ಪುಟ:Khinnate banni nivarisoona.pdf/೩೫

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ಮನೋಚಿಕಿತ್ಸೆ ಆಪ್ತಸಮಾಲೋಚನೆ: (PSYCHOTHERAPY COUNSELLING)

ಖಿನ್ನತೆ ಬರಲು ಕಾರಣವಾದ ಮನೋ ಸಾಮಾಜಿಕ ಅಂಶಗಳನ್ನು ಗುರುತಿಸಿ, ಅವುಗಳನ್ನು ಸೂಕ್ತವಾಗಿ ನಿಭಾಯಿಸಲು ವ್ಯಕ್ತಿಗೆ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡುವುದೇ ಮನೋಚಿಕಿತ್ಸೆ-ಆಪ್ತ ಸಮಾಲೋಚನೆಯ ತಿರುಳು, ಚಿಕಿತ್ಸಕ/ಸಮಾಲೋಚಕನು ಸ್ನೇಹ ವಿಶ್ವಾಸದಿಂದ ವ್ಯಕ್ತಿಯ ಜೊತೆ, ವ್ಯಕ್ತಿಯ ಮನೆಯವರ ಜೊತೆ, ಸ್ನೇಹಿತ- ವಿಷಯಗಳನ್ನು ಸಂಗ್ರಹಿಸುತ್ತಾನೆ. ಅವುಗಳನ್ನು ವಿಶ್ಲೇಷಿಸಿ ಯಾವುದು ಎಷ್ಟರಮಟ್ಟಿಗೆ ವ್ಯಕ್ತಿಯ ದುಃಖಕ್ಕೆ-ಖಿನ್ನತೆಗೆ ಕಾರಣವಾಗಿದೆ, ಯಾವುದು ಖಿನ್ನತೆ ಮುಂದುವರೆಯಲು ಪ್ರೇರಕವಾಗಿದೆ ಎಂಬುದನ್ನು ಗುರುತಿಸುತ್ತಾನೆ. ವ್ಯಕ್ತಿಗೆ ಸಾಂತ್ವನ ಹೇಳಿ, ಸಮಾಧಾನ ಮಾಡಿ, ಈ ವಿಷಯಗಳನ್ನು ಹೇಗೆ ಹೇಗೆ ಅದರೊಂದಿಗೆ ಹೊಂದಿಕೊಳ್ಳಬೇಕೆಂದು ತಿಳಿಸುತ್ತಾನೆ. ವ್ಯಕ್ತಿಯ ಸಮರ್ಥವಾಗಿ ನಿಭಾಯಿಸಬೇಕು, ಸಮಸ್ಯೆಯನ್ನು ನಿವಾರಿಸಲಾಗದಿದ್ದರೆ ಬಲಾಬಲಗಳನ್ನು ಅರ್ಥಮಾಡಿಕೊಂಡು ಅವುಗಳ ಇತಿಮಿತಿಯನ್ನು ವ್ಯಕ್ತಿ ಹೇಗೆ ಸಮಾಧಾನ ಚಿತ್ರವಾಗಿ ಜೀವನವನ್ನು ಮುನ್ನಡೆಸಬಲ್ಲ ಎಂದು ಲೆಕ್ಕಾಚಾರ ಮಾಡಿ ವ್ಯಕ್ತಿಗೆ ಮಾರ್ಗದರ್ಶನ ಮಾಡುತ್ತಾನೆ. ವ್ಯಕ್ತಿ ಮತ್ತು ಆತನ/ಆಕೆಯ ಮನೆಯವರ ವ್ಯಕ್ತಿತ್ವದ ನ್ಯೂನತೆಗಳು, ನಕಾರಾತ್ಮಕ ಧೋರಣೆಗಳು-ವರ್ತನೆಗಳು, ನಡೆ-ನುಡಿಗಳನ್ನು ಬದಲಿಸಿಕೊಳ್ಳಲು ಸಹಾಯ ಮಾಡುತ್ತಾನೆ. ಇದು ಎರಡರಿಂದ ಹತ್ತು ಸೆಶನ್ಸ್‌ಗಳಲ್ಲಿ ಸಹಕರಿಸಿದರೆ ಮನೋಚಿಕಿತ್ಸೆ-ಆಪ್ತಸಮಾಲೋಚನೆ ಫಲಪ್ರದವಾಗುತ್ತದೆ. ನಡೆಯಬಹುದು. ವ್ಯಕ್ತಿ ಮತ್ತು ಸಂಬಂಧಪಟ್ಟವರು ಬದಲಾಗಲು ಸಹಕರಿಸದಿದ್ದರೆ, ಬದಲಾಗಲು ಒಪ್ಪದಿದ್ದರೆ ಸಮಾಲೋಚನೆ ವಿಫಲವೂ ಆಗಬಹುದು. ವ್ಯಕ್ತಿಯ ನಕಾರಾತ್ಮಾಕ ಧೋರಣೆ, ಆಲೋಚನೆಗಳನ್ನು ಗುರುತಿಸಿ, ನಕಾರಾತ್ಮಕ ತಂತ್ರಗಳನ್ನು ಪತ್ತೆ ಮಾಡಿ ಅವುಗಳನ್ನು ಸಕಾರಾತ್ಮಕ ಆಲೋಚನೆ-ಧೋರಣೆಗಳನ್ನಾಗಿ ಬದಲಿಸಲು ಪ್ರಯತ್ನಿಸುವುದೇ ಸಿ.ಬಿ.ಟಿ ಅರ್ಥಾತ್ ಕಾಗ್ನೆಟಿವ್‌ ಬಿಹೇವಿಯರ್ ಥೆರಪಿಯ ತಿರುಳು, ಕುಟುಂಬದಖಿನ್ನತೆ: ಬನ್ನಿ ನಿವಾರಿಸೋಣ / 33