ಪುಟ:Mrutyunjaya.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೯೨

ಮೃತ್ಯುಂಜಯ

ಒಂದು ಬಾಣ ಒಬ್ಬನ ಭುಜವನ್ನು ಇರಿಯಿತು; ಇನ್ನೊಂದು ಇನ್ನೊಬ್ಬನ
ಹೊಟ್ಟೆಯನ್ನು ಹೊಕ್ಕಿತು; ಮೂರನೆಯದು ಮತ್ತೊಬ್ಬನ ತೊಡೆಯನ್ನು
ತಿವಿಯಿತು. ಜನಜಂಗುಳಿಯಲ್ಲಿ ಹಾಹಾಕಾರ. ಸ್ನೊಫ್ರು ಗಾಯಗೊಂಡ
ವರತ್ತ ಧಾವಿಸಿದಂತೆ, ಮತ್ತೆ ಮೂರು ಬಾಣಗಳು ಆಹುತಿ ಬಯಸಿದುವು.
ಒಂದು ಸ್ನೊಫ್ರುವಿನ ಕಿವಿಯ ಬಳಿಯಿಂದಲೇ ಹಾದು ಹೋಗಿ ನೆಲ
ಮುಟ್ಟಿತು. ಇನ್ನೊಂದು ಪುಟ್ಟ ಗಾಯಗಳಿಂದ ತೃಪ್ತಿಪಡಬೇಕಾಯಿತು.
ಮೂರನೆಯದು ಮಾತ್ರ ಒಬ್ಬನನ್ನು ಕೆಳಕ್ಕೆ ಕೆಡವಿತು.
ಸ್ನೊಫ್ರುವಿನ ನಿರ್ದೇಶನದಂತೆ, ಗಾಯಗೊಂಡವರನ್ನು ಹೊತ್ತು.
ಹಲವರು ವಸತಿ ಪ್ರದೇಶದತ್ತ ಧಾವಿಸಿದರು.
ಸೂರ್ಯ ಮುಳುಗತೊಡಗಿದ. ಜನಸಮುದಾಯ ಸ್ವಲ್ಪ ಮೆಲ್ಲ ಮೆಲ್ಲನೆ
ಕರಗಿತು.
ಬಕಿಲ ದಡದಡನೆ ಮಹಡಿಯ ಮೆಟ್ಟಲುಗಳನ್ನೇರಿ, ಒಡೆಯನ ಮುಂದೆ
ನಿಂತ, ಹೆಮ್ಮೆಯಿಂದ ಬೀಗುತ್ತ.
____ಮೆನೆಪ್‍ಟಾ ಕಣ್ಣು ಮುಚ್ಚಿಕೊಂಡು, ಗಾಳಿ ಊರಿನ ದಿಕ್ಕಿನಿಂದ
ಹೊತ್ತು ತಂದ ಸದ್ದುಗಳನ್ನು ಆಲಿಸಿದ.

****

ಇದು ಯುದ್ಧ___ಎನಿಸಿತು ಟೆಹುಟಿಗೆ. ಕೂಗಾಡಬೇಕು, ಅಟ್ಟಹಾಸ
ಮಾಡಬೇಕು___ಎಂದು ತೋರಿತು. ಆದರೆ ಅದೊಂದನ್ನೂ ಮಾಡದೆ, ಎಲ್ಲ
ಭಾವನೆಗಳನ್ನೂ ಹತ್ತಿಕ್ಕಿ, ಆತ ಮೌನವಾಗಿ ಕುಳಿತ. ಬಕಿಲನಿಗೆ ಇದು
ವಿಚಿತ್ರ ವರ್ತನೆಯಾಗಿ ಕಂಡಿತು. ಗೇಬು ಮುಖಮಂಟಪದ ಮೂಲೆಯಲ್ಲಿ
ನಿಂತವನು ನಿಂತೇ ಇದ್ದ.
ಈ ಸುದ್ದಿ ತಿಳಿದಾಗ ರಾಜಧಾನಿಯಲ್ಲಿ ಯಾರು ಏನನ್ನ ಬಹುದು ಎಂಬು
ದನ್ನು ಟೆಹುಟಿ ಊಹಿಸಲೆತ್ನಿಸಿದ. ಅಮಾತ್ಯರು ಮೆಚ್ಚುಗೆ ಸೂಚಿಸುವರೊ
ಇಲ್ಲವೊ. ಆಸ್ಥಾನದಲ್ಲಿ, ಆಗದವರು ಕುಹಕ ನುಡಿ ಆಡಬಹುದು. ಈ
ಘಟನೆಯಿಂದ ತನಗೆ ಅನುಕೂಲವಾಗಬೇಕಾದರೆ, ಕಂದಾಯ ವಸೂಲಿಯಲ್ಲಿ‌‍