಹೇಬರ ಅಭಿಪ್ರಾಯವಿರುವಂತೆ ಕಾಣುತ್ತದೆ. ಕ್ರಿ. ಶ. ೧೩೩೬ ರಲ್ಲಿ ವಿಜಯನಗರವು ಸಾಪನೆಯಾಯಿತೆಂದು ಇದುವರೆಗಿನ ಚರಿತ್ರಲೇಖಕ ರೆಲ್ಲರೂ ಒಪ್ಪಿಕೊಂಡಿದ್ದಾರೆ. ಇಲ್ಲಿಂದ ನೂರೈವತ್ತು ವರ್ಷಗಳಿಗೆ ಸರಿ ಯಾಗಿ ( ವಂಶಪೂರ್ತಿ ಯಾಯಿತೆಂದೂ ಹೇಳಬಹುದು. ಏಕೆಂದರೆ ಎರಡನೆಯ ವಂಶವು ಆರಂಭವಾದದ್ದು ಸಾಲ್ಮನರಸಿಂಗನಿಂದ, ಈತನು ೧೫-೭ ರಲ್ಲಿ ಪಟ್ಟಕ್ಕೆ ಬಂದನು. ಆದರೆ 'ಹಬುಹೋವಿಬುದೇ.......? ಎಂಬ ಶ್ಲೋಕಗಳಲ್ಲಿ ಹೇಳಿರುವ ರಾಜಪರಂಪರೆಯ ಆಳಿಕೆಯ

1 ಈ ಗ್ರಂಥವು “ ಕಾಲಜ್ಞಾನ” ವಾದುದರಿಂದ ಭವಿಷ್ಯ ದಾಸವು ಉಸ ಯೋಗಿಸಲ್ಪಟ್ಟಿದೆ.