ಪುಟ:Khinnate banni nivarisoona.pdf/೨೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಒಳಜನ್ಯ ಖಿನ್ನತೆ ಸಾಮಾನ್ಯವಾಗಿ ಮೂರರಿಂದ ಒಂದು ವರ್ಷದವರೆಗೆ ಉಳಿಯಬಹುದು. ಸರಾಸರಿ ಐದರಿಂದ ಆರು ತಿಂಗಳು ಇದ್ದು, ನಂತರ ಕಡಿಮೆಯಾಗಿ ಮತ್ತೆ ಕೆಲ ಕಾಲದ ನಂತರ ಬರಬಹುದು. ಆಗ ಅದನ್ನು RECURRENT DEPRESSION ಎಂದು ಕರೆಯಲಾಗುತ್ತದೆ. ಇದು ವರ್ಷಕ್ಕೊಮ್ಮೆ ಎರಡು ಮೂರು ವರ್ಷಗಳಿಗೆಗೊಮ್ಮೆ ಅಥವಾ ವರ್ಷದಲ್ಲಿ ಹಲವು ಬಾರಿ ಕಾಣಿಸಿಕೊಳ್ಳಬಹುದು.

ಮೇನಿಯಾ ಖಿನ್ನತೆ ಕಾಯಿಲೆ: ಖಿನ್ನತೆ ಒಂದು ಅವಧಿಯಲ್ಲಿ ಮತ್ತೊಂದು ಅವಧಿಯಲ್ಲಿ ಮೇನಿಯಾ (ಅತೀ ಮಾತು/ಚಟುವಟಿಕೆ, ವಿಪರೀತ ಸಂತೋಷ, ಕೋಪ, ಹಿಡಿತವಿಲ್ಲದೆ ಹಣ ಖರ್ಚು ಮಾಡುವುದು, ದೊಡ್ಡ ದೊಡ್ಡ ಯೋಜನೆ ಹಾಕುವುದು, ತಾನೊಬ್ಬ ಅತೀ ಗಣ್ಯ ವ್ಯಕ್ತಿ, ಅಪಾರ ಶಕ್ತಿವಂತ, ಬುದ್ಧಿವಂತ ಎಂದು ಬಡಾಯಿ ಕೊಚ್ಚಿಕೊಳ್ಳುವುದು ಇತ್ಯಾದಿ ಲಕ್ಷಣಗಳು) ಕಾಯಿಲೆ ಬಂದರೆ ಅದನ್ನು 'ಬೈಪೋಲಾರ್ ಅಫೆಕ್ಟಿವ್ ಡಿಸಾಸ್ಟರ್ ಅಥವಾ ಮೇನಿಕ್ ಡಿಪೆಸ್ಟಿವ್ ಡಿಸ್ಸಾರ್‌' ಎಂದು ಕರೆಯಲಾಗುತ್ತದೆ. ಚಕ್ರದೋಪಾದಿಯಲ್ಲಿ ಖಿನ್ನತೆ ಮೇನಿಯಾ ಬರುತ್ತದೆ. ಈ ಚಕ್ರವು ವರ್ಷಕ್ಕೊಮ್ಮೆ ಅಥವಾ ಹಲವಾರು ಸಲ ಅಥವಾ ಎರಡು ಮೂರು ವರ್ಷಕ್ಕೊಮ್ಮೆ ಉರುಳಬಹುದು. ಜೀವನ ಪರ್ಯಂತ ಈ ಕಾಯಿಲೆ ಪುನರಾವರ್ತನೆಗೊಳ್ಳುತ್ತಲೇ ಇರಬಹುದು.

ಚಿತ್ತವಿಕಲತೆಯ ಖಿನ್ನತೆ (PSYCHOTIC DEPRESSION)

ಖಿನ್ನತೆ ತೀವ್ರವಾಗಿರುವ ಜೊತೆ ಜೊತೆಗೆ ಚಿತ್ತವಿಕಲತೆಯ ಲಕ್ಷಣಗಳೂ ಕಂಡುಬರುತ್ತವೆ. ಭ್ರಮೆಗಳು ಪ್ರಮುಖ ಲಕ್ಷಣ
  • ಯಾವ ತಪ್ಪು ಪಾಪಗಳನ್ನು ಮಾಡದಿದ್ದರೂ ತಾನು ಅತೀ ದೊಡ್ಡ ಮತ್ತು ಕ್ಷಮಿಸಲಾಗದ ತಪ್ಪು ಪಾಪ ಮಾಡಿರುವೆ ಎಂದು ರೋಗಿ ನಂಬುತ್ತಾನೆ/ಳೆ.
  • ತಾನೊಬ್ಬ ನಿರ್ಗತಿಕ-ಬಡವ, ಒಂದು ರೂಪಾಯಿಯೂ ಇಲ್ಲದ ನಿರ್ಗತಿಕ ಅನಾಥ ಎಂದು ವ್ಯಕ್ತಿ ಹೇಳುತ್ತಾನೆ/ಳೆ. ವ್ಯಾಪಾರದಲ್ಲಿ

ಖಿನ್ನತೆ: ಬನ್ನಿ ನಿವಾರಿಸೋಣ / 25