ಪುಟ:Khinnate banni nivarisoona.pdf/೩೦

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ಖಿನ್ನತೆ ಕಾಯಿಲೆಗೆ ಕಾರಣಗಳು

ಸಹಜ ದುಃಖವು 'ಖಿನ್ನತೆ' ಕಾಯಿಲೆಯಾಗಲು ಹಲವಾರು ಕಾರಣಗಳಿವೆ. ಒಂದಕ್ಕಿಂತ ಹೆಚ್ಚಿನ ಕಾರಣಗಳು ಸೇರಿ ಕಾಯಿಲೆ ಸೃಷ್ಟಿಯಾಗುತ್ತದೆ.

  • ಅನುವಂಶೀಯತೆ: ಖಿನ್ನತೆ ಕಾಯಿಲೆ ಅನುವಂಶೀಯವಾಗಿ ಜೀನುಗಳ ಸಾಗಿ ಬರಬಹುದು.
  • ಮೆದುಳಿನ ನರಕೋಶಗಳಲ್ಲಿ ಡೋಪಮಿನ್ ಸೆರೊಟೊನಿನ್ ಪ್ರಮಾಣ ಕಡಿಮೆಯಾಗುವುದು.
  • ಥೈರಾಕ್ಸಿನ್ ಹಾರ್ಮೋನು ಕೊರತೆ.
  • ಇತರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು ಸ್ಟಿರಾಯಿಡ್ಸ್, ಆಂಟಿ ಬಯೋಟಿಕ್ಸ್, ಅಧಿಕ ರಕ್ತದೊತ್ತಡವನ್ನು ತಗ್ಗಿಸಲು ಬಳಸುವ ಮಾತ್ರೆಗಳು, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು.
  • ಬಾಲ್ಯ ಮತ್ತು ಹರೆಯದ ಅವಧಿಯಲ್ಲಿ ಮಗು ಪ್ರೀತಿ, ಆಸರೆ, ಭಾವನಾತ್ಮಕ ಸುರಕ್ಷತೆಯಿಂದ ವಂಚಿತನಾಗುವುದು, ತೀವ್ರ ಶಿಕ್ಷೆ, ಶಿಸ್ತಿಗೆ ಒಳಗಾಗುವುದು, ಶಾರೀರಿಕ, ಮಾನಸಿಕ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವುದು.
  • ಸಾವು, ನಕಾರಾತ್ಮಕ ನೋವುಂಟುಮಾಡುವ ಘಟನೆಗಳು, ಉದಾ: ಅಗಲಿಕೆ, ದೊಡ್ಡ ಮೊತ್ತದ ಹಣ, ಆಸ್ತಿ, ಬೆಲೆ ಬಾಳುವ ವಸ್ತುಗಳ28 / ಖಿನ್ನತೆ: ಬನ್ನಿ ನಿವಾರಿಸೋಣ