ಪುಟ:Mrutyunjaya.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xi

ರಾನೋಫರ್ : ರಾಮೆರಿಪ್‍ಟಾನ ಸಹಪಾಠಿ.
ರಾಮೆರಿಪ್‍ಟಾ : ಜನನಾಯಕ ಮೆನೆಪ್‍ಟಾನ ಮಗ.
ಲಿಷ್ಟ್ : ರಾಜಧಾನಿಯ ಹತ್ತಿರದಲ್ಲಿ ದಕ್ಷಿಣಕ್ಕಿರುವ ಸಣ್ಣ ಪಟ್ಟಣ.
ಲೆಬನನ್ : ಐಗುಪ್ತದ ಸಮೀಪ ದೇಶ.
ವೆಸಿ : ಅಮನ್ ದೇವರ ಸ್ವಳ ; ಗ್ರೀಕರು ಮುಂದೆ ಇದನ್ನು ಥೀಬ್ಸ್ ಎಂದು
ಕರೆದರು; 'ನೆ' ಎಂಬ ಹೆಸರೂ ಅದಕ್ಕಿತ್ತು.
ಷಾಡೂ‌ಫ್ : ಯಾತ.
ಶೀಬಾ : ಅರಮನೆಯಲ್ಲಿ ಕಸಾಯಿ ಮನೆಯ ಕೆಲಸಗಾತಿ.
ಸರು : ರಾಜಧಾನಿಯಲ್ಲಿನ ಹಿರಿಯ ಸಲಹೆಗಾರರ ಮಂಡಲಿ.
ಸಿನ್ಯುಹೆ : ನೀರಾನೆಪ್ರಾಂತದ ಒಬ್ಬ ಭೂಮಾಲಿಕ.
ಸೆರ್ಕೆಟ್ : ಆನ್ ನಗರಿಯ ಅಧಿಕಾರಿ.
ಸೆತ್ : ಅಣ್ಣ ಒಸೈರಿಸನನ್ನು ಕೊಲೆ ಮಾಡಿದ ದುಷ್ಟ; ರಾ ಪುತ್ರ.
ಸೆತ್ನಾ : ನೀರಾನೆಪ್ರಾಂತದ ಬಡಗಿ.
ಸೆತೆ‍ಕ್ ನಖ್ತ್ : ನೀರಾನೆಪ್ರಾಂತದ ಇನ್ನೊಬ್ಬ ಭೂಮಾಲಿಕ.
ಸೆನ್ಉಸರ್ಟ್ : ನೀರಾನೆಪ್ರಾಂತದ ಮತ್ತೊಬ್ಬ ಭೂಮಾಲಿಕ.
ಸೆನೆಬ್ : ಅಮಾತ್ಯ ಭವನದ ಹಿರಿಯ ಲಿಪಿಕಾರ.
ಸೆಬೆಕ್ಖು: ನೀರಾನೆಪ್ರಾಂತದ ಒಬ್ಬ ಪ್ರಮುಖ ಪ್ರಜೆ.
ಸೆಮ : ನೀರಾನೆಪ್ರಾಂತದ ಹಿರಿಯರ ಸಮಿತಿಯ ಒಬ್ಬ ಸದಸ್ಯ.
ಸೈಪ್ರಸ್ : ಐಗುಪ್ತತದ ನೆರೆಹೊರೆ ದೇಶ.
ಸೈನೈ : ಐಗುಪ್ತದ ಈಶಾನ್ಯ ಗಡಿ ದೇಶ ;ಸೈನೈ ಎಂದರೂ ಇದೇ.
ಸ್ಯೆನೆ : ಈಗಿನ ಆಸ್ವಾನಿನ ಪ್ರಾಚೀನ ಹೆಸರು.
ಸ್ನೊಫ್ರು : ನೀರಾನೆಪ್ರಾಂತದ ಪ್ರಮುಖ ಪ್ರಜೆ.
ಸೊಬೆಕ್ : ಮೊಸಳೆ ದೇವತೆ.
ಸೊಥಿಸ್ : ಸಿರಿಯಸ್ ನಕ್ಷತ್ರದ ಪ್ರಾಚೀನ ಹೆಸರು;ಲುಬ್ಧಕ ನಕ್ಷತ್ರ.