ಪುಟ:Khinnate banni nivarisoona.pdf/೪೩

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ನಿರೀಕ್ಷಿಸುತ್ತೀರಿ? ಅವರಿಗೆ ಆ ಮಟ್ಟವನ್ನು ತಲುಪುವ ನಿಮಗೆ ಕೊಡುವ ಸಾಮರ್ಥ್ಯ ಮತ್ತು ಮನಸ್ಸಿದೆಯಾ ಗಮನಿಸಿ, ಇವರೆಲ್ಲಾ ನಿಮಗೆ ಎಷ್ಟು ಗಮನ ಕೊಡುತ್ತಾರೆ? ನೀವು ಹೇಳುವುದನ್ನು ಕೇಳಿಸಿಕೊಳ್ಳುತ್ತಾರೆ, ಇಲ್ಲವಾ? ನಿಮ್ಮ ಬಗ್ಗೆ ಎಷ್ಟು ಗೌರವ, ಪ್ರೀತಿ, ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ? ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರಾ? ಅಗತ್ಯ ಬಿದ್ದಾಗ ನಿಮ್ಮ ನೆರವಿಗೆ ಬರುತ್ತಾರಾ ಇಲ್ಲವಾ ನೋಡಿ, ಅವರಿಂದ ಎಷ್ಟು ಗಮನ, ಪ್ರೀತಿ- ಆಸರೆ ಸಿಗುತ್ತದೋ ಅಷ್ಟಕ್ಕೆ ಸಂತೋಷಪಡಿ, ಅವರು ಕೊಟ್ಟಿದ್ದು ನೆರವಾದದ್ದು ಸಾಲದು ಎನ್ನಬೇಡಿ. ಸಿಕ್ಕಿದ್ದಕ್ಕೆ ಲಾಭ ಎಂದುಕೊಳ್ಳಿ ಪ್ರತಿಯಾಗಿ ನೀವು ನಿಮಗೆ ಎಷ್ಟು ಪ್ರೀತಿ, ಗೌರವ, ಆಸರೆಯನ್ನು ಅವರಿಗೆ ನೀಡಬೇಕೆನ್ನಿಸುತ್ತದೋ ಅಷ್ಟನ್ನು ಕೊಡಿ, ಕೊಟ್ಟು ಸಂತೋಷಪಡಿ, ಅವರು ಅದನ್ನು ನೆನೆಯಬೇಕು. ನಿಮ್ಮನ್ನು ಹೊಗಳಬೇಕು. ಅದರ ಸಾಲವನ್ನು ಋಣವನ್ನು ಅವರು ತೀರಿಸಬೇಕು ಎಂದು ನಿರೀಕ್ಷೆ ಮಾಡಬೇಡಿ. ಇನ್ನು ನೀವಿರುವ ಸಮುದಾಯ/ ಸಮಾಜದಿಂದ ಏನು ನಿರೀಕ್ಷೆ ಮಾಡಬೇಕು? ಯಾವ ನಿರೀಕ್ಷೆಯನ್ನು ಮಾಡದಿರುವುದೇ ಕ್ಷೇಮ? ಸಮುದಾಯ/ಸಮಾಜಕ್ಕೆ ನೀವೇನು ಕೊಡಬಲ್ಲಿರೋ, ಕೊಟ್ಟು ಅದನ್ನು ಮರೆಯಿರಿ, ಸಮಾಜದಿಂದ ಥ್ಯಾಂಕ್ಸ್‌ನ್ನೂ ಸಹ ನಿರೀಕ್ಷಿಸಬೇಡಿ!

3. ಆರೋಗ್ಯವರ್ಧನೆ

  • ಆರೋಗ್ಯವು/ಸುಖ/ಸಂತೋಷವನ್ನುಂಟು ಮಾಡಿದರೆ, ಅನಾರೋಗ್ಯ-ಕಾಯಿಲೆಗಳು, ಖಿನ್ನತೆ, ನೋವು, ದುಃಖ

ಉಂಟುಮಾಡುತ್ತವೆ. ಆರೋಗ್ಯವನ್ನು ಗಳಿಸುವುದು, ಉಳಿಸಿ ವರ್ಧಿಸುವುದು ನಿಮ್ಮ ಕೈಯಲ್ಲಿದೆ.

  • ಪುಷ್ಟಿಕರವಾದ ಹಿತ-ಮಿತ ಆಹಾರವನ್ನು ವೇಳೆಗೆ ಸರಿಯಾಗಿ ಸೇವಿಸಿ, ಶರೀರಕ್ಕೆ ಶಕ್ತಿ ಬರುವುದು ನಾವು ಸೇವಿಸುವ ಆಹಾರದಿಂದ, ಆಮ್ಲಜನಕದಿಂದ, ಶರೀರದ ತೂಕ ನಿಮ್ಮ ಎತ್ತರಕ್ಕೆ/ವಯಸ್ಸಿಗೆ ಸರಿಯಿದೆಯಾ ನೋಡಿಕೊಳ್ಳಿ.ಖಿನ್ನತೆ: ಬನ್ನಿ ನಿವಾರಿಸೋಣ / 41