ಪುಟ:Khinnate banni nivarisoona.pdf/೩೩

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
  • ಬಾಯಿ ಒಣಗುವುದು/ಜೊಲ್ಲು ಹೆಚ್ಚಾಗುವುದು.
  • ಹೊಟ್ಟೆ ಉರಿ/ವಾಕರಿಕೆ/ವಾಂತಿ (ಗ್ಯಾಸ್ಟ್ರಿಕ್ ಸಮಸ್ಯೆ).
  • ತಲೆಭಾರ, ತಲೆಸುತ್ತು.
  • ನಿದ್ರೆ ಹೆಚ್ಚಾಗುವುದು, ಹಗಲು ಹೊತ್ತಿನಲ್ಲಿ ತೂಕಡಿಕೆ, ಮಂಪರು.
  • ಮಂಕುತನ/ಚಟುವಟಿಕೆಗಳು ತಗ್ಗುವುದು.
  • ತೂಕ ಹೆಚ್ಚಾಗುವುದು.
  • ಲೈಂಗಿಕ ದುರ್ಬಲತೆ.
  • ಕೈಕಾಲುಗಳು ನವಿರಾಗಿ ನಡುಗುವುದು/ಬಿಸಿಯಾಗುವುದು.
  • ಸಮತೋಲನ ಚಲನೆ ಇಲ್ಲದಿರುವುದು, ನಡೆಯುವುದು, ಬರೆಯುವುದು ಕಷ್ಟವಾಗುತ್ತದೆ.

ಈ ತೊಂದರೆಗಳು ಬಂದರೆ ಏನು ಮಾಡಬೇಕೆಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನೀವೇ ಔಷಧ ನಿಲ್ಲಿಸಲು, ಕಡಿಮೆ ಮಾಡಲು ಪ್ರಯತ್ನಿಸಬೇಡಿ.


ಎಷ್ಟು ಕಾಲ ಔಷಧ ಸೇವನೆ?

ಸಾಮಾನ್ಯವಾಗಿ ಹೆಚ್ಚಿನ ಪ್ರಕರಣಗಳಲ್ಲಿ 2 ರಿಂದ 3 ತಿಂಗಳು, ಕೆಲವರಲ್ಲಿ ಒಂದೆರಡು ವರ್ಷ. ಕೆಲವರಲ್ಲಿ ಹಲವಾರು ವರ್ಷಗಳು.

ಶೇಕಡಾ 10ರಷ್ಟು ಪ್ರಕರಣಗಳಲ್ಲಿ ಮಾತ್ರ ಜೀವನ ಪರ್ಯಂತ ತೆಗೆದು ಕೊಳ್ಳಬೇಕಾಗಬಹುದು.

ಈ ಔಷಧಿಗಳಲ್ಲಿ ದೀರ್ಘಾವಧಿ ವಿಷಮ ಪರಿಣಾಮಗಳಿಲ್ಲ ಎಂಬುದು ಸಮಾಧಾನದ ಅಂಶ.

ಔಷಧಿಗಳನ್ನು ಊಟದ ನಂತರ, ಕ್ರಮಬದ್ಧವಾಗಿ, ವೇಳೆಗೆ ಸರಿಯಾಗಿ ಸೇವಿಸುವಂತೆ ರೋಗಿಗೆ ಹೇಳಬೇಕು, ಇದರ ಉಸ್ತುವಾರಿ ಮಾಡಬೇಕು,ಖಿನ್ನತೆ: ಬನ್ನಿ ನಿವಾರಿಸೋಣ / 31