ಪುಟ:Mrutyunjaya.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೯೫

ಗಮನಿಸಿದ. ಖ್ನೆಮ್‍ಹೊಟೆಪ್‍, ಮಾತನಾಡಲೂ ಮಾವನಿಗೆ ಅವಕಾಶ
ವೀಯದೆಯೇ, ಅವಸರವಾಗಿ ಅಂದ :
" ಸರಿ. ನಡೀರಿ. ಹೋಗೋಣ; ಪಂಜುಗಳನ್ನ ಉರಿಸಿ ! ಗೋಡೆ
ಹತ್ತೋಕೆ ನಾಲ್ಕೈದು ಏಣಿ ತಗೊಳ್ಳಿ ! ಬಾಗಿಲು ಮುರಿಯೋಕೆ ಒಂದು
ತಾಳೆದಿಮ್ಮಿ ! ಹೊರಡಿ ! ಹೊರಡಿ !"
ಅಮಾವಾಸ್ಯೆಯ ಅನಂತರದ ಬಾಲ ಚಂದ್ರ. ನಸು ಬೆಳಕು. ಸಂಜೆ
ನೆರೆದವರು ಉದ್ರಿಕ್ತರು. ರಾತ್ರೆ ಹೊರಟವರು ಕ್ರುದ್ಧರು.
ನೂರಾರು ಕೈಗಳಲ್ಲಿ ಪಂಜುಗಳು; ನೂರಾರು ಕೈಗಳಲ್ಲಿ ತಾಳೆಕೊರಡು
ಗಳು, ಬಡಿಗೆಗಳು, ಗದೆಗಳು. ಹತ್ತು ಹದಿನೈದು ಜನ ಹೊತ್ತ ತಾಳೆದಿಮ್ಮಿ,
ಏಣಿಗಳು.
ಖ್ನೆಮ್‍ಹೊಟೆಪ್ ಬಿಲ್ಲನ್ನು ಭುಜಕ್ಕೇರಿಸಿ ಬಂದಿದ್ದ ಬತ್ತಳಿಕೆಯ
ತುಂಬಾ ಬಾಣಗಳಿದ್ದುವು. ಗುಂಪಿನ ನಡುವೆ ಚಲಿಸುತ್ತ, ಜನರನ್ನು ಅವನು
ಹುರಿದುಂಬಿಸಿದ :
" ನಮ್ಮದು ದೇವರ ಪಕ್ಷ ! ಜಯ ನಮಗೆ ! ನಾವು ಸನ್ನದ್ಧರು !
ನಮಗೆ ಸೋಲಿಲ್ಲ."
ಸ್ನೊಫ್ರು ಹತ್ತಿರಕ್ಕೆ ಸರಿದು ಖ್ನೆಮ್‍ಹೊಟೆಪ್‍ನ ಕಿವಿಯಲ್ಲಿ
ಉಸುರಿದ :
" ನಾವು ದುಡುಕಬಾರದು; ಮೆನೆಪ್‍ಟಾ ಒಳಗಿದ್ದಾನೆ. ಅವನಿಗೆ
ಅವರೇನಾದರೂ ಮಾಡ್ಬಹುದು."
" ಸೊಫ್ರುಮಾವ, ಬಾಗಿಲು ಮುರಿಯೋದು ನಿಮ್ಮ ಜವಾಬ್ದಾರಿ.
ಕಾವಲು ಭಟರೆಲ್ಲ ಲಗ್ಗೆ ಹತ್ತೋರನ್ನು ತಳ್ತಾ ಇರ್ತಾರೆ. ಮೆನೆಪ್‍ಟಾ ಅಣ್ಣನ
ಹತ್ತಿರಕ್ಕೆ ಯಾರಾದರೂ ಸುಳಿದರೆ ನಾನು ನೋಡ್ಕೋತೇನೆ.”
ಸ್ನೊಫ್ರುವಿನ ಆತಂಕ ಬಗೆಹರಿಯಿತು.

****

ರಾಜಗೃಹದಲ್ಲಿ ನೂರಾರು ಕಂಚಿನ ದೀಪಗಳು ಢಾಳಾಗಿ ಉರಿಯು