ಪುಟ:Khinnate banni nivarisoona.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾತಾವರಣ, ಉದ್ಯೋಗದ ವಾತಾವರಣ, ಸಮಾಜದ (ಸುತ್ತಮುತ್ತಲಿನ ವಾತಾವರಣವನ್ನು ಬದಲಿಸುವುದು ಅಥವಾ ವ್ಯಕ್ತಿಯನ್ನು ತಾತ್ಕಾಲಿಕವಾಗಿ ಹಿತಕರ ಪರಿಸರಕ್ಕೆ ಬದಲಿಸಿ, ನೆಮ್ಮದಿನ್ನು ಕೊಡುವುದೇ ಸಾಮಾಜಿಕ ಚಿಕಿತ್ಸೆ (SOCIAL THERAPY), ಕೆಲವು ಪ್ರಕರಣಗಳಲ್ಲಿ ಪರಿಸರದ ಬದಲಾವಣೆಯಿಂದ ಖಿನ್ನತೆ ತಗ್ಗುತ್ತದೆ.

ಕಲಾ ಚಿಕಿತ್ಸೆ: (ART THERAPY)

ಮೈಮನಸ್ಸುಗಳನ್ನು ವಿರಮಿಸಿ, ಮನಸ್ಸಿನ ಗಮನವನ್ನು ತಮ್ಮೆಡೆಗೆ ಸೆಳೆಯಬಲ್ಲ ಶಾಂತಿ-ನೆಮ್ಮದಿ, ಖುಷಿಯನ್ನು ನೀಡಬಲ್ಲ ಲಲಿತ ಕಲೆಗಳು, ಯೋಗ, ಧ್ಯಾನಗಳು, ಧಾರ್ಮಿಕ, ಆಧ್ಯಾತ್ಮಿಕ ಚಟುವಟಿಕೆ ಮತ್ತು ಆಚರಣೆಗಳು ಖಿನ್ನತೆಯನ್ನು ತಗ್ಗಿಸಲು ನೆರವಾಗುತ್ತವೆ. ಕ್ರಮಬದ್ಧವಾಗಿ ಇವುಗಳನ್ನು ಮಾಡುವುದೇ ಸಂಗೀತ ಚಿಕಿತ್ಸೆ, ನೃತ್ಯ ಚಿಕಿತ್ಸೆ ಕಲಾ ಚಿಕಿತ್ಸೆ, ಯೋಗ ಚಿಕಿತ್ಸೆ, ಧ್ಯಾನ ಚಿಕಿತ್ಸೆ ಎನಿಸಿಕೊಳ್ಳುತ್ತದೆ. ಇಷ್ಟದೇವರನ್ನು ಪೂಜೆ ಪ್ರಾರ್ಥನೆಗಳಿಂದ ನೆನೆಸಿಕೊಂಡು, ದೇವರು ನನ್ನನ್ನು ಕಾಪಾಡುತ್ತಾನೆ. ರಕ್ಷಿಸುತ್ತಾನೆ. ಸಮಸ್ಯೆ ಸಂಕಷ್ಟಗಳನ್ನು ಪರಿಹರಿಸುತ್ತಾನೆ, ನೋವನ್ನು ನಿವಾರಿಸುತ್ತಾನೆ ಎಂದು ನಂಬುವುದರಿಂದ ಖಿನ್ನತೆ ಖಂಡಿತ ಕಡಿಮೆಯಾಗುತ್ತದೆ. ಕಷ್ಟ ನಷ್ಟಗಳು ಬಂದಾಗ, ದುಃಖ ದುಮ್ಮಾನಗಳು ನಮ್ಮನ್ನು ಮುತ್ತಿಕೊಂಡಾಗ, ಈ ಭವಸಾಗರದಲ್ಲಿ ನಾವು ಮುಳುಗುತ್ತಿದ್ದೇವೆಂದುಕೊಂಡಾಗ, 'ದೇವರು' ನಮ್ಮ ಸೇರಿಸುತ್ತಾನೆ, ಬಂಧು ಮಿತ್ರ ಕೈಬಿಟ್ಟರೂ, ಕೈಹಿಡಿದು ನಮ್ಮನ್ನು ಪೊರೆಯುತ್ತಾನೆ ಹಿತವನ್ನು ಕಾಯುತ್ತಾನೆ, ನೀರಿನ ಸುಳಿಯಿಂದ ನಮ್ಮನ್ನು ರಕ್ಷಿಸಿ ದಡ ಎಂದು ಹೇಳಿಕೊಳ್ಳಿ.

ಖಿನ್ನತೆಯಿದ್ದಾಗ ನೀವೇನು ಮಾಡಬೇಕು?

ಕಾರಣ ಇದ್ದು ಅಥವಾ ಕಾರಣವಿಲ್ಲದೆಯೋ ಖಿನ್ನತೆ ನಿಮ್ಮನ್ನು ಆವರಿಸಿಕೊಂಡಾಗ ಬೇಸರ, ದುಃಖ, ನಿರುತ್ಸಾಹ, ನಿರಾಸಕ್ತಿ, ಅಸಹಾಯಕತೆ, ನಿರಾಶದಾಯಕ ಮತ್ತು ಬದುಕು ಬೇಡ ಎಂಬ ಇತ್ಯಾದಿ ಲಕ್ಷಣಗಳು ಕಂಡು ಬಂದಾಗ:


34 / ಖಿನ್ನತೆ: ಬನ್ನಿ ನಿವಾರಿಸೋಣ