ಪುಟ:Khinnate banni nivarisoona.pdf/೧೮

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ಮಹಿಳೆಯರಲ್ಲಿ ಖಿನ್ನತೆ ರೋಗ

ಪುರುಷರಿಗೆ ಹೋಲಿಸಿದರೆ, ಮಹಿಳೆಯರಲ್ಲಿ ಖಿನ್ನತೆ ರೋಗ ಹೆಚ್ಚು ಪುರುಷಮಹಿಳೆ ಅನುಪಾತವು 1:2ರಷ್ಟಿದೆ. ಮಹಿಳೆಯರು ಹೆಚ್ಚು ಖಿನ್ನತೆಗೆ ಒಳಗಾಗಲು ಜೈವಿಕ-ಮಾನಸಿಕ ಮತ್ತು ಸಾಮಾಜಿಕ ಕಾರಣಗಳಿವೆ. ನಾನ ರೀತಿಯ ಕಷ್ಟಕೋಟಲೆ, ಪಕ್ಷಪಾತ, ದೌರ್ಜನ್ಯಗಳಿಗೆ ಅನೇಕ ಮಹಿಳೆಯರು ತುತ್ತಾಗುತ್ತಾರೆ. ಜೊತೆಗೆ ಅವರಿಗೆ ಪ್ರೀತಿ, ಸಹಾನುಭೂತಿ ಆಸರೆ ನೀಡುವವರು ಕಡಿಮೆಯೆ. ನೋವುಗಳನ್ನು ನುಂಗಿ ಬದುಕುವ ಮಹಿಳೆ ಖಿನ್ನತೆಗೆ ಸುಲಭದಲ್ಲಿ ತುತ್ತಾಗುತ್ತಾಳೆ.

1. ಹಾರ್ಮೋನುಗಳ ವ್ಯತ್ಯಾಸದಿಂದ ಮಹಿಳೆಯರಲ್ಲಿ ಖಿನ್ನತೆ: ಋತುಚಕ್ರ, ಹೆರಿಗೆ, ಋತುಬಂಧದ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ.

ಈಸ್ಟೋಜನ್ / ಪ್ರೊಜೆಸ್ಟೆರೋನ್ ಹಾರ್ಮೋನುಗಳು ಮಹಿಳೆಯ ಋತುಚಕ್ರವನ್ನು ನಿರ್ದೇಶಿಸುತ್ತವೆ. ಇವುಗಳ ಉತ್ಪಾದನೆ ಪ್ರಮಾಣದಲ್ಲಿ ವ್ಯತ್ಯಾಸವಾದಾಗ ಖಿನ್ನತೆ ಕಾಣಿಸಿಕೊಳ್ಳುವುದು ವಿಶೇಷ. ಮಾಸಿಕ ಋತುಸ್ರಾವದ ಆಸುಪಾಸಿನ ದಿನಗಳಲ್ಲಿ ಕಂಡು ಬರುವ PRE MENSTR UAL TENSION, ಹೆರಿಗೆಯ ನಂತರ ಕಂಡು ಬರುವ POSTPARTUM BLUES, ಹಾಗೂ ಋತುಬಂಧದ ಸಮಯದಲ್ಲಿ MENOPAUSE SYNDROME, ಇದಕ್ಕೆ ಉದಾಹರಣೆಗಳು.

ಋತುಸ್ರಾವದ ಅವಧಿಯ ನೋವು: ಋತುಸ್ರಾವ ಶುರುವಾಗುವ ಮೊದಲು ಮತ್ತು ಸ್ರಾವವಾಗುವ ಸ್ತ್ರೀ ಅಲ್ಪಮಟ್ಟದ ಖಿನ್ನತೆಗೆ ಹೋಗುವುದೇ ಆಕೆಯನ್ನು ಬಾಧಿಸುವ ತೊಂದರೆಗಳಿಗೆ ಕಾರಣ ಎನ್ನಲಾಗಿದೆ.16 | ಖಿನ್ನತೆ: ಬನ್ನಿ ನಿವಾರಿಸೋಣ