ಪುಟ:Keladinrupa Vijayam.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xiv ತಪ್ಪಿಸಿ, “ ನೀವಯಂ ರಕ್ಷಿಸಿದಂ” ಎಂದೂ, ಇವನ ಕಾಲದಲ್ಲಿ ಕಳ ಕಾಕರಕಾಟವಿರಲಿಲ್ಲವೆಂದೂ, ಕಳವುಮಾಡಿದ ಒಂದು ನರಿಯನ್ನೂ ಹಿಡಿತರಿಸಿ ಶಾಸ್ತಿಯಂ ಮಾಡಿಸಿದನೆಂದೂ ಗೊತ್ತಾಗುತ್ತದೆ. ಇಕ್ಕೇರಿಯ ಅರಸರಿಗೆ “ ಎಡವಮುರಾರಿ, ಕೋಟೆಕೋಲಾಹಲ, ಏಕಾಂಗಿವೀರ, ದೋನೇಜ, ದೋಖಂಡರಾಯ, ವೈರಿಸಪ್ತಾಂಗಹರಣ, ಪಶ್ಚಿಮಸಮುದ್ರಾ ಧೀಕ್ಷರ, ವಿಶುದ್ಧಾ ದೈತಸಿದ್ಧಾಂತಪ್ರತಿಷ್ಠಾಪನಾಚಾರ' ಎಂಬ ಬಿರುದು ಗಳು ಇದ್ದುವು. 1 ಇವರಿಗೂ ಮೈಸೂರಿನವರಿಗೂ ಪದೇಪದೇ ಯುದ್ಧ ವಾಗುತ್ತಲೇ ಇತ್ತು. ಇವರುಗಳು ಎಂದೂ ಪರಸ್ಪರ ಮೈತ್ರಿಯಿಂದ ಇದ್ದ ಹಾಗೆ ಕಾಣುವುದಿಲ್ಲ. ಅದಕ್ಕೋಸ್ಕರವೇ ಮೈಸೂರಿನ ರಾಜರ ಪ್ರಸ್ತಾಪ ಬಂದಾಗಲೆಲ್ಲಾ ' ಮಾಯಾವಿಗಳು' ಅಥವಾ ' ಮಾಯಾವಾದಿಗಳು ? ಎಂಬ ಪದವು ಪರ್ಯಾಯವಾಗಿ ಉಪಯೋಗಿಸಲ್ಪಟ್ಟಿದೆ. ಮತ್ತು ಅವರ ( ಮದೋದ್ರೇಕವನ್ನು ಮುಗಿಸಿದ 12 ನೆಂದು ಮುಂತಾಗಿ ಹೇಳಲ್ಪಟ್ಟಿದೆ. ಈ ನಾಯಕರು ವೀರಶೈವಮತಾವಲಂಬಿಗಳು. ಇವರು ಜನ ಸಾಮಾನ್ಯರಿಗೂ ಉಪಯೋಗವಾಗುವಂತೆ ತಟಾಕಾರಮಾಗ್ರಹಾರಾದಿಗ ಳನ್ನು ಕಲ್ಪಿಸಿಕೊಟ್ಟರು. ಶೃಂಗೇರಿಯಮಠ, ಕೃಷ್ಣಾನಂದಸ್ವಾಮಿ ಗಳಮಠ, ಇವುಗಳಿಗೆ ಬೆಂಬಲವಾಗಿ ನಿಂತು ಸಹಾಯಮಾಡಿದರು. ಇದರಂತೆ ಶೈವ ವೈಷ್ಣವ ದೇವಾಲಯಗಳಿಗೂ ಜೈನರ ಬಸದಿಗಳಿಗೂ ಮಹಮ್ಮದೀಯರ ಮಸೀದಿಗಳಿಗೂ ಅಗ್ರಹಾರಕ್ಷೇತಾರಾಮಗಳನ್ನು ಕೊಟ್ಟಂತೆ ತಿಳಿಯಬರುತ್ತದೆ. ಇವರ ಕಾಲದಲ್ಲಿ ರಾಮೇಶ್ವರದೇವಸ್ಥಾನ, ವೀರಭದ್ರ ದೇವಸ್ಥಾನ ಅಘೋರೇಶ್ವರದೇವಸ್ಥಾನ, ಮುಂತಾದ ವಿಚಿತ್ರತರವಾದ ಶಿಲ್ಪ ಕೆಲಸ 1 ೩೩ ೩೪, ೭೩, ೭೪, vf, ಇಟಗಳನ್ನು ನೋಡಿ ರೈಸಸಾಹೇಬರು * ಎಡವಮುರಾರಿ ” ಎಂಬ ಬಿರುದಿಗೆ ಬೇರೆ ಕಾರಣವನ್ನು ಹೇಳುತ್ತಾರೆ. 2 ಪುಟ, f೯, ೧೧೪, ೧೧, ೧೧೯, ೧೨೫, ೧೩೩, ೧೩೫, ೧೩೪ ೧v೦, ೧v೧, ೧೮, ೧೮, ೦೦೫,