ಈ ಪುಟವನ್ನು ಪ್ರಕಟಿಸಲಾಗಿದೆ
ತರ್ಕಿಸಿ ಚಿಂತಿತರಾಗುತ್ತಾರೆ. ಜೋತಿಷಿ, ಮಂತ್ರವಾದಿ, ದೇವಸ್ಥಾನ, ಮಸೀದಿ, ದರ್ಗಾ, ಚರ್ಚುಗಳಿಗೆ ಹೋಗುತ್ತಾರೆ. ಪೂಜೆ, ಹರಕೆ, ಕಾಣಿಕೆ, ಹೋಮ, ಹವನ, ತಾಯಿತ, ಚೀಟಿ ಕಟ್ಟಿಸುತ್ತಾರೆ. ತಮ್ಮ ಹಣ-ಶ್ರಮ, ಸಮಯವನ್ನು ವ್ಯರ್ಥ ಮಾಡುತ್ತಾರೆ. ಇದು ತಪ್ಪಬೇಕು. ಖಿನ್ನತೆ ರೋಗ ಒಂದು ಮೆದುಳಿನ- ಮನಸಿನ ಕಾಯಿಲೆ. ಮೆದುಳಿನಲ್ಲಿ ಡೋಪಮಿನ್-ಸೆರೊಟೊನಿನ್ ನರವಾಹಕ ತಗ್ಗುವುದು, ದೇಹದಲ್ಲಿ ಥೈರಾಕ್ಸಿನ್ ರಸದೂತ ಕಡಿಮೆಯಾಗುವುದು, ಕಷ್ಟ- ನಷ್ಟ-ಸೋಲು, ಅಪಮಾನ-ನಿರಾಶೆಗಳನ್ನು ಎದುರಿಸಲು ವ್ಯಕ್ತಿ ವಿಫಲನಾಗುವುದೇ ಖಿನ್ನತೆಗೆ ಕಾರಣ. ಖಿನ್ನತೆ ವಾಸಿಯಾಗುವ ರೋಗ ಎಂದು ತಿಳಿಯುವ ಅಗತ್ಯವಿದೆ. ಇದನ್ನು ಎಲ್ಲರೂ ಗಮನಿಸಬೇಕು.
ಖಿನ್ನತೆ ರೋಗವಿದೆಯೆಂದು ಗುರುತಿಸಲು ಮತ್ತು ಅದರ ತೀವ್ರತೆಯನ್ನು ಅಳೆಯಲು ಈ 15 ಪ್ರಶ್ನೆಗಳಿಗೆ ಹೌದು ಅಥವಾ ಇಲ್ಲ ಎಂದು ಉತ್ತರಿಸಿ, ಪ್ರತಿ ಹೌದು ಉತ್ತರ ನಿಮಗೆ ಖಿನ್ನತೆಯಿದೆ ಎಂಬುದನ್ನು ತಿಳಿಸಿದರೆ ಹೌದುಗಳು ಹೆಚ್ಚಿದಷ್ಟು ಖಿನ್ನತೆ ಹೆಚ್ಚು ತೀವ್ರವಾಗಿದೆಯೆಂದು ನಮಗೆ ಗೊತ್ತಾಗುತ್ತದೆ.
ಕ್ರ.ಸಂ | ಪ್ರಶ್ನೆ | ಹೌದು | ಇಲ್ಲ |
---|---|---|---|
1. | ದಿನದ ಹೆಚ್ಚಿನ ಸಮಯದಲ್ಲಿ ನಿಮಗೆ ದುಃಖವಾಗುತ್ತದೆ.ಕಣ್ಣೆಲ್ಲಾ ನೀರು ತುಂಬಿ ಅಳು ವಂತಾಗುತ್ತದೆಯೆ? | ||
2. | ಹಸಿವು ಕಡಿಮೆಯಾಗಿ ಊಟ ರುಚಿಸುತ್ತಿಲ್ಲವೆ? | ||
3. | ನಿದ್ರೆ ಬರಲು ಕಷ್ಟ, ಮಧ್ಯೆ ಮಧ್ಯೆ ಎಚ್ಚರವಾಗುವುದು, ಸರಿಯಾಗಿ ನಿದ್ರೆ ಮಾಡಲಾಗುತಿಲ್ಲವೆ? | ||
4. | ಮೈಕೈ ನೋವು ಸುಸ್ತು-ಆಯಾಸ-ತಲೆನೋವು-ಎದೆ ನೋವಿದೆ. ವೈದ್ಯಕೀಯ ಪರೀಕ್ಷೆಗಳಲ್ಲಿ ಎಲ್ಲವೂ ನಾರ್ಮಲ್ ಎಂದಿದೆಯಾ? |
ಖಿನ್ನತೆ: ಬನ್ನಿ ನಿವಾರಿಸೋಣ / 11