ಪುಟ:Khinnate banni nivarisoona.pdf/೨೩

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ಸಾವು, ಅಗಲಿಕೆ, ಅಪಘಾತ, ದುರಂತ, ಪ್ರಾಣಾಂತಕವಾದ ಕಾಯಿಲೆ ಇದೆಯೆಂದು ಗೊತ್ತಾಗುವುದು, ಶಸ್ತ್ರ ಚಿಕಿತ್ಸೆ, ಹಣ ಕಳೆದುಕೊಳ್ಳುವುದು ಬೆಲೆ ಬಾಳುವ ವಸ್ತು ಮತ್ತು ಮುಖ್ಯ ಕಾಗದ ಪತ್ರಗಳನ್ನು ಕಳೆದುಕೊಳ್ಳುವುದು, ಲಾಭ ಅನುಕೂಲತೆಯ ಅವಕಾಶ ಕೈ ತಪ್ಪಿಹೋಗುವುದು, ಮಿಥ್ಯಾ ರೋಪ, ಅವಮಾನ, ಪೊಲೀಸ್ ಠಾಣೆಗೆ ಹೋಗಬೇಕಾಗಿ ಬರುವುದು, ನ್ಯಾಯಾಲಯ ದಲ್ಲಿ ಪ್ರಕರಣ ದಾಖಲಾಗುವುದು, ಮೋಸ, ವಂಚನೆಗೆ ತುತ್ತಾಗುವುದು ಇತ್ಯಾದಿ, ಪ್ರಚೋದನೆ ಘಟನೆಯಾದ ಕೂಡಲೆ ಅಥವಾ ಒಂದು ದಿನದೊಳಗಾಗಿ ಶುರುವಾಗುವ ಖಿನ್ನತೆ ಸಾಮಾನ್ಯವಾಗಿ ಒಂದು ತಿಂಗಳಿದ್ದು ಕಡಿಮೆಯಾಗುತ್ತದೆ. ಖಿನ್ನತೆ ತೀವ್ರವಾಗಿದ್ದಾಗ ವ್ಯಕ್ತಿ ಸಂಪೂರ್ಣ ನಿಷ್ಕ್ರಿಯನಾಗಬಹುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬಹುದು.

PROLONGED DEPRESSIVE REACTION:

ವಿಸ್ತರಿಸಿದ ಖಿನ್ನತೆ: ವ್ಯಕ್ತಿಯ ನಿರ್ವಹಣಾ ಸಾಮರ್ಥ್ಯ ಕಡಿಮೆ ಇದ್ದರೆ, ಬೇಕಾದ ಜೀವನ ಕೌಶಲಗಳಿಲ್ಲದೇ ಹೋದರೆ, ಆಸರೆ ನೀಡುವ, ಸಾಂತ್ವನ ಹೇಳುವ ಜನ ಇಲ್ಲದೇ ಹೋದರೆ ಖಿನ್ನತೆ ಒಂದು ತಿಂಗಳಿನ ಅನಂತರವೂ ಮುಂದುವರಿಯಬಹುದು. ಚಿತ್ತ ಚಂಚಲತೆಯ ಖಿನ್ನತೆಯಾಗಿ ಉಳಿಯಬಹುದು. ವ್ಯಕ್ತಿ ಖಿನ್ನತೆಗೆ ಕಾರಣವಾದ ಅಂಶ ಘಟನೆಯನ್ನು ಮತ್ತೆ ಮತ್ತೆ ಮೆಲಕು ಹಾಕುತ್ತಾನೆ.

MIXED ANXIETY AND DEPRESSIVE REACTION:

ಖಿನ್ನತೆಯ ಜೊತೆ ಜೊತೆಗೆ ಆತಂಕ, ಭಯದ ಲಕ್ಷಣಗಳೂ ಇರಬಹುದು. ವೇಗದ ಉಸಿರಾಟ ಅಥವಾ ಉಸಿರಾಡಲು ತೊಂದರೆ, ನಿಮಿಷಕ್ಕೆ 80ರ ಮೇಲೆ ಹೋಗುವ ಹೃದಯ ಬಡಿತ, ಬೆವರು, ಸ್ನಾಯುಗಳ ಬಿಗಿತ, ನಡುಕ, ಪದೇ ಪದೇ ಮಲ, ಮೂತ್ರ ವಿಸರ್ಜಿಸುವ ಅಗತ್ಯ, ಏಕಾಗ್ರತೆಯ ಕೊರತೆ, ಗೊಂದಲ, ಮತ್ತಷ್ಟು ಕಷ್ಟ ನಷ್ಟಗಳಾಗಬಹುದೆಂಬಖಿನ್ನತೆ: ಬನ್ನಿ ನಿವಾರಿಸೋಣ / 21