ಪುಟ:Mrutyunjaya.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೬

ಮೃತ್ಯುಂಜಯ

ತ್ತಿದ್ದುವು. ಬರುತ್ತಿದ್ದ ಜನ ಪ್ರಾಕಾರದ ಮೇಲಿನ ಕಾವಲು ಭಟರ ಕಿರಿಯ
ಆಕೃತಿಗಳನ್ನು ದೂರದಿಂದಲೇ ಕಂಡರು.
ಮೆನೆಪ್‍ಟಾನ ಮೇಲೆ ಸಭಾಮಂದಿರದ ದೊಡ್ಡ ದೀಪಗಳು ಬೆಳಕು
ಬೀರುತ್ತಿದ್ದುವು.
ಎಲ್ಲರಿಗೂ ಕೇಳಿಸುವಂತೆ ಇಪ್ಯುವರ್ ಗಟ್ಟಿಯಾಗಿ ಅಂದ :
" ಪಂಜುಗಳು ಕಾಣಿಸ್ತಿವೆ; ಬರ್ತಿದ್ದಾರೆ."
ಘೋಷಗಳಿಲ್ಲದೆಯೇ ಸಮೀಪಿಸುತ್ತಿದ್ದ ಜನಸಮುದಾಯ. ಸಭಾ
ಮಂದಿರದಲ್ಲೂ ಮೇಲ್ಗಡೆಯೂ ನೀರವತೆ ಹೆಪುಗಟ್ಟತೊಡಗಿತು. ಬಕಿಲನ
ಕರ್ಕಶ ಗಂಟಲೊಂದೇ ಆ ಗಡ್ಡೆಗೆ ಬೀಳುತ್ತಿದ್ದ ಕೊಡಲಿ ಏಟು.
ಜನರು ರಾಜಗೃಹವನ್ನು ಸಮೀಪಿಸಿದಂತೆ ಅವರ ಪದಹತಿಯ ಸಪ್ಪಳದ
ಹೊರತು ಬೇರೇನೂ ಕೇಳಿಸುತ್ತಿರಲಿಲ್ಲ. ಅದು ಒಂದೇ ಎದೆಗುಂಡಿಗೆಯ
ಬಡಿತದಂತಿತ್ತು.
ಕೆಳಗೆ ಭೂಮಾಲಿಕರು, ಅಪೆಟ್, ಇಪ್ಯುವರ್ ತುದಿಗಾಲಿನ ಮೇಲೆ
ನಿಂತರು. ಮೇಲ್ಗಡೆ ಟೆಹುಟಿ ಮತ್ತು ಗೇಬು. ಇಳಿಬಿಟ್ಟಿದ್ದ ಬಣ್ಣದ
ಚಾಪೆಗಳನ್ನು ತುಸು ಸರಿಸಿ, ಕೆಳಕ್ಕೆ ಇಣಿಕಿ ನೋಡಿದರು ಮಹಾದ್ವಾರದ
ಬಳಿ ಗೋಡೆಯ ಮೇಲೆ ಎಲ್ಲರ ದೃಷ್ಟಿಗಳ ಕೇಂದ್ರ ಬಿಂದುವಾಗಿ ಬಕಿಲ
ನಿಂತಿದ್ದ.
ರಾಜಗೃಹದ ಮಹಾದ್ವಾರ ತಲಪಿದವೆಂದು ಸಾರಿತು, ಸ್ನೊಫ್ರುವಿನ
ಕಂಠ:
" ಓ ಮೆನೆಪ್‍ಟಾ ! ಓ ಮೆನೆಪ್‍ಟಾ !"
ಅದಕ್ಕೆ ದೊರೆಯಿತು, ಜನರೆಲ್ಲರ ಒಕ್ಕೊರಲಿನ ಮಾರ್ದನಿ :
" ಓ ಮೆನೆಪ್‍ಟಾ ! ಓ ಮೆನೆಪ್‍ಟಾ !"
ದಿಮ್ಮಿ ಬಾಗಿಲ ಬಳಿ ಬಂತು. ಏಣಿಗಳು ಗೋಡೆಗೆ ಒರಗಿದುವು.
ಖ್ನೆಮ್‍ಹೊಟೆಪ್ ಹತ್ತಿರವೇ ಮರೆಯಲ್ಲಿದ್ದ ತಾಳೆಯ ಮರವನ್ನೇರಿದ.
ಕಾವಲು ಭಟರ ವಶ ಇದ್ದುದು, ಕೆಲವೇ ಬಾಣಗಳು. ಅವುಗಳ
ಪ್ರಯೋಗ ಕೊನೆಯ ಹಂತದಲ್ಲಿ, ಎಂದು ಬಕಿಲ ಸೂಚಿಸಿದ್ದ. ಏಣಿಯಲ್ಲಿ