ಪುಟ:Mrutyunjaya.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೮೮ ಮೃತ್ಯುಂಜಯ

ಸದ್ದಡಗಿತು. ಜನಸ್ತೋಮ ನಡುಬಾಗಿಸಿ ನಮಿಸಿತು.
ರಾಗವಾಗಿ ಅಪೆಟ್ ಅಂದ :
ಭಕ್ತರೇ ನಿಮ್ಮ ಮೇಲೆ ಪ್‌ಟಾ ದೇವರ ಅನುಗ್ರಹವಿರಲಿ.
ಎಷ್ಟೊಂದು ಜನ ಒಟ್ಟಾಗಿ ಬಂದಿದೀರಿ ! ಇದು ಸ್ವತಃ ದೇವರೇ ನೋಡಲು
ಯೋಗ್ಯವಾದ ದೃಶ್ಯ.”
ಇಪ್ಯುವರ್, ಭೂಮಾಲಿಕರು, ಸೇವಕರು__ ಎಲ್ಲರೂ ಸಭಾಂಗಣದ
ಅಂಚಿನಲ್ಲಿ ನಿಂತಿದ್ದರು. ಎತ್ತರದ ಗೋಡೆ, ಹೊರಗಿನ ಜನಜಂಗುಳಿ
ಅವರಿಗೆ ಕಾಣಿಸುತ್ತಿರಲಿಲ್ಲ. ಆದರೆ ಮಾತು ಕೇಳಿಸುತ್ತಿತ್ತು.
ಮಾತುಗಳನ್ನು ಮೆನೆಪ್‌‌‍ಟಾನೂ ಆಲಿಸಿದ. ಹೊರಗೆ ನೆರೆದುದು ದೊಡ್ಡ
ಜನಸಂದಣಿ ಎಂಬುದನ್ನು ಕಲರವ ಸೂಚಿಸಿತು. ಹೀರಿದ ಖಿವವ ಎರಡೇ
ಗುಟುಕಾದರೂ ಅವನಲ್ಲಿ ಹೊಸ ಚೈತನ್ಯ ಮೂಡಿತ್ತು " ಓ ಮೆನೆಪ್‌ಟಾ
ಓ ಮನೆಪ್ಟಾ ” ಅವನ ಪಾಲಿನ ಮಧುರ ಸಂಗೀತ. ತನಗೇನೂ ಆಗಿಯೇ
ಇಲ್ಲ, ಮೈ ಕೈ ನೋವು ಇಲ್ಲ__ಎನಿಸಿತು.
ಮಹಡಿಯ ಮೇಲಿದ್ದವರಿಗೆ ಜನಸಮುದಾಯ ಕಾಣಿಸುತ್ತಿತ್ತು. ಆದರೆ
ಬಾಗಿಲಿನ ಮರೆಯಲ್ಲಿದ್ದ ಅರ್ಚಕ, ಬಕಿಲ ಮತ್ತಿತರರು ಕಣ್ಣಿಗೆ ಬೀಳಲಿಲ್ಲ.
ಮಾತೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಎಲ್ಲೋ ಅಲ್ಲೊಂದು ಪದ, ಇಲ್ಲೊಂದು
ಪದ, ಅಷ್ಟೆ.
ಅಪೆಟ್ ಗಂಟಲು ಸರಿಪಡಿಸುತ್ತ ಮಾತು ಮುಂದುವರಿಸಿದ :
"ಮಾತು ತುಟಿ ಮೀರೋದು ವಿರಸ ಏರ್ಪಡೋದು ಸಾಮಾನ್ಯ
ಸಂಗತಿ. ಯಾವುದೂ ವಿಕೋಪಕ್ಕೆ ಹೋಗದಹಾಗೆ ನೋಡ್ಕೊಬೇಕಾದ್ದು
ಮುಖ್ಯ. ಏನೋ ಆಯ್ತು. ಅದನ್ನೇ ದೊಡ್ಡದು ಮಾಡಿ ನಮ್ಮ ಕರ್ತವ್ಯ
ಮರೆಯೋಣವೇ ? ಮನುಷ್ಯ ಬಹಳ ಕೆಲಸ ಮಾಡಬಲ್ಲ ಸಮರ್ಥ. ಆದರೂ
ತಾನು ರಾನ ಸಂತಾನ ಪ್‌ಟಾನ ಸಂತಾನ ಅನ್ನೋದನ್ನ ಅವನು ನೆನಪಿಡ
ಬೇಕು. ನಾವು ಏನು ಮಾಡಿದರೂ ದೇವರು ನೋಡ್ತಿದ್ದಾನೆ ಅಲ್ಲವಾ ?
ಬಾ ಜಯಘೋಷ ಮಾಡಿದ್ರಿ__ಓ ಮೆನೆಪ್‌ಟಾ ಓ ಮೆನೆಪ್‌‌‍ಟಾ ಅಂತ.
ನಿಮ್ಮ ಪ್ರಕಾರ ಅವನು ನ್ಯಾಯವಾದ್ದನ್ನೇ ಮಾಡ್ದ. ತೀರ್ಪು ಕೊಡೋದಕ್ಕೆ