ಪುಟ:Khinnate banni nivarisoona.pdf/೯

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ಖಿನ್ನತೆ

ಖಿನ್ನತೆ-Depression ಎಂಬುದು ಸರ್ವವ್ಯಾಪಿ, ಖಿನ್ನತೆಗೆ ಒಳಗಾಗದ ವ್ಯಕ್ತಿ ಇಲ್ಲ. ಯಾವುದೇ ಕಷ್ಟ-ನಷ್ಟ, ಸೋಲು-ನಿರಾಶೆ, ಅವಮಾನ-ಅಗಲಿಕೆ-ಸಾವು ಸಂಭವಿಸಿದಾಗ 'ಖಿನ್ನತೆ' ತಪ್ಪದೇ ಹಾಜರಾಗುತ್ತದೆ. ಉದಾಹರಣೆಗೆ:

ರಾಮನಿಗೆ ಪಟ್ಟಾಭಿಷೇಕದ ಬದಲು ವನವಾಸವೆಂದಾಗ ದಶರಥ ಮಹಾರಾಜ ಖಿನ್ನತೆಗೆ ಒಳಗಾಗಿ ಮೃತ್ಯುವಶನಾಗುತ್ತಾನೆ.

ವನವಾಸ ಪ್ರಾಪ್ತಿಯಾದಾಗ ಖಿನ್ನತೆಗೆ ಒಳಗಾಗದ ರಾಮ, ಸೀತಾಪಹರಣವಾದಾಗ ಖಿನ್ನತೆಗೆ ಒಳಗಾಗುತ್ತಾನೆ. ತುಂಬು ಗರ್ಭಿಣಿಯನ್ನು ಕಾಡಿಗೆ ಅಟ್ಟಿದ ತಪ್ಪಿತಸ್ಥ ಭಾವನೆಯಿಂದ, ಸೀತೆ ಭೂಗರ್ಭ ಪ್ರವೇಶ ಮಾಡಿದ್ದನ್ನು ಕೇಳಿದ ರಾಮ ಖಿನ್ನನಾಗಿ ಸರಯೂ ನದಿಯನ್ನು ಪ್ರವೇಶಿಸಿ, ಪ್ರಾಣತ್ಯಾಗ ಮಾಡುತ್ತಾನೆ.

ನೂರು ಯೋಜನ ವಿಸ್ತಾರ ಉಳ್ಳ ಸಮುದ್ರವನ್ನು ಲಂಘಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಭಾವಿಸಿ ವೀರ ಆಂಜನೇಯನು ಖಿನ್ನನಾಗಿ ಆತ್ಮಹತ್ಯೆಯ ಮಾತಾಡುತ್ತಾನೆ.

ಅಶೋಕ ವನದಲ್ಲಿ ರಾವಣನ ಖೈದಿಯಾಗಿದ್ದ ಸೀತೆ, ರಾಮ ಬರಲಿಲ್ಲವೆಂಬ ಹತಾಶೆಯಿಂದ, ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಹನುಮಂತ ನಿಂದ ರಕ್ಷಿಸಲ್ಪಡುತ್ತಾಳೆ.

ಚಕ್ರವ್ಯೂಹದೊಳಗೆ ಸಿಕ್ಕಿ ಹತನಾದ ಮಗ ಅಭಿಮನ್ಯುವಿನ ಸಾವಿನ ದುಃಖವನ್ನು ತಡೆಯಲಾಗದ ಸವ್ಯಸಾಚಿ ಅರ್ಜುನ, ಅಭಿಮನ್ಯುವಿನ ಸಾವಿಗೆಖಿನ್ನತೆ: ಬನ್ನಿ ನಿವಾರಿಸೋಣ / 7