ಪುಟ:Khinnate banni nivarisoona.pdf/೧೧

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
  • S - Sleep Disturbances-Sexual Disturbances ನಿದ್ರಾಹೀನತೆ, ನಿದ್ರೆಯ ತೊಂದರೆಗಳು, ಲೈಂಗಿಕ ಅನಾಸಕ್ತಿ, ಲೈಂಗಿಕ ದೌರ್ಬಲ್ಯಗಳು.
  • S - Suicidal Ideas and Attempts: ಆತ್ಮಹತ್ಯಾ ಆಲೋಚನೆಗಳು ಮತ್ತು ಪ್ರಯತ್ನ.
  • I - Insecurity Inferiorty Feelings: ಅಭದ್ರತೆಯ ಭಾವನೆಗಳು, ಕೀಳರಿಮೆಯ ಯೋಚನೆಗಳು, ನಾನು ನಿಷ್ಟ್ರಯೋಜಕ, ಕೆಲಸಕ್ಕೆ ಬಾರದವನು, ತಾನು ಎಲ್ಲರಿಗಿಂತ ಕೀಳು, ಬುದ್ಧಿಹೀನ ಎನ್ನುವುದು.
  • O - Orphan Feelings: ಅನಾಥಪ್ರಜ್ಞೆ ತನಗೆ ಯಾರೂ ಇಲ್ಲ, ತನ್ನನ್ನು ಯಾರೂ ಮೆಚ್ಚುವುದಿಲ್ಲ, ಸಹಾಯಕ್ಕೆ ಬರುವುದಿಲ್ಲ ಎನಿಸುವುದು.
  • N - Negative Attitude and Negative Thoughts: ನಕಾರಾತ್ಮಕ ಧೋರಣೆ ಮತ್ತು ಆಲೋಚನೆಗಳು, ನಿರಾಶಾವಾದ.

ಹೀಗೆ ಖಿನ್ನತೆ ಹಲವಾರು ರೋಗಲಕ್ಷಣಗಳ ಸಮೂಹ.

ಖಿನ್ನತೆ ಮೂರು ಮಟ್ಟಗಳಲ್ಲಿರಬಹುದು.

  • ತೀವ್ರ ಮಟ್ಟ: ರೋಗಿ ತನ್ನ ಪ್ರಾಥಮಿಕ ಬೇಕು-ಬೇಡಗಳನ್ನು ಗಮನಿಸುವುದಿಲ್ಲ. ನಿಷ್ಕ್ರಿಯನಾಗಿ ಒಂದೆಡೆ ಕೂರಬಹುದು. ಆತ್ಮಹತ್ಯೆಪ್ರಯತ್ನ ಮಾಡಬಹುದು.
  • ಮಧ್ಯಮ ಮಟ್ಟ: ಅತಿಯಾದ ಶಾರೀರಿಕ ನೋವುಗಳು, ಆಹಾರ ಸೇವನೆ-ನಿದ್ರೆಯ ಏರುಪೇರು, ಸಾಯುವ ಆಸೆ. ಶಕ್ತಿ ಸಾಮರ್ಥ್ಯಕುಗ್ಗುತ್ತದೆ.
  • ಅಲ್ಪ ಮಟ್ಟ: ಅನೇಕ ಶಾರೀರಿಕ ನೋವುಗಳು, ಬೇಸರ, ದುಃಖ, ನಕಾರಾತ್ಮಕ ಆಲೋಚನೆಗಳುಖಿನ್ನತೆ: ಬನ್ನಿ ನಿವಾರಿಸೋಣ | 9