ಸೆಬೆಕ್ಖುವಿನ ಮನೆ ಇತರ ಸಣ್ಣ ಮನೆಗಳಿಗಿಂತ ಹೆಚ್ಚು ವಿಶಾಲ
ವಾಗಿತ್ತು. ಬಾಣ ತಗಲಿ ಗಾಯಗೊಂಡ ಐವರನ್ನು ಅಲ್ಲಿಗೆ ತಂದರು. ರಾಜ
ಗೃಹದಲ್ಲಿದ್ದ ಅರ್ಚಕ ವೈದ್ಯನ ನೆರವು ಆಗ ಸಿಗುವಂತಿರಲಿಲ್ಲ. ಅನುಭವಿ
ಹಿರಿಯರಿಬ್ಬರು ಔಷಧಿಯ ಎಲೆಗಳನ್ನು ತಂದು ಗಾಯಗಳಿಗೆ ಕಟ್ಟಿದರು; ರಕ್ತ
ಸ್ರಾವವನ್ನು ತಡೆದರು.
ಯಾವಾಗಲೂ ಕತ್ತಲಾದೊಡನೆ ಮೌನದ ಮುಸುಕು ಧರಿಸುವ ಊರು
ಈ ದಿನ ತೀವ್ರ ಚಟುವಟಿಕೆಯ ಶಿಬಿರವಾಯಿತು. ರಕ್ತ ಹರಿದುದನ್ನು ಕಂಡು
ಕಲ್ಲಾಯಿತು, ಜನರ ಮನಸ್ಸು.
ಯುವಕರು ಕೂಗಾಡಿದರು :
"ನಮಗೆ ಬಿಟ್ಬಿಡಿ ! ಮೆನೆಪ್ಟಾ ಅಣ್ಣನನ್ನು ನಾವು ಬಿಡಿಸ್ಕೊಂಡು
ಬರ್ತೇವೆ !"
ಇನ್ನೂ ಕೆಲವರೆಂದರು :
"ಅಣ್ಣನನ್ನು ಕಟ್ಟಿದ ಕಂಬಕ್ಕೇ ಆ ಕಂದಾಯ ಅಧಿಕಾರಿಯನ್ನು
ಬಿಗೀತೇವೆ !"
ಬಹಳ ಹೊತ್ತು ಹಣೆನೆರಿಗೆ ಕಟ್ಟಿದ್ದ ಸ್ನೊಫ್ರು ಅಂದ :
"ಈಗ ನಮ್ಮ ಗುರಿ ಏನು ? ಮೆನೆಪ್ಟಾನ ಬಿಡುಗಡೆ. ಅಷ್ಟು
ಮಾಡೋಣ. ನಮ್ಮ ವಿವಾದ ಕಂದಾಯಕ್ಕೆ ಸಂಬಂಧಿಸಿದ್ದು. ವಸೂಲಿ
ಶುರು ಮಾಡಿದಾಗ ಅದನ್ನು ನೋಡ್ಕೊಳ್ಳೋಣ."
ಸೆಬೆಕ್ಖುವಿನ ಅಳಿಯ ಖ್ನೆಮು ಹೊಟೆಪ್___ಪ್ರಾಂತದ ಹೆಸರಾಂತ
ಬಿಲ್ಗಾರ___ಸಿಟ್ಟಾಗಿ ನುಡಿದ :
"ಒಪ್ದೆ, ಸ್ನೊಫ್ರು ಮಾವ. ಆದರೆ ನಿಶ್ಯಸ್ತ್ರರನ್ನು ಇವತ್ತು ಬೇಟೆ
ಯಾಡಿದರಲ್ಲ ? ಅದಕ್ಕೆ ಶಿಕ್ಷೆ ? ದೇವರು ಮೆಚ್ಚೋ ಕೆಲಸಾನ ಅದು ?"
"ನನ್ನ ರಕ್ತವೂ ಕುದೀತಾ ಇದೆ ಖ್ನೆಮು. ಆದರೆ ಮೊದಲು ಆಗ
ಬೇಕಾದ್ದು ಯಾವ್ದೂಂತ ನೋಡೋದು ಬೇಡ್ವ ? ಮೆನೆಪ್ಟಾನ್ನ ಕಟ್ಟಿ
ಹಾಕಿ ಬೆಳಗಿನಿಂದ ಉಪವಾಸ ಕೆಡವಿದ್ದಾರೆ."
ಅಳಿಯನೊಡನೆ ವಾದಿಸಲು ಸೆಬೆಕ್ಖು ಬಾಯಿ ತೆರೆದ. ಅದನ್ನು
ಪುಟ:Mrutyunjaya.pdf/೧೦೭
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
೯೪
ಮೃತ್ಯುಂಜಯ
