ಪುಟ:Mahakhshatriya.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨.ಬಲಿತ ದುಗುಡು

ಧ್ಯಾನಬಲದಿಂದ ಪೂರ್ಣಯೋಗವನ್ನು ಋಷಿಗಣಗಳಿಗೆ ಉಪದೇಶ ಮಾಡಿದ ಇಂದ್ರನು ಅಂತಃಪುರದಲ್ಲಿ ಶಚೀಸಮೇತನಾಗಿ ಕುಳಿತಿದ್ದಾನೆ. ದೇವಗುರುವು ಸಭೆಗೆ ಬಂದುದು, ಆತನು ಅಲ್ಲಿಯೇ ಅಂತರ್ಧಾನವಾದುದು, ಆತನನ್ನು ಹುಡುಕಿಕೊಂಡು ಹೋದ ಮರುತನು ಆತನು ಎಲ್ಲಿಯೂ ಸಿಕ್ಕಲಿಲ್ಲವೆಂದು ಬಂದು ಹೇಳಿದುದು ಎಲ್ಲವೂ ಆತನ ಮನಸ್ಸಿನ ಮೇಲೆ ಪರಿಣಾಮ ಮಾಡಿವೆ. ಆತನು ಯೋಚಿಸುತ್ತಿದ್ದಾನೆ ; “ ಇಂದೇಕೆ ನನ್ನ ಮನಸ್ಸು ಹೀಗೆ ಮಾಡಿತು ? ದೇವಸಭೆಯಲ್ಲಿದ್ದಾಗ ಬಂದ ಋಷಿಗಳನ್ನು ‘ಇದು ಧರ್ಮ ಬ್ರಹ್ಮಪ್ರಶ್ನೆ, ಧರ್ಮಾಂಗಣಕ್ಕೆ ಬನ್ನಿ. ಅಲ್ಲಿ ಅದರ ವಿಮರ್ಶೆ ಎನ್ನದೆ, ನಾನೇಕೆ ಅದರ ವಿಮರ್ಶೆಯನ್ನು ಅಲ್ಲಿಯೇ ಆರಂಭಿಸಿದೆ ? ಅಥವಾ ‘ದೇವಗುರುಗಳು ಇದ್ದಾರೆ. ಅವರ ಬಳಿಗೆ ಹೋಗಿ’ ಎಂದೇಕೆ ಕಳುಹಿಸಲಿಲ್ಲ ?.... ಇಲ್ಲ. ಈ ಪುರಂದರಪ್ರಶ್ನವನ್ನು ನಾನಲ್ಲದೆ ಇನ್ನು ಯಾರೂ ಬಿಡಿಸುವಂತಿಲ್ಲ. ಆಯಿತು. ಆಗ ನಾನು ಪೂರ್ಣಧ್ಯಾನದಲ್ಲಿ ನಿಂತು ಆ ಪ್ರಶ್ನಕ್ಕೆ ಉತ್ತರ ಹೇಳುತ್ತಿರುವಾಗಲೇ ಬೃಹಸ್ಪತಿಯು ಬರಬೇಕೆ? ಆಗ ನಾನು ತಾನೇ ಏನು ತಪ್ಪÅ ಮಾಡಿದೆ? ಪೂರ್ಣಧ್ಯಾನ ದಲ್ಲಿರುವವನು ಯಾವನು ತಾನೇ ಆ ತನ್ನೆದುರು ಬಂದವರನ್ನು ಎದ್ದು ಗೌರವಿಸುವನು? ಅಥವಾ ಆಗ ಸಭಾಪತಿತ್ವವನ್ನು ವಹಿಸಿದ್ದೆನಾಗಿ ಗೌರವಿಸಲೇ ಬೇಕಾಗಿತ್ತೋ? ಆಗಿಹೋಯಿತು. ಈಗ ಏನಾದರೂ ಮಾಡಿ ಈ ತಪ್ಪÅ ತಿದ್ದಿಕೊಳ್ಳಬೇಕು. ಧರ್ಮಾಚಾರ್ಯನಲ್ಲದೆ ತ್ರಿಲೋಕಾಧಿಪತ್ಯವನ್ನು ಕಾಪಾಡಿಕೊಳ್ಳುವುದೆಂತು? ಕಾಲಧರ್ಮವನ್ನರಿತು, ಆಗಾಗ ಕಾಲೋಚಿತವಾದ ಕರ್ಮಗಳನ್ನು ನನ್ನಿಂದ ಮಾಡಿಸುವುದಕ್ಕೆ ಒಬ್ಬರೂ ಇಲ್ಲದಿದ್ದರೆ ಕರ್ಮಲೋಪವಾಗುವುದು. ಕರ್ಮಲೋಪವು ಆದರೆ ಧರ್ಮಲೋಪವಾಗುವುದು. ಧರ್ಮಲೋಪವಾದರೆ ಅಧರ್ಮದ ಪ್ರಾದುರ್ಭಾವವಾಗಿ ಅಸುರರಿಗೆ ಉಚ್ಛ್ರಾಯಕಾಲವು ಬರುವುದು. ಹಾಗೆ ಮಾಡಿದರೆ ನಮ್ಮ ದೇವತೆಗಳ ಕರ್ತವ್ಯಕ್ಕೆ ಹಾನಿ ಬರುವುದು. ಈ ಲೋಕವನ್ನು ಸೃಷ್ಟಿಸಿದಾಗ ಲೋಕದಲ್ಲಿ ಇರುವ ಭೋಗಗಳನ್ನೆಲ್ಲ, ಭೋಗ ಸಾಮಗ್ರಿಗಳನ್ನೆಲ್ಲ ಪ್ರಜಾಪತಿಯು ನಮ್ಮ ವಶಕ್ಕೆ ಕೊಟ್ಟಿರುವನು. ನಾವು,